ಮೇಷ ರಾಶಿ :ದುರಭ್ಯಾಸಗಳು ನಿಮಗೆ ಅಪಕೀರ್ತಿ ಕಾಣಿಸೀತು. ಯಾವುದನ್ನೇ ಒಪ್ಪಿಕೊಳ್ಳುವುದಾದರೂ ನಿಮಗೆ ಬಲವಾದ ಕಾರಣ ಬೇಕಾಗುತ್ತದೆ. ಇಂದು ನಿಮ್ಮ ವ್ಯಾಪಾರದಲ್ಲಿ ಕಠಿಣ ಶ್ರಮವಿದ್ದೂ ಕಡಿಮೆ ಲಾಭವನ್ನು ಪಡೆಯಬೇಕಾಗುವುದು. ಇಂದಿನ ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಪುಣ್ಯಸ್ಥಳಕ್ಕೆ ಕಾರಣಾಂತರಗಳಿಂದ ಹೋಗಲಾಗದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು.
ವೃಷಭ ರಾಶಿ :ಸರಿಯಾದ ಸಮಯಕ್ಕೆ ಸೂಕ್ತವಾದ ಕೆಲಸವು ಆಗಿಬಿಡುವುದು. ಯಾವುದನ್ನೇ ಪಡೆಯುವುದಿದ್ದರೂ ಸುಲಭಕ್ಕೆ ಸಿಕ್ಕುವುದಿಲ್ಲ. ಕುಟುಂಬಕ್ಕೆ ಅಗತ್ಯವಾದ ಪದಾರ್ಥಗಳನ್ನು ಖರೀದಿಸುವಿರಿ. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ನಿಮಗಾಗಿ ಕಾಯುವವರಿಗೆ ಬೇಸರ ತರಿಸಬಹುದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು.
ಮಿಥುನ ರಾಶಿ :ಆತ್ಮೀಯತೆಯಿಂದ ಮನಸ್ಸಿಗೆ ಬಾಧೆ ಬರುವುದು. ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ಮಾಡಬೇಕಾಗುವುದು. ಇಂದು ನೀವು ಮನೆಯ ಹಿರಿಯರಿಗೆ ಗೌರವ ತರುವ ಕಾರ್ಯವನ್ನು ಮಾಡುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಒಬ್ಬರಿಗೆ ಸಹಾಯ ಮಾಡಿದರೆ ಮತ್ತೊಬ್ಬರಿಗೆ ತೊಂದರೆ. ನೂತನ ವಾಹನದ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ಹಿತಶತ್ರು ನಿಮ್ಮ ಪತನವನ್ನೇ ನಿರೀಕ್ಷಿಸುತ್ತ ಕುಳಿತಿರುವರು. ವೈವಾಹಿಕ ಜೀವನ ಆರಂಭದ ದಿನಗಳಲ್ಲಿ ಸಂತೋಷವೇ ಇರುವುದು.
ಕರ್ಕಾಟಕ ರಾಶಿ :ಹಳೆಯ ವ್ಯವಸ್ಥೆಗೆ ನೀವು ಪುನಃ ಹೋಗಬೇಕಾಗಬಹುದು. ಪಾಲುದಾರಿಕೆಯನ್ನು ಬಿಡುವ ಆಲೋಚನೆ ಬರಬಹುದು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ಅಶಿಸ್ತಿನಿಂದ ಇಂದಿನ ಕೆಲಸವನ್ನು ಮಾಡಿ, ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ.
ಸಿಂಹ ರಾಶಿ :ವಿವಾಹದ ಕಾರಣಕ್ಕೆ ನಿಮಗೆ ಕೋಪ ಬರುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಬಂಧುಗಳ ಜೊತೆ ಆಕಸ್ಮಿಕವಾಗಿ ಮನಸ್ತಾಪ ಕಾಣಿಸೀತು.
ಕನ್ಯಾ ರಾಶಿ :ಅಪರಿಚಿತರ ಕರೆಯು ನಿಮ್ಮನ್ನು ಹೆದರಿಸಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ಬೆಂಕಿಯ ಸಣ್ಣ ಕಿಡಿಯಾದರೂ ಅದು ಇರುವಲ್ಲಿಯೇ ಇರಬೇಕು. ನಿಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನೀವು ಯೋಚಿಸುತ್ತಿದ್ದರೆ ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ಯಾರದೋ ಕಾರಣಕ್ಕೆ ಅತಂತ್ರ ಸ್ಥಿತಿ ಬರಬಹುದು. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮನಸ್ಸು ಸ್ವಸ್ಥವಾಗಿ ಇರದು. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಮಾತನ್ನು ಕೇಳಬೇಕಾದೀತು.
ತುಲಾ ರಾಶಿ :ಸಾಮಾಜಿಕವಾದ ನ್ಯಾಯ ಪಡೆಯಲು ಹೋರಾಟ ಮಾಡಬೇಕಾಗುವುದು. ಮುಂದೆ ಬರುವ ಅವಕಾಶಕ್ಕೆ ಈಗಲೇ ಉದ್ಯೋಗವನ್ನು ಕೈಚೆಲ್ಲಿ ಕುಳಿತಿರುವುದು ಮೂರ್ಖತನವಾದೀತು. ವ್ಯಾವಹಾರಿಕ ಒಪ್ಪಂದವು ಕೊನೆಯ ಹಂತದಲ್ಲಿ ಇದ್ದು ಕೆಲವು ಅಸಮಾಧಾನಕರ ಮಾತನ್ನು ಕೇಳಬೇಕಾದೀತು. ನ್ಯಾಯಾಲಯದ ಮಾತಿಗೆ ನೀವು ತಲೆ ಬಾಗುವಿರಿ. ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ ಮಾಡಿಸುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು.
ವೃಶ್ಚಿಕ ರಾಶಿ :ಮೊದಲು ದೃಷ್ಟಿ ಇಟ್ಟು, ಅನಂತರ ಹೆಜ್ಜೆ ಇಡಿ. ಉದ್ಯೋಗದ ಒತ್ತಡವು ಮನೆಯಲ್ಲಿ ನೆಮ್ಮದಿಯಿಂದ ಇರಲು ಬಿಡದು. ಎಲ್ಲವನ್ನೂ ನಿಮ್ಮ ನೇರಕ್ಕೆ ತರುವುದು ಕಷ್ಟವಸದೀತು. ಸುಪ್ತಪ್ರಜ್ಞೆಯು ಮುಂದಾಗುವುದನ್ನು ತಿಳಿಸುವುದು. ಉದ್ವೇಗದ ಸಂದರ್ಭದಲ್ಲಿ ಕಳವಳಗೊಂಡರೆ ಇನ್ನಷ್ಟು ಅಧ್ವಾನವಾಗಬಹುದು. ಇಂದು ನೀವು ಕೆಲಸವನ್ನು ಮಾಡಲು ಪ್ರಯತ್ನಿಸಿದರೂ ಪೂರ್ಣವಾಗದು. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ.
ಧನು ರಾಶಿ :ಬೆಂಬಲವಿರುವ ಕಾರಣ ವ್ಯಾಪಾರದ ಹಿನ್ನಡೆಗೆ ಅಂಜಲಾರಿರಿ. ಹಿಂದೆ ಮಾಡಿದ ಖರ್ಚಿನ ತಪ್ಪಿಗೆ ಇಂದು ತಿಳಿವಳಿಕೆ ಬರಬಹುದು. ನಿಮಗೆ ನಿಮ್ಮ ಹಳೆಯ ಜವಾಬ್ದಾರಿಯ ಪದವಿಯೇ ಸಿಗಲಿದೆ. ಒತ್ತಡದಿಂದ ಹೊರಬರಲು ಮಾರ್ಗವು ಸಿಗಲಿದೆ. ಇಂದು ನಿಮ್ಮ ಸಂಗಾತಿಯನ್ನು ಖರೀದಿಗೆ ಕರೆದೊಯ್ಯುವಿರಿ. ಯಾರೋ ಮಾಡಿದ ಸಾಲವು ನಿಮಗೆ ಶೂಲವಾಗಬಹುದು. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ. ಹೆಣ್ಣು ಮಕ್ಕಳು ತಾಯಿಯಿಂದ ಲಾಭವನ್ನು ಪಡೆಯುವರು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹೆಚ್ಚಾದೀತು.
ಮಕರ ರಾಶಿ :ಯಾವುದೋ ಯೋಚನೆಯಲ್ಲಿ ಮತ್ತೇನನ್ನೋ ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ಅನಾರೋಗ್ಯದಿಂದ ವ್ಯಾಪಾರದಲ್ಲಿ ಉತ್ಸಾಹ ಕಡಿಮೆ ಆಗಲಿದೆ. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಯಾರಿಗೋ ನಿಮ್ಮಿಂದ ಹಣವು ಕೈತಪ್ಪಿ ಹೋಗಬಹುದು. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಇಂದು ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವಿರಿ. ತಂದೆಯ ಶ್ರಮವನ್ನು ಕಂಡು ಮಕ್ಕಳು ನೋಯುವರು.
ಕುಂಭ ರಾಶಿ :ಮಂಗಲ ಸಂದರ್ಭವು ನಿಮಗೆ ಅನಿರೀಕ್ಷಿತವಾಗಿ ಬರಬಹುದು. ಅದನ್ನು ಪೂರ್ಣ ಮನಸ್ಸಿನಿಂದ ಸ್ವೀಕರಿಸಿ. ನಿಮ್ಮ ಭಾವನೆಗಳನ್ನು ಇತರರು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ರಾಜಕಾರಣಿಗಳಿಗೆ ತೊಳಲಾಟವು ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ಕುಟುಂಬದ ನೇರ ಮಾತುಗಳು ನಿಮಗೆ ಸಹಿಸಲು ಶಕ್ಯವಾಹದೇ ಬೇಸರಿಸುವಿರಿ. ಊಹಿಸಿದಷ್ಟು ಮಾರ್ದವವು ಸಂಗಾತಿಯ ಸ್ವಭಾವದಲ್ಲಿ ಇರದು.
ಮೀನ ರಾಶಿ :ಮಾನಸಿಕವಾಗಿ ಆಗುವ ಸಣ್ಣ ಬಾಧೆಗಳಿಗೆ ಅರಿಯಾದ ಲಕ್ಷ್ಯ ಬೇಡ. ನಿರ್ಲಕ್ಷ್ಯವೇ ಅದರ ಧ್ಯೇಯವಾಗಲಿ. ಸಾಲದಿಂದ ಸ್ವಲ್ಪ ಸಮಾಧಾನ ಸಿಗಲಿದೆ. ಇದು ನಿಮ್ಮ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮವನ್ನು ಕೊಡುವುದು. ನಿಮಗೆ ಸಂಬಂಧಿಸದ ವಿಚಾರಕ್ಕೆ ನೀವು ಮಧ್ಯ ಪ್ರವೇಶ ಮಾಡುವುದು ಬೇಡ. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವುದು ಉಚಿತ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ನೋವಿಗೆ ಸ್ಪಂದಿಸಲು ಕಷ್ಟವಾದೀತು. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮ್ಮೊಳಗೆ ಆತಂಕಕ್ಕೆ ಸೃಷ್ಟಿಸುವುದು.