ಕೇರಳ:(ನ.18) ರಸ್ತೆಯಲ್ಲಿ ರೋಗಿ ಇದ್ದ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡದೆ ಸತಾಯಿಸಿದ್ದ ಕಾರು ಚಾಲಕನಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದು, ಬರೊಬ್ಬರಿ 2.5ಲಕ್ಷ ರೂ ದಂಡ ವಿಧಿಸಿದ್ದು ಮಾತ್ರವಲ್ಲದೇ ಆತನ ಚಾಲನಾ ಪರವಾನಗಿಯನ್ನೇ ರದ್ದು ಮಾಡಿದ್ದಾರೆ.
ಇದನ್ನೂ ಓದಿ: ⭕ಮಂಗಳೂರು: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು ಪ್ರಕರಣ
ಕೇರಳದ ತಿರುವನಂತಪುರದಲ್ಲಿ ಈ ಘಟನೆ ವರದಿಯಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಚಾಲಕ ಹಾರ್ನ್ ಮಾಡಿದ್ದಾರೆ.
ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ಬೇಕೆಂದೇ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಉದ್ಧಟತನ ಪ್ರದರ್ಶನ ಮಾಡಿದ್ದಾನೆ. ಪದೇ ಪದೇ ಆ್ಯಂಬುಲೆನ್ಸ್ ಗೆ ಅಡ್ಡ ಬಂದು ರೋಗಿಯ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ.
ಸದ್ಯ ಪುಂಡಾಟಿಕೆಯ ವೀಡಿಯೋ ವೈರಲ್ ಆಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.