Sat. Jan 3rd, 2026

Belthangady: ಭೀಮಾ ಕೋರೆಗಾಂವ್ ವಿಜಯೋತ್ಸವದ ದಿನಾಚರಣೆ – ಸ್ವಾಭಿಮಾನಿ ದಿಗ್ವಿಜಯ ಹಾಗೂ BVF ಪದಗ್ರಹಣ

ಬೆಳ್ತಂಗಡಿ: ತಾಲೂಕಿನ ಕಣಿಯೂರು, ಬಂದಾರು, ಮೊಗ್ರು ಹಾಗೂ ಕೊಯ್ಯೂರು ಗ್ರಾಮಗಳ ಬಂಧುಗಳು ಬಂದಾರು ಗ್ರಾಮದ ಸಿದ್ಧಾರ್ಥ ಕಾಲೋನಿ ಪುನರಡ್ಕದಲ್ಲಿ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ದಿನಾಚರಣೆ ಪ್ರಯಕ್ತ ಸ್ವಾಭಿಮಾನಿ ದಿಗ್ವಿಜಯ ಹಾಗೂ BVF ಪದಗ್ರಹಣ ಕಾರ್ಯಕ್ರಮವನ್ನು ಜ.1 ರಂದು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಬೆಳ್ತಂಗಡಿ: ಮಾರ್ಚ್ 1 ರಿಂದ 9ರವರೆಗೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ

ಬಹುಜನ ವಾಲೆಂಟಿಯರ್ ಫೋರ್ಸ್ ಬೆಳ್ತಂಗಡಿ ನೇತೃತ್ವ ವಹಿಸಿ ನಡೆದ ಈ ಕಾರ್ಯಕ್ರಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಈ ಪ್ರಪಂಚಕ್ಕೆ ಪರಿಚಯಿಸಿದ 1818 ಜನವರಿ 1 ಕೋರೆಗಾಂವ್ ಕದನ ದ ಇತಿಹಾಸವನ್ನು ತಿಳಿ ಹೇಳುವ ಮೂಲಕ ಆಚರಿಸಲಾಯಿತು.

ಕೋರೆಗಾಂವ್ ಕದನದ ಸ್ವಾಭಿಮಾನ ದಿಗ್ವಿಜಯದ ಪರಿಣಾಮ ಈ ದೇಶದಲ್ಲಿ ಸಾರ್ವತ್ರಿಕ ಶಿಕ್ಷಣಕ್ಕೆ ನಾಂದಿಯಾಯಿತು. ಆ ಮೂಲಕ ಶಿಕ್ಷಣದ ಅವಕಾಶ ಪಡೆದಂತಹ ಅಂಬೇಡ್ಕರ್ ರವರು ಈ ದೇಶದ ಸಂವಿಧಾನ ರಚಿಸಿ ಸರ್ವರಿಗೂ ಸಮತೆ, ಸೋದರತೆ, ಸ್ವತಂತ್ರ ಜೀವನ ಕಾನೂನುಬದ್ಧಗೊಳಿಸಿದರು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪಿ.ಎಸ್. ವೆಂಕಪ್ಪ ತಿಳಿಸಿದರು. ಕಾರ್ಯಕ್ರಮದಲ್ಲಿ ಬಹುಜನ ಚಳುವಳಿಯ ಪ್ರಮುಖರಾದ ಎಂ ಬಾಬು ಬೆಳಾಲು , ಸಂಜೀವ ನೀರಾಡಿ, ಅಣ್ಣು ಸಾಧನ ಹಾಗೂ ಕರಿಯಪ್ಪ ಬೆಳಾಲು ಅಥಿತಿಗಳಾಗಿ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಸಿದ್ಧಾರ್ಥ ಕಾಲೋನಿಯ ಹಿರಿಯರಾದ ಗೋಪಾಲ ಅತಿಥಿಯಾಗಿ ಭಾಗವಹಿಸಿದರು.

BVF ನ ಬಂದಾರು, ಕೊಯ್ಯೂರು, ಕಣಿಯೂರು ಗ್ರಾಮದ ಜವಾಬ್ದಾರಿಗಳನ್ನು ಹಂಚಿಕೊಂಡ ನೂತನ ಪದಾಧಿಕಾರಿಗಳನ್ನು ಪರಿಚಯಿಸಿ ಅಭಿನಂದಿಸಲಾಯಿತು.
BVF ನ ಲೋಕೇಶ್ ನೀರಾಡಿ ಸಂವಿಧಾನದ ಪೀಠಿಕೆ ಬೋಧಿಸಿ, ರಮೇಶ್ B L ಕಾರ್ಯಕ್ರಮ ನಿರೂಪಿಸಿದರು. ದಿನೇಶ್ P ಸ್ವಾಗತಿಸಿದರು, ಪ್ರವೀಣ್ ಪುನರಡ್ಕ ಧನ್ಯವಾದವಿತ್ತರು. ಈ ಕಾರ್ಯಕ್ರಮದಲ್ಲಿ ಪಿ ಎಸ್ ಶ್ರೀನಿವಾಸ್, ಕೃಷ್ಣಪ್ಪ ಪಿ ಪೂವಪ್ಪ ಬೆಳಾಲು, ಪ್ರವೀಣ್, ಲೋಹಿತ್, ಅನಂತ್ ಪಿ, ರಮೇಶ್ ಉಮಿಯ, ನವೀನ್, ಗಣೇಶ್ ಕೆ, ಪ್ರಶಾಂತ್, ಕೆ.ವೀರಪ್ಪ, ಕೃಷ್ಣ, ರಘು, ಸುರೇಶ್ ನೀರಾಡಿ, ಬಿ ಕೆ ಸಂಜೀವ, ಸತೀಶ್, ಸುರೇಂದ್ರ, ಪ್ರಕಾಶ್, ವಸಂತ್, ಸಿದ್ದಾರ್ಥ ಮತ್ತು ಮಹಿಳಾ ಘಟಕದ ಅದ್ಯಕ್ಷರು ಉಪಾಧ್ಯಕ್ಷರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *