ಉಜಿರೆ: ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಭವ್ಯ ರಾಜಗೋಪುರದ ನಿರ್ಮಾಣ ಕಾರ್ಯಕ್ಕೆ ಎಕ್ಸೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಜೈನ್ ಅವರು ಆರ್ಥಿಕ ಸಹಕಾರ ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ.

ರಾಜಗೋಪುರ ನಿರ್ಮಾಣದ ಉದ್ದೇಶಕ್ಕಾಗಿ ಅವರು ತಮ್ಮ ಮೊದಲನೇ ಕಂತಿನ ದೇಣಿಗೆಯಾಗಿ ರೂ. 3,00,000/- (ಮೂರು ಲಕ್ಷ ರೂಪಾಯಿ) ಗಳ ಚೆಕ್ಕನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರು ಉಪಸ್ಥಿತರಿದ್ದರು.





