ಕಾಶಿಪಟ್ಣ: ತುಳುನಾಡಿನ ಸಮೃದ್ಧ ಜನಪದ ಕಲೆ ಮತ್ತು ನಾಟಕ ರಂಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಶಿಪಟ್ಣದಲ್ಲಿ ಒಂದು ವಿಶೇಷ ಸಾಂಸ್ಕೃತಿಕ ಸಂಜೆ ಸಜ್ಜಾಗಿದೆ. ಭಾರತೀಯ ಜನತಾ ಪಾರ್ಟಿ ಕಾಶಿಪಟ್ಣ ಇದರ ಆಶ್ರಯದಲ್ಲಿ ಜನವರಿ 17 ಶನಿವಾರ ಸಂಜೆ 7:00 ಗಂಟೆಗೆ “ಜೋಡು ಜೀಟಿಗೆ” ಅದ್ಧೂರಿ ತುಳು ಜನಪದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.


ಬಿಜೆಪಿ ಕಾಶಿಪಟ್ಣ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವು ಕರಾವಳಿಯ ವಿಶಿಷ್ಟ ಜಾನಪದ ಸೊಗಡನ್ನು ಅನಾವರಣಗೊಳಿಸಲಿದೆ. ‘ಜೋಡು ಜೀಟಿಗೆ’ ನಾಟಕವು ತನ್ನ ವಿಭಿನ್ನ ಕಥಾವಸ್ತು ಮತ್ತು ಕಲಾವಿದರ ನೈಪುಣ್ಯತೆಯಿಂದ ಈಗಾಗಲೇ ಜನಮನ್ನಣೆ ಗಳಿಸಿದ್ದು, ಈಗ ಕಾಶಿಪಟ್ಣದ ದೇವಸ್ಥಾನದ ವಠಾರದಲ್ಲಿ ರಂಗವೇರಲಿದೆ.





