Sun. Nov 24th, 2024

Bengaluru: ನಿನ್ನ ನೋಡ್ಬೇಕು ಬಾ ಅಂತ ಕರೆದ ಎಕ್ಸ್ ಲವ್ವರ್‌ – ಟಿಪ್ ಟಾಪ್ ಆಗಿ ಹೋದ ಪ್ರಿಯಕರನಿಗೆ ಕಾದಿತ್ತು ಶಾಕ್!!

ಬೆಂಗಳೂರು:(ನ.24) ಹಳೆ ಲವರ್ ಫೋನ್ ಮಾಡಿ ಬಾ ಮೀಟ್ ಆಗೋಣ ಅಂದ್ರೆ ಯಾವುದಕ್ಕೂ ನೀವು ಹುಷಾರಾಗಿರಿ.

ಯಾಕಂದ್ರೆ ಹಳೆ ಲವ‌ರ್ ಮಾತಿಗೆ ಮರುಳಾಗಿ ಮೀಟ್ ಮಾಡಲು ಬಂದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ. ಸುಲಿಗೆ ಮಾಡಿದ ಘಟನೆ ಕೋರಮಂಗಲದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: 🛑ಧರ್ಮಸ್ಥಳ: ಡಿಪೋದಲ್ಲಿ ಸೂಕ್ತ ಬಸ್ ವ್ಯವಸ್ಥೆಗಾಗಿ ಎಬಿವಿಪಿ ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ.!

ಎಟಿಎಂ ಬಳಿ ನಡೆಯುತ್ತಿದ್ದ ಜಗಳನ್ನು ಗಮನಿಸಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ ಬೆಂಗಳೂರಿನ ಕೋರಮಂಗಲ ಪೊಲೀಸರಿಂದ ಖತರ್ನಾಕ್ ಹನಿಗ್ಯಾಂಗ್ ಬಂಧನವಾಗಿದೆ. ಆಂಧ್ರದ ನೆಲ್ಲೂರು ಮೂಲದ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು. ಆಂಧ್ರದಲ್ಲಿ ಕಿಡ್ನಾಪ್ ಮಾಡಿ ಪಾವಗಡ ಹಾಗೂ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ.

ಆಂಧ್ರದ ನೆಲ್ಲರೂರಿನ ಮೆಡಿಕಲ್ ಶಾಪ್‌ ನಲ್ಲಿ ಶಿವ ಎಂಬ ವ್ಯಕ್ತಿ ಕೆಲಸ ಮಾಡಿಕೊಂಡಿದ್ದ ಈ ವೇಳೆ ಸಂಬಂಧಿಯಾದ ಮೌನಿಕ ಜೊತೆ ಶಿವನಿಗೆ ಪ್ರೇಮಾಂಕುರವಾಗಿತ್ತು. ಒಂದು ವರ್ಷದ ಹಿಂದೆ ಮೌನಿಕ ಶಿವನಿಂದ ದೂರವಾಗಿದ್ದಳು. ಆದ್ರೆ, ನವೆಂಬರ್ 17 ರಂದು ಏಕಾಏಕಿ ಶಿವನಿಗೆ ಕರೆ ಮಾಡಿ ಮೀಟ್ ಮಾಡಲು ಪೆನಾಗೊಂಡಗೆ ಕರೆದಿದ್ದಾಳೆ. ಅಷ್ಟು ಮಾತ್ರವಲ್ಲ ನಿನ್ನ ಬಳಿ ಇರೋ ಕಾರು, ಚಿನ್ನಾಭರಣದ ಜೊತೆಗೆ ಬಾ ಸ್ನೇಹಿತರಿಗೆ ನಿನ್ನನ್ನು ಪರಿಚಯ ಮಾಡಿಸಬೇಕು ಎಂದು ಕೂಡ ಹೇಳಿದ್ದಾಳೆ.

ಆಂಧ್ರದ ನೆಲ್ಲರೂರಿನ ಮೆಡಿಕಲ್ ಶಾಪ್‌ ನಲ್ಲಿ ಶಿವ ಎಂಬ ವ್ಯಕ್ತಿ ಕೆಲಸ ಮಾಡಿಕೊಂಡಿದ್ದ ಈ ವೇಳೆ ಸಂಬಂಧಿಯಾದ ಮೌನಿಕ ಜೊತೆ ಶಿವನಿಗೆ ಪ್ರೇಮಾಂಕುರವಾಗಿತ್ತು. ಒಂದು ವರ್ಷದ ಹಿಂದೆ ಮೌನಿಕ ಶಿವನಿಂದ ದೂರವಾಗಿದ್ದಳು. ಆದ್ರೆ, ನವೆಂಬರ್ 17 ರಂದು ಏಕಾಏಕಿ ಶಿವನಿಗೆ ಕರೆ ಮಾಡಿ ಮೀಟ್ ಮಾಡಲು ಪೆನಾಗೊಂಡಗೆ ಕರೆದಿದ್ದಾಳೆ. ಅಷ್ಟು ಮಾತ್ರವಲ್ಲ ನಿನ್ನ ಬಳಿ ಇರೋ ಕಾರು, ಚಿನ್ನಾಭರಣದ ಜೊತೆಗೆ ಬಾ ಸ್ನೇಹಿತರಿಗೆ ನಿನ್ನನ್ನು ಪರಿಚಯ ಮಾಡಿಸಬೇಕು ಎಂದು ಕೂಡ ಹೇಳಿದ್ದಾಳೆ.


ಮಾಜಿ ಪ್ರೇಯಸಿಯ ಮಾತನ್ನು ನಂಬಿದ ಶಿವ, ತನ್ನ ಬಳಿ ಇದ್ದ ಚಿನ್ನಾಭರಣದೊಂದಿಗೆ ಹೊರಟಿದ್ದಾನೆ. ಪೆನಾಗೊಂಡ ಬದಲು ಪಾವಗಡಕ್ಕೆ ಮೀಟಿಂಗ್ ಫಿಕ್ಸ್ ಆಗಿದೆ. ಪಾವಡಗಡದಲ್ಲಿ ಚಿನ್ನಾಭರಣದೊಂದಿಗೆ ಬಂದಿಳಿದ ಶಿವ ಮೌನಿಕಳನ್ನ ಭೇಟಿಯಾಗಿದ್ದ.


ಇಬ್ಬರು ಪಾವಗಡದಲ್ಲಿ ಸುತ್ತಾಡುವಾಗ ಕಾರ್‌ನಲ್ಲಿ ಬಂದ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿ ಶಿವನ ಮೇಲೆ ಮನಸೋಯಿಚ್ಚೆ ಹಲ್ಲೆ ಮಾಡಿದ್ದಾರೆ. ಆತನ ಬಳಿ ಇದ್ದ 4.20 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಇವೆಲ್ಲವನ್ನೂ ತನಗೆ ಸಂಬಂಧವೇ ಇಲ್ಲದಂತೆ ನೋಡಿಕೊಂಡಿದ್ದಾಳೆ ಮೌನಿಕಳನ್ನು ಆ ಮನೆಯಿಂದ ಆರೋಪಿಗಳು ಕಳುಹಿಸಿಕೊಟ್ಟಿದ್ದಾಳೆ.

ಇದಾದ ಬಳಿಕ ಆರೋಪಿಗಳು ಶಿವನಿಗೆ ಮತ್ತೆ 10 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಕೊನೆಗೆ 5 ಲಕ್ಷ ನೀಡಲು ಒಪ್ಪಿದ ಶಿವ, ಸ್ನೇಹಿತರಿಂದ ಅಕೌಂಟ್‌ ಗೆ ಹಣ ಹಾಕಿಸಿಕೊಂಡಿದ್ದಾನೆ. ಆದ್ರೆ ಆತನ ಬಳಿ ಎಟಿಎಂ ಕಾರ್ಡ್ ಇಲ್ಲದಿದ್ದರಿಂದ ಕಾರ್ಡ್ ಕೊರಿಯರ್ ಮಾಡಿಸಿಕೊಂಡಿದ್ದ.


ಬೆಂಗಳೂರಿನ ಮೆಜೆಸ್ಟಿಕ್ ಅಡ್ರೆಸ್‌ಗೆ 4 ರಿಂದ 5 ಎಟಿಎಂ ಕಾರ್ಡ್‌ಗಳನ್ನು ಕೊರಿಯರ್ ಮಾಡಿಸಿಕೊಂಡಿದ್ದರು ಆರೋಪಿಗಳು. ಎ1 ಆರೋಪಿ ಹರೀಶ್‌ ಗೆ ಬೆಂಗಳೂರು ಪರಿಚಯ ಇದ್ದಿದ್ದರಿಂದ ಸಿಕ್ಕಿ ಬೀಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದ. ಬಳಿಕ ನವೆಂಭರ್ 21 ರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ಮತ್ತು ಶಿವ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು. ಆದರೆ ಈ ವೇಳೆ ಇಬ್ಬರು ಆರೋಪಿಗಳ ಮಧ್ಯೆ ಹಣದ ವಿಚಾರಕ್ಕೆ ಜಗಳ ಆಗಿದೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಶಿವ ಜೋರಾಗಿ ಕಿರುಚಿಕೊಂಡು ಸ್ಥಳದಲ್ಲಿದ್ದ ಜನರನ್ನು ಸೇರಿಸಿದ್ದಾನೆ.


ಇದೇ ಸಮಯದಲ್ಲಿ ಸಮೀಪದಲ್ಲಿಯೇ ಡ್ಯೂಟಿಯಲ್ಲಿದ್ದ ಪಿಎಸ್‌ಐ ಮಾದೇಶ್ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಶಿವನ ಮಾತು ಕೇಳಿ ಅನುಮಾನ ಬಂದು ಮೂವರನ್ನು ಸ್ಟೇಷನ್‌ಗೆ ಕರೆತಂದಿದ್ದಾರೆ. ಆರೋಪಿಗಳು ಮತ್ತು ಶಿವನನ್ನು ವಿಚಾರಿಸಿದಾಗ ಕಿಡ್ನಾಪ್ ಮತ್ತು ಸುಲಿಗೆಯ ಕಥೆ ಬಯಲಿಗೆ ಬಂದಿದೆ.

ಈ ವಿಚಾರ ಕೇಳಿ ತಕ್ಷಣ FIR ದಾಖಲಿಸಿ ತನಿಖೆಗೆ ಸೂಚಿಸಿದ್ದ ಡಿಸಿಪಿ ಸಾರಾ ಫಾತೀಮಾ, ಶಿವನಿಂದ ದೂರು ಪಡೆದು ಪಾವಗಡದಲ್ಲಿದ್ದ ಮೌನಿಕ ಸೇರಿದಂತೆ ಇನ್ನಿತರ ಆರೋಪಿಗಳನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಎಲ್ಲಾ ಕಥೆ ಬಿಚ್ಚಿಟ್ಟಿದ್ದಾರೆ ಮೌನಿಕ ಮತ್ತು ಆರೋಪಿಗಳು. ಸದ್ಯ 7 ಜನರನ್ನು ಬಂಧಿಸಿ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.


ಆರೋಪಿಗಳಲ್ಲಿ ಒಬ್ಬನಾದ ಅಂಜನೀಲ್ ಆಂಧ್ರದಲ್ಲಿ ತನ್ನದೇ ಆದ ಟಾಪ್ -9 ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಇದೇ ಸಂಸ್ಥೆಯಲ್ಲಿ ಮೌನಿಕ ಕೂಡ ಕೆಲಸ ಮಾಡ್ತಿದ್ದು, ಇಬ್ಬರಿಗೂ ಗೆಳೆತನ ಶುರುವಾಗಿದೆ. ಈ ವೇಳೆ ಮೌನಿಕಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಅಂಜನೀಲ್ ಬಳಿ ಹೇಳಿಕೊಂಡಿದ್ದಳು. ಜೊತೆಗೆ ಶಿವನ ಬಗ್ಗೆಯೂ ಹೇಳಿದ್ದಳು. ಇದನ್ನು ಅರಿತ ಅಂಜನೀಲ್ ತನ್ನ ಸ್ನೇಹಿತ ಹರೀಶ್ ಜೊತೆ ಸೇರಿ ಈ ಹನಿಟ್ರ್ಯಾಪ್‌ಗೆ ಪ್ಲಾನ್ ಮಾಡಿದ್ದ. ಈ ಮೊದಲೇ ಹರೀಶ್ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಇರೋ ವ್ಯಕ್ತಿಯಾಗಿದ್ದ. ಹೀಗಾಗಿಯೇ ತನ್ನ ಸ್ನೇಹಿತರ ಜೊತೆ ಸೇರಿ ಮೌನಿಕಗಳನ್ನು ಮುಂದೆ ಬಿಟ್ಟು ಶಿವನನ್ನು ಕಿಡ್ನಾಪ್ ಮಾಡುವ ಪ್ಲಾನ್ ಮಾಡಿದ್ದ. ಆದರೆ ಎಲ್ಲಾ ಅಂದುಕೊಂಡಂತೆ ನಡೆದು ಹಣ ಕೈಗೆ ಬರೋ ವೇಳೆ ಕೈಕೊಟ್ಟ ನಸೀಬು ಇವರೆಲ್ಲರನ್ನೂ ಕಂಬಿ ಹಿಂದೆ ಹೋಗುವಂತೆ ಮಾಡಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು