ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿಯ 2ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಮ್ಮಾಝ್ ತಮಿಳುನಾಡಿನ ಕೊಯಂಮತ್ತೂರು ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೆಲ್. ಬಿ.ಗ್ರಾಂಡ್ ಫಿನಾಲೆಯಲ್ಲಿ ರಾಷ್ಟ್ರಕ್ಕೆ 20ನೇಯ ರಾಂಕ್ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾನೆ.

ಹಾಗೂ ಇದೇ ಶಾಲೆಯ 2ನೇ ತರಗತಿಯ ಮಹಮ್ಮದ್ ಶಯಾನ್ 105 ನೇ ರಾಂಕ್ ಪಡೆದಿದ್ದಾರೆ. ಶಮ್ಮಾಝ್ ಇವರು ಗುರುವಾಯನಕೆರೆಯ ಶಮಿಮಾ ಭಾನು ಮತ್ತು ಅಬ್ದುಲ್ ರಿಯಾಝ್ ದಂಪತಿಗಳ ಪುತ್ರರಾಗಿದ್ದಾರೆ. ಈ ವಿದ್ಯಾರ್ಥಿಗಳು ಶಾಲೆಯ ಆಡಳಿತ ಟ್ರಸ್ಟ್, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಅಭಿನಂದನೆಗೆ ಪಾತ್ರರಾಗಿದ್ದಾರೆ.





