ಉಜಿರೆ: ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕಲಾಕೇಂದ್ರದ ಯಕ್ಷಗಾನ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ಲೀಲೆ – ಕಂಸ ವಧೆ’ ಇಂಗ್ಲಿಷ್ ತಾಳಮದ್ದಳೆ ಪ್ರಸ್ತುತಿ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ನಡೆಯಿತು.
ಇದನ್ನೂ ಓದಿ: ಬೆಳ್ತಂಗಡಿ: ಭೀಮಾ ಕೋರೆಗಾಂವ್ ವಿಜಯೋತ್ಸವದ ದಿನಾಚರಣೆ – ಸ್ವಾಭಿಮಾನಿ ದಿಗ್ವಿಜಯ ಹಾಗೂ BVF ಪದಗ್ರಹಣ
ಭಾಗವತಿಕೆಯಲ್ಲಿ ದ್ವಿತೀಯ ಪದವಿ ವಿದ್ಯಾರ್ಥಿನಿ ಸಿಂಚನ ಮೂಡುಕೋಡಿ, ಚೆಂಡೆಯಲ್ಲಿ ಸಂಸ್ಕೃತ ವಿಭಾಗದ ಉಪನ್ಯಾಸಕ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಧನ್ವ ಪಾಲ್ಪಡೆದರು.
ತೃತೀಯ ಪದವಿ ವಿದ್ಯಾರ್ಥಿಗಳಾದ ಮೌಲ್ಯ ಎಸ್. ಜೈನ್ (ಶ್ರೀಕೃಷ್ಣ), ಅಂಕಿತ (ಬಲರಾಮ), ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಮನಸ್ವಿ (ಪೂತನಿ), ನಿರಂಜನ್ (ಶಕಟ), ಪ್ರಥಮ ಪದವಿ ವಿದ್ಯಾರ್ಥಿಗಳಾದ ಅನನ್ಯ ಶೆಟ್ಟಿ (ಮಾಯಾ ಪೂತನಿ), ತೇಜಸ್ (ವಿಜಯ), ವರುಣ್ (ಕಂಸ) ಅರ್ಥಧಾರಿಗಳಾಗಿದ್ದರು.


ಕಲಾಕೇಂದ್ರದ ಯಕ್ಷಗಾನ ಗುರು ಅರುಣ್ ಕುಮಾರ್ ಧರ್ಮಸ್ಥಳ ತಾಳಮದ್ದಳೆ ನಿರ್ದೇಶಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ದಿವಾಕರ ಪಟವರ್ಧನ್, ಆಂಗ್ಲ ಭಾಷೆ ವಿಭಾಗ ಮುಖ್ಯಸ್ಥ ಗಜಾನನ ಆರ್. ಭಟ್, ಸಾಂಸ್ಕೃತಿಕ ಸಮಿತಿ ಸಂಯೋಜಕ ಡಾ. ನಾಗಣ್ಣ ಡಿ.ಎ., ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ, ಉಪನ್ಯಾಸಕರಾದ ಸಚಿನ್ ಹೆಬ್ಬಾರ್, ಡಾ. ಲಕ್ಷ್ಮೀನಾರಾಯಣ ಕೆ.ಎಸ್., ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್., ಇಂಗ್ಲಿಷ್ ಉಪನ್ಯಾಸಕರಾದ ಸೂರ್ಯನಾರಾಯಣ, ದೀಪಕ್ ಶರ್ಮ, ಭಾಗ್ಯಶ್ರೀ ಹಾಗೂ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಿಂಚನ ಸ್ವಾಗತಿಸಿದರು. ಸಿಂಚನ, ಸಾಕ್ಷ, ಶ್ವೇತಾ, ಯಶ್ಮಿತಾ ಪ್ರಾರ್ಥಿಸಿದರು. ಪವಿತ್ರ ಜೈನ್ ನಿರೂಪಿಸಿ, ಅಮೋಘ ಶಂಕರ್ ವಂದಿಸಿದರು.


