ಬೆಳಾಲು: ಜನವರಿ 11ನೇ ಆದಿತ್ಯವಾರದಂದು ಬೆಲಾಲು ಗುತ್ತು ಮನೆಯಲ್ಲಿ ಇದೇ ಬರುವ 24ನೇ ತಾರೀಕು ಶನಿವಾರದಂದು ನಡೆಯುವ ರಾಜನ್ ದೈವವಾದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ” ಕಲ್ಕುಡ ಕಲ್ಲುರ್ಟಿ ದೈವಗಳ ಉತ್ಸವ ಹಾಗೂ ಮಾರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪರಿವಾರ ದೈವಗಳ ಆಸ್ರಣ್ಣರಾದ ಗಿರೀಶ್ ಬಾರಿತಾಯ ಪಾರಳ, ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀನಿವಾಸಗೌಡ ವಕೀಲರು ಶ್ರೀ ಸೌಧ, ಗೌರವ ಸಲಹೆಗಾರರಾದ ಲಿಂಗಪ್ಪ ಪೂಜಾರಿ ಬನoದೂರು, ದೀಲಿಪ್ ಕುಮಾರ್ ಜೈನ್, ಗೌರವಾಧ್ಯಕ್ಷರಾದ ಸೂರಪ್ಪ ಗೌಡ ಭಂಡಾರಿ ಮಜಲು ಅಧ್ಯಕ್ಷರಾದ ನೀಲಯ್ಯ ಗೌಡ ಭೀಮಂಡೆ , ಪ್ರಧಾನ ಕಾರ್ಯದರ್ಶಿಯಾದ ಶ್ರೀನಿವಾಸ ಗೌಡ ಗಣಪನ ಗುತ್ತು,ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಉಪ ಸಮಿತಿಯ ಸಂಚಾಲಕರು ಹಾಗೂ ಸದಸ್ಯರುಗಳು ಹಾಜರಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.





