ಬೆಳ್ತಂಗಡಿ: ಸ್ವಾಮಿ ವಿವೇಕಾನಂದರ ವಿಚಾರಗಳು ವೇದಾಂತ, ಯೋಗ, ಆಧ್ಯಾತ್ಮಿಕತೆ, ರಾಷ್ಟ್ರೀಯತೆ ಮತ್ತು ಮಾನವೀಯ ಸೇವೆಯ ಸುತ್ತ ಕೇಂದ್ರೀಕೃತವಾಗಿವೆ. ಅವರು “ಎದ್ದೇಳು, ಎಚ್ಚರಗೊಳ್ಳಿ, ಗುರಿ ತಲುಪುವವರೆಗೆ ನಿಲ್ಲಬೇಡಿ” ಎಂದು ಕರೆ ನೀಡಿದರು.

ಪ್ರತಿ ವ್ಯಕ್ತಿಯೊಳಗಿನ ದೈವತ್ವದ ಮೇಲೆ ನಂಬಿಕೆ, ಆತ್ಮವಿಶ್ವಾಸ, ಇಂದ್ರಿಯ ನಿಗ್ರಹ, ನಿರಂತರ ಕಲಿಕೆ, ದೇಶಭಕ್ತಿ ಮತ್ತು ಬಡವರ ಸೇವೆಯನ್ನು ಅವರ ಮುಖ್ಯ ಬೋಧನೆಗಳಲ್ಲಿ ಸೇರಿವೆ. ಅವರು ಭಾರತೀಯ ಸಂಸ್ಕೃೃತಿ ಮತ್ತು ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಕರೆ ನೀಡಿದರು.
ಮುಂದಿನ ಪೀಳಿಗೆಯ ಆದರ್ಶ ಪ್ರಜೆಗಳು ಮತ್ತು ಸನಾತನ ಸಂರಕ್ಷಕರಾದ ಶ್ರೀರಾಮ ಶಿಶು ಮಂದಿರದ ಪುಟಾಣಿಗಳು ಇವರ ಜನುಮ ದಿನವನ್ನು ಗೌರವಾರ್ಪಣೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮಾನ್ ಬಾಲಕೃಷ್ಣ ಗೌಡ, ಸದಸ್ಯರು ಗ್ರಾಮ ಪಂಚಾಯಿತಿ ಬಂದಾರು, ಇವರು ಯುವ ದಿನವನ್ನು ಆಚರಿಸುವ ಮಹತ್ವವನ್ನು, ಮತ್ತು ವಿವೇಕಾನಂದರ ವಿಚಾರ ಧಾರೆಗಳನ್ನು ಬಹಳ ಚಂದವಾಗಿ ಮಕ್ಕಳಿಗೆ ವಿವರಿಸಿದರು. ಶ್ರೀಮಾನ್ ಕೇಶವ ಜಾಲ್ನಡೆ ಮತ್ತು ಶ್ರೀಮಾನ್ ರಮೇಶ್ ನೆಕ್ಕರಜೆ ಉಪಸ್ಥಿತರಿದ್ದರು.




