ಉಜಿರೆ: ಇಂದು ವೈಕುಂಠ ಏಕಾದಶಿಯ ಸಡಗರ ಮನೆಮಾಡಿದೆ. ಈ ಪವಿತ್ರ ದಿನದಂದು ಉಜಿರೆಯ ಪ್ರಸಿದ್ಧ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಧನುರ್ಮಾಸ ಪೂಜೆ ಹಾಗೂ ವೈವಿಧ್ಯಮಯ ಅಲಂಕಾರಗಳೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತಿದೆ.

ಶ್ರೀ ಜನಾರ್ದನನಿಗೆ ವೈಭವದ ಅಲಂಕಾರ ಧನುರ್ಮಾಸದ ಹಿನ್ನೆಲೆಯಲ್ಲಿ ಮುಂಜಾನೆಯೇ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಶ್ರೀ ಜನಾರ್ದನ ಸ್ವಾಮಿಗೆ ವಿಶೇಷವಾಗಿ ಪುಷ್ಪಾಲಂಕಾರ ಹಾಗೂ ಆಭರಣಗಳಿಂದ ಶೃಂಗರಿಸಲಾಗಿತ್ತು. ತುಳಸಿ ಮಾಲೆ ಹಾಗೂ ಸುಗಂಧಭರಿತ ಹೂವುಗಳಿಂದ ಸಜ್ಜಾದ ಸ್ವಾಮಿಯ ರೂಪ ಭಕ್ತರ ಕಣ್ಮನ ಸೆಳೆಯುತ್ತಿದೆ.






