ಉಜಿರೆ: ವ್ಯಾಸ ವಿರಚಿತ ಮಹಾಭಾರತ, ಕುಮಾರವ್ಯಾಸ ಭಾರತ, ಭಗವದ್ಗೀತೆ ಹಾಗೂ ಇತರ ಕೆಲವು ಪೌರಾಣಿಕ ಆಕರಗಳಿಂದ ಪ್ರೇರಿತಗೊಂಡಿರುವ, ಉಜಿರೆಯ ಎಸ್.ಡಿ.ಎಂ. ಕಲಾ ಕೇಂದ್ರ ಪ್ರಸ್ತುತಪಡಿಸಿದ ‘ಭೀಷ್ಮಾಸ್ತಮಾನ’ ನಾಟಕದ 11ನೇ ಪ್ರದರ್ಶನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿ.23ರಂದು ಕಿರು ಷಷ್ಠಿ ಪ್ರಯುಕ್ತ ನಡೆಯಿತು.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ “ಶ್ರೀಕೃಷ್ಣ ಲೀಲೆ – ಕಂಸ ವಧೆ” ಇಂಗ್ಲಿಷ್ ತಾಳಮದ್ದಳೆ
ಎಸ್.ಡಿ.ಎಂ. ಕಾಲೇಜಿನ ಹಳೆ ವಿದ್ಯಾರ್ಥಿ ಸ್ಕಂದ ಭಾರ್ಗವ ರಚಿಸಿ, ಎಸ್.ಡಿ.ಎಂ. ಕಲಾ ಕೇಂದ್ರದ ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ನೀನಾಸಂ) ನಿರ್ದೇಶಿಸಿದ, ಹಳೆ ವಿದ್ಯಾರ್ಥಿಗಳಾದ ಮದನ್ ಎಂ. ಹಾಗೂ ಸುಬ್ರಹ್ಮಣ್ಯ ಜಿ. ಭಟ್ ಸಂಗೀತ ನಿರ್ದೇಶನದ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಥಮ ಎಂಸಿಜೆ ವಿದ್ಯಾರ್ಥಿ ಸುಜಿತ್ (ಧೃತರಾಷ್ಟ್ರ), ಪ್ರಥಮ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿ ರಾಜೇಶ್ (ಭೀಷ್ಮ), ಹಳೆ ವಿದ್ಯಾರ್ಥಿನಿ ಸೋನಾಕ್ಷಿ (ಗಾಂಧಾರಿ), ತೃತೀಯ ಪದವಿ ವಿದ್ಯಾರ್ಥಿಗಳಾದ ನೂತನ್ (ಕೃಷ್ಣ), ಭೂಷಣ್ (ಅರ್ಜುನ), ಅಕ್ಷರಿ (ಶಿಖಂಡಿ), ಆದಿತ್ಯ (ಸಂಜಯ), ಮಾಧವ್ (ಭೀಮಸೇನ), ಆಯುಷ್ಮಾನ್ (ಧರ್ಮರಾಯ), ಜ್ಯೋತಿಕಾ, ಜೋತ್ಸ್ನ (ಸೂತ್ರಧಾರ), ಅಶ್ವಿತ್ (ದುರ್ಯೋಧನ), ಮಹಿಕ್ (ದುಶ್ಯಾಸನ), ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಲಾವಣ್ಯ (ದ್ರೌಪದಿ), ಆದರ್ಶ್ (ಕರ್ಣ), ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನನ್ಯ (ಗಂಗೆ) ಪ್ರಮುಖ ಪಾತ್ರಗಳಿಗೆ ಜೀವ ತುಂಬಿದರು.
ಮೇಳದಲ್ಲಿ ತೃತೀಯ ಪದವಿ ವಿದ್ಯಾರ್ಥಿ ಕನಿಷ್ಕ, ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಅನ್ವೇಷ್, ರೇಷ್ಮಾ, ಪ್ರಥಮ ಪದವಿ ವಿದ್ಯಾರ್ಥಿಗಳಾದ ಉಜ್ವಲ್, ಜಯಲಕ್ಷ್ಮಿ ಪಾತ್ರ ನಿರ್ವಹಿಸಿದರು.

ಸಂಗೀತದಲ್ಲಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಅಮಿತ್ ಕುಮಾರ್, ವಿದ್ಯಾರ್ಥಿಗಳಾದ ವೈಶಾಕ್, ಆದಿತ್ಯ, ಜೋತ್ಸ್ನ, ಪಾವನಿ ಹಾಗೂ ಪಕ್ಕವಾದ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪ್ರಣವ್ ಹಾಗೂ ಆದಿತ್ಯ ಸಹಕರಿಸಿದರು.



