AR Rahman:(ನ.20) ಆಸ್ಕರ್ ಆವಾರ್ಡ್ ವಿನ್ನರ್, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ದೃಢವಾಗಿದೆ. ಪತ್ನಿ ಸೈರಾ ಬಾನು ಪತಿಯಿಂದ ವಿಚ್ಛೇದನ ಪಡೆದು ಬೇರ್ಪಡುವುದಾಗಿ ಘೋಷಿಸಿದ್ದಾರೆ. ನ. 19ರ ರಾತ್ರಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಬಿಗ್ ಶಾಕ್ ಕೊಟ್ಟಿದ್ದಾರೆ. 29 ವರ್ಷಗಳ ದಾಂಪತ್ಯಕ್ಕೆ ಇಬ್ಬರು ತೆರೆ ಎಳೆದಿದ್ದಾರೆ.
ಇದನ್ನೂ ಓದಿ: 💔ಸಾಕಿದ ನಾಯಿಗೋಸ್ಕರ 7 ವರ್ಷದ ಪ್ರೀತಿಗೆ ಬ್ರೇಕ್..!!!
ಮದುವೆಯಾದ ಹಲವು ವರ್ಷಗಳ ನಂತರ ಸೈರಾ ಅವರು ತಮ್ಮ ಪತಿ ಎಆರ್ ರೆಹಮಾನ್ ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಒತ್ತಡ ಮತ್ತು ತೊಂದರೆಗಳು ತಮ್ಮ ನಡುವೆ ಸರಿಪಡಿಸಲಾಗದ ಅಂತರ ಸೃಷ್ಟಿಸಿವೆ. ಈ ಸವಾಲಿನ ಸಮಯದಲ್ಲಿ ಸಾರ್ವಜನಿಕರಿಂದ ಗೌಪ್ಯತೆ ಹಾಗೂ ನಿರ್ಧಾರ ಗೌರವಿಸಲು ಮನವಿ ಮಾಡಿದ್ದೇನೆ ಎಂದು ಸೈರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿ ಆಗಿದೆ.
1989ರಲ್ಲಿ ಮುಸ್ಲಿಂ ಆಗಿ ಮತಾಂತರ:
ಹಿಂದೂ ಧರ್ಮದಲ್ಲಿ ಹುಟ್ಟಿದ್ದ ಎಆರ್ ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. 1989ರಲ್ಲಿ ಇವರು ಮುಸ್ಲಿಂ ಮತಕ್ಕೆ ಮತಾಂತರ ಆಗುತ್ತಾರೆ. ನಂತರ ಅಲ್ಲಾ ರಖಾ ರೆಹಮಾನ್ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾರೆ.
1995ರಲ್ಲಿ ರೆಹಮಾನ್ – ಸೈರಾ ಮದುವೆ:
ಎ.ಆರ್ ರೆಹಮಾನ್ 1995 ರಲ್ಲಿ ಸೈರಾ ಅವರನ್ನು ವಿವಾಹವಾದರು. ಇವರ ಮದುವೆ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಸಿಮಿ ಗರೆವಾಲ್ ಅವರೊಂದಿಗಿನ ಚಾಟ್‌ನಲ್ಲಿ, ರೆಹಮಾನ್ ತನ್ನ ತಾಯಿ ಈ ಮದುವೆಯನ್ನು ನಿಶ್ಚಯ ಮಾಡಿದ್ರು ಎಂದು ಹೇಳಿಕೊಂಡಿದ್ರು. ನನಗಾಗಿ ಹುಡುಗಿಯನ್ನ ಹುಡುಕುವಷ್ಟು ಸಮಯ ನನಗೆ ಇರಲಿಲ್ಲ ಎಂದು ಎ.ಆರ್ ರೆಹಮಾನ್ ಹೇಳಿದ್ರು. ಅಮ್ಮ ಒಪ್ಪಿ ಮಾಡಿದ ಮದುವೆ ಇದು ಎಂದು ಸಂದರ್ಶನದಲ್ಲಿ ಹೇಳಿದ್ದರು.
ಬಾಲಿವುಡ್‌ನ ಬಹುಬೇಡಿಕೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಹಾಡುಗಳಿಗೆ ತಲೆದೂಗದವರೇ ಇಲ್ಲ. 7 ಬಾರಿ ನ್ಯಾಷನಲ್ ಅವಾರ್ಡ್ ಗೆದ್ದ ಭಾರತದ ಏಕೈಕ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. 1992ರಲ್ಲಿ ಮಣಿರತ್ನಂ ಅವರ ರೋಜಾ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.