ಉಜಿರೆ:(ನ.24) ಸಂತ ಅಂತೋನಿ ಚರ್ಚ್, ಉಜಿರೆ ಇದರ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ 5 ನೇ ಯೋಜನೆ ಅಶಕ್ತ ಕುಟುಂಬಕ್ಕೆ ಹೊಸಮನೆಯ ಹಸ್ತಾಂತರ ಕಾರ್ಯಕ್ರಮವು ನಡೆಯಿತು.
ಇದನ್ನೂ ಓದಿ: ⭕ಮಂಗಳೂರು : ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆ#ತ್ಮಹತ್ಯೆಗೆ ಯತ್ನ!!
ಅಶಕ್ತರ ಬಾಳಿಗೆ ನೆರವಾಗಿ ಉತ್ತಮ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡುವುದರ ಜೊತೆಗೆ ಉತ್ತಮವಾಗಿ ಮನೆಯ ಗೃಹ ಪ್ರವೇಶವನ್ನು ನೆರವೇರಿಸಲಾಯಿತು. ಉಜಿರೆ ಚರ್ಚ್ ಬಳಿಯ ನೆಲ್ಲಿಪದವು ಎಂಬಲ್ಲಿ ನಿರ್ಮಾಣ ಮಾಡಿರುವ ನೂತನ ಮನೆಯ ಹಸ್ತಾಂತರ ಮತ್ತು ಆಶೀರ್ವಚನ ಕಾರ್ಯಕ್ರಮವು ನಡೆಯಿತು.
ಸಂತ ಅಂತೋನಿ ಚರ್ಚ್ ವತಿಯಿಂದ 4 ಮನೆಗಳನ್ನು ಈಗಾಗಲೇ ಅಶಕ್ತರಿಗೆ ಹಸ್ತಾಂತರ ಮಾಡಲಾಗಿದ್ದು, ಈಗ 5 ನೇ ಮನೆಯ ಗೃಹ ಪ್ರವೇಶವನ್ನು ನಡೆಸುವುದರ ಮೂಲಕ ಸಮಾಜಮುಖಿ ಕೆಲಸವನ್ನು ಮಾಡಿದೆ.
ಕಾರ್ಯಕ್ರಮದಲ್ಲಿ ಸಂತ ಅಂತೋನಿ ಚರ್ಚ್ ಉಜಿರೆಯ ಧರ್ಮಗುರುಗಳಾದ ವಂದನೀಯ ಅಬೆಲ್ ಲೋಬೋ, ಬೆಳ್ಮಣ್ ಹ್ಯುಮ್ಯಾನಿಟಿ ಟ್ರಸ್ಟ್ ನ ಸ್ಥಾಪಕರಾದ ರೋಶನ್ ಡಿಸೋಜ ,
ಗ್ರಾಮ ಪಂಚಾಯತ್ ಉಜಿರೆಯ ಅಧ್ಯಕ್ಷರಾದ ಉಷಾ ಕಿರಣ್ ಕಾರಂತ್ ಹಾಗೂ ಮತ್ತಿತ್ತರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.