ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಕಬ್ ಬುಲ್ ಬುಲ್ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಂದ ರಸ್ತೆ ಸಪ್ತಾಹ ದ ಅಂಗವಾಗಿ , ವೇಗ ನಿಯಂತ್ರಣ, ಅಪಘಾತ ತಡೆಗಟ್ಟುವಿಕೆ ,ರಸ್ತೆ ಸುರಕ್ಷತೆಯ ಮಾಹಿತಿ ಕಾರ್ಯಗಾರವು ನಡೆಯಿತು.

ವಾಹನ ಚಲಾಯಿಸಲು ವಯಸ್ಸಿನ ಮಿತಿ, ಹಾಗೂ ಯಾವೆಲ್ಲ ದಾಖಲೆಗಳನ್ನು ವಾಹನ ಸವಾರರು ಹೊಂದಿರಬೇಕು. ಎಂಬುದರ ಬಗ್ಗೆ ಕಿಶೋರ್ ಪಿ ಸಬ್ ಇನ್ಸ್ಪೆಕ್ಟರ್ ಸಂಚಾರಿ ಪೋಲಿಸ್ ಠಾಣೆ ಬೆಳ್ತಂಗಡಿ ಮಾಹಿತಿ ನೀಡಿದರು. ಅಲ್ಲದೆ ಬೆಳ್ತಂಗಡಿ ನಗರಗಳಲ್ಲಿ ಜಾಥದ ಮೂಲಕ ಘೋಷಣೆಗಳೊಂದಿಗೆ ಸಂಚರಿಸುತ್ತ ನಾಗರಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಹೇಮಲತಾ ಎಮ್ ಆರ್ ಉಪಸ್ಥಿತರಿದ್ದರು. ಭಾರತ್ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಕಾರ್ಯಕ್ರಮ ಸಂಘಟಿಸಿ ಸ್ವಾಗತಿಸಿ ವಂದಿಸಿದರು.


ಸ್ಕೌಟ್ಸ್ ಶಿಕ್ಷಕಿಯರಾದ ಕಾರುಣ್ಯ ,ಪ್ರಮೀಳ ಎನ್, ಮಂಜುನಾಥ್, ಜಯರಾಮ್, ನೀತಾ ಕೆ ಎಸ್, ಜಯಲಕ್ಷ್ಮಿ, ಅಮಿತಾ, ಸೌಮ್ಯ ಪಿ, ಮೋಹಿನಿ, ಪುಷ್ಪಲತಾ ಗೀತಾ ಪಿ ,ರಮ್ಯಾ ಬಿ ಎಸ್ ರವರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಗೊಂಡಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಬ್ಬು ಬುಲ್ ಬುಲ್ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂಪೂರ್ಣ ಸಹಕಾರವನ್ನು ನೀಡಿದರು.



