Sun. Nov 24th, 2024

Guruvayankare: ವಿದ್ವತ್ ಪಿಯು ಕಾಲೇಜಿನಲ್ಲಿ “ಮಾನಸ ಮಾರ್ಗದರ್ಶನ ಹಾಗೂ ಸಂವಾದ” ಕಾರ್ಯಕ್ರಮ

ಗುರುವಾಯನಕೆರೆ:(ನ.24) ಯಶಸ್ಸಿನ ಹಿಂದೆ ಓಡಬೇಕೆಂಬ ಛಲವಿರುವ ಈಗಿನ ಪಿಯು ವಿದ್ಯಾರ್ಥಿಗಳಿಗೆ ಸರಿಯಾದ ಹಂತದಲ್ಲಿ ಸಮರ್ಥವಾದ ಆಪ್ತ-ಸಮಾಲೋಚನಾ ಮಾರ್ಗದರ್ಶನ ಬೇಕೇ-ಬೇಕು ಎಂದು ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯ ಮಾಜಿ ಹಿರಿಯ ಮನೋವೈದ್ಯ, ಪದ್ಮಶ್ರೀ ಡಾ. ಸಿಆರ್ ಚಂದ್ರಶೇಖರ್‌ ರವರು ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಏರ್ಪಡಿಸಿದ್ದ “ಮಾನಸ ಮಾರ್ಗದರ್ಶನ ಹಾಗೂ ಸಂವಾದ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: 🟣ಕಲ್ಮಂಜ : ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಅತೀ ಕಿರಿಯ ವಯಸ್ಸಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಎದುರಿಸಿ, ಯಶಸ್ಸು ಗಳಿಸಬೇಕೆಂಬ ಛಲವಿರುವ ಹದಿಹರೆಯದ ವಿದ್ಯಾರ್ಥಿಗಳಿಗೆ “ಆಪ್ತ-ಸಮಾಲೋಚನೆ” ಅತ್ಯಂತ ಉತ್ತೇಜನಕಾರಿ ಎಂದು ತಿಳಿಸಿದ ಶ್ರೀಯುತರು ವಿದ್ವತ್ ಪಿಯು ಕಾಲೇಜು ದಿನ ನಿತ್ಯದ ಕಾರ್ಯಸೂಚಿಯಾಗಿ ಆಪ್ತ-ಸಮಾಲೋಚನೆಯನ್ನು ಜಾರಿಗೊಳಿಸಿರುವುದು ರಾಜ್ಯದ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿಯೇ ಪ್ರಥಮ ಎಂದು ಬಣ್ಣಿಸಿದರು.

ಆಪ್ತ-ಸಮಾಲೋಚನ[ ಕೌನ್ಸಲಿಂಗ್ ]ಒತ್ತಡ ರಹಿತ ಗ್ರಹಿಕೆ ಹಾಗೂ ಕಲಿಕೆಗೆ ರಾಮಬಾಣ ಎಂದ ಡಾ. ಸಿಆರ್ ಚಂದ್ರಶೇಖರ್ ವಿದ್ಯಾಭ್ಯಾಸವನ್ನು ಹಿತಾಸಕ್ತಿಯ ಚಟುವಟಿಕೆಯನ್ನಾಗಿ ಪರಿವರ್ತಿಸುವ ಆಲೋಚನೆ ರೂಪಿಸಿಕೊಳ್ಳಲು ವಿದ್ಯಾರ್ಥಿ ಸಮೂಹಕ್ಕೆ ತಿಳಿ ಹೇಳಿದರು.

ಬೆಂಗಳೂರಿನಂತಹ ನಗರಗಳಲ್ಲಿ ವಿದ್ಯಾಸಂಸ್ಥೆಗಳು ಆಪ್ತ-ಸಮಾಲೋಚನೆಯ ಅಗತ್ಯತೆಯ ಬಗ್ಗೆಇನ್ನೂ ಚರ್ಚೆ ನಡೆಸುತ್ತಿರುವ ಈ ಸಂದರ್ಭದಲ್ಲಿ, ಗುರುವಾಯನಕೆರೆಯಂತಹ ಪಟ್ಟಣದಲ್ಲಿ ಪಿಯು ಕಾಲೇಜೊಂದು “ಆಪ್ತ-ಸಮಾಲೋಚನಾ ವಿಭಾಗ” ವನ್ನು ಹೊಂದಿರುವುದು ವಿದ್ವತ್ ಚಿಂತಕರ ಛಾವಡಿ ಎಷ್ಟು ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.

ವಿದ್ವತ್‌ ನ ಪಿಯು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಜ್ಞಾಪಕ ಶಕ್ತಿ ವೃದ್ಧಿ, ಒತ್ತಡ ನಿವಾರಣೆ, ಪರೀಕ್ಷಾ ತಯಾರಿಯ ವಿಧಾನ ಹಾಗೂ ಮನಸ್ಸಿನ ಜಾಡ್ಯ ನಿವಾರಣೆ, ಇತ್ಯಾದಿ ವಿಷಯಗಳ ಬಗ್ಗೆಸಂದೇಹ ಪರಿಹಾರಕ್ಕಾಗಿ ಎರಡು ತಾಸಿಗೂ ಹೆಚ್ಚಿನಕಾಲ ಸಂವಾದ ನಡೆಸಿ ಯುವವಿದ್ಯಾರ್ಥಿಗಳಲ್ಲಿ ಹೊಸಚೈತನ್ಯ ತುಂಬಿದರು.

ವಿದ್ವತ್ ಪಿಯು ಕಾಲೇಜಿನ ಕೌನ್ಸಲಿಂಗ್ ನ ಮುಖ್ಯಸ್ಥರಾದ ಶ್ರೀ ಗಂಗಾಧರ ಇ ಮಂಡಗಳಲೆ, ಸಂಸ್ಥೆಯ ಸಂಸ್ಥಾಪಕಾಧ್ಯಕ್ಷರಾದ ಶ್ರೀಸುಭಾಶ್ಚಂದ್ರಶೆಟ್ಟಿ , ಪ್ರಗತಿ ಆಪಲ್ಎಜುಕೇಶನ್‌ ನ ಮುಖ್ಯಸ್ಥ ಶ್ರೀ ವಿಜಯಕುಮಾರ್ , ಟ್ರಸ್ಟಿ ಶ್ರೀ ಎಂ.ಕೆ. ಕಾಶಿನಾಥ್ ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು