ಬೆಂಗಳೂರು:(ನ.24) ಕೆಲವೊಂದು ಘಟನೆಗಳನ್ನು ನಮ್ಮ ಸುತ್ತಮುತ್ತಲಿನಲ್ಲಿ ನೋಡಿದಾಗ ಜೀವನ ಎಷ್ಟು ಕ್ರೂರ ಅಂತ ಅನಿಸುತ್ತದೆ. ಈ ಪ್ರಪಂಚದಲ್ಲಿ ನಾವು ಅಂದುಕೊಂಡಂತೆ ಯಾವುದು ನಡೆಯೋದಿಲ್ಲ. ದೇವರ ಆಟ ಬಲ್ಲವರಾರು , ಆತನ ಎದುರು ನಿಲ್ಲುವರಾರು, ಕೇಳದೆ ಸುಖವ ತರುವ , ಹೇಳದೆ ದುಃಖವ ಕೊಡುವ , ತನ್ನ ಮನದಂತೆ ಕುಣಿಸಿ ಆಡುವ ಈ ಹಾಡನ್ನು ಈ ಘಟನೆಗೆ ಹೋಲಿಸಬಹುದು.
ಇದನ್ನೂ ಓದಿ: 🐘ನೆರಿಯ: ನೆರಿಯದಲ್ಲಿ ಕಾಡಾನೆ ಪ್ರತ್ಯಕ್ಷ
ಕೈ ತುಂಬಾ ಸಂಬಳ ಸಿಗುವ ಕೆಲಸ, ಮನೆ, ಕುಟುಂಬ ಎಲ್ಲಾ ಇದ್ದವರು ಕೂಡ ಕೊನೆಗೊಂದು ದಿನ ಏನು ಇಲ್ಲದವರಂತೆ ಬದುಕಲು ಬಹುದು. ಇದಕ್ಕೆ ಉದಾಹರಣೆಯಂತೆ ಇಲ್ಲೊಬ್ಬ ವ್ಯಕ್ತಿಯೂ, ಒಂದು ಕಾಲದಲ್ಲಿ ಯಶಸ್ವಿ ವೃತ್ತಿಪರನಾಗಿದ್ದನು. ಜರ್ಮನಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕೈ ತುಂಬಾ ಸಂಬಳ ಸಿಗುವ ಉದ್ಯೋಗದಲ್ಲಿದ್ದನು. ಆದರೆ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದಾನೆ. ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
https://www.instagram.com/reel/DCqgtXGB9Xz/?utm_source=ig_web_button_share_sheet
ಕರ್ನಾಟಕ ಪೋರ್ಟ್ ಪೋಲಿಯೊ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವ್ಯಕ್ತಿಯ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಈ ವ್ಯಕ್ತಿಯೂ, ”ನಾನು 2013ರಲ್ಲಿ ಫ್ರಾಂಕರ್ಟ್‌ನಲ್ಲಿದ್ದೆ, ನಂತರದಲ್ಲಿ ನಾನು ಬೆಂಗಳೂರಿಗೆ ಬಂದೆ. ಆ ಬಳಿಕ ನಾನು ಗ್ಲೋಬಲ್ ವಿಲೇಜ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ನಾನು ನನ್ನ ಹೆತ್ತವರನ್ನು ಕಳೆದುಕೊಂಡೆ,’ ಎಂದು ಹೇಳಿರುವುದನ್ನು ಕಾಣಬಹುದು.
ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಎಂಎಸ್ ಶಿಕ್ಷಣವನ್ನು ಪೂರ್ಣಗೊಳಿಸಿ, ಗ್ಲೋಬಲ್ ವಿಲೇಜ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಈ ವ್ಯಕ್ತಿಯೂ ಜೀವನದಲ್ಲಿ ವಿಧಿಯೂ ಆಟವಾಡಿದೆ. ಹೆತ್ತವರನ್ನು ಹಾಗೂ ಪ್ರೀತಿಸುತ್ತಿದ್ದ ಹುಡುಗಿಯೂ ಕಳೆದುಕೊಂಡ ವ್ಯಕ್ತಿಯೂ ಕುಡಿತಕ್ಕೆ ದಾಸನಾಗಿದ್ದಾನೆ. ಇದೀಗ ಜೀವನ ಸಾಗಿಸಲು ಬೆಂಗಳೂರಿನ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾನೆ.
ನೆಟ್ಟಿಗರೊಬ್ಬರು,” ಇದು ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ತಂದೆ ತಾಯಿಯ ಬಿಟ್ಟು ಅವನಿಗೆ ಕುಟುಂಬದ ಸದಸ್ಯರಿದ್ದಾರೆಯೇ, ಅವರು ಆತನನ್ನು ಹುಡುಕುತ್ತಿರಬಹುದು. ಆದರೆ ಈ ವ್ಯಕ್ತಿ ಕುಟುಂಬದ ಸದಸ್ಯರಿಗೆ ಸಿಗದೇ ಇರಬಹುದು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ನೀವು ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದರಿಂದ ದಯವಿಟ್ಟು ಆತನಿಗೆ ಸರಿಯಾದ ಚಿಕಿತ್ಸೆ ಕೊಡಿಸಿ” ಎಂದು ಮನವಿ ಮಾಡಿದ್ದಾರೆ.
ಇನ್ನೊಬ್ಬರು, “ಪ್ರಾರಬ್ಧ ಕರ್ಮಗಳು ಜನರ ಜೀವನದ ಕೆಲವು ಸಮಯಗಳಲ್ಲಿ ಕಾಡುತ್ತವೆ, ಒಳ್ಳೆಯ ಮತ್ತು ಕೆಟ್ಟ ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ವ್ಯಕ್ತಿಯ ದೈನಂದಿನ ಜೀವನದ ನೋವನ್ನು ಯಾರಿಂದಲೂ ಹಂಚಿಕೊಳ್ಳಲು ಸಾಧ್ಯವಿಲ್ಲ. ದೇವರು ಆತನನ್ನು ಕಾಪಾಡಲಿ. ಆ ವ್ಯಕ್ತಿಗೆ ಸಹಾಯ ಮಾಡುವ ಮನಸ್ಸು ನಮ್ಮೆಲ್ಲರದಾಗಲಿ” ಎಂದು ಕಾಮೆಂಟ್ ಮಾಡಿದ್ದಾರೆ.