Mon. Nov 25th, 2024

Indabettu: ಪ್ರತಿಷ್ಠಿತ ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತರು

ಇಂದಬೆಟ್ಟು: (ನ.25) ಜಿಲ್ಲೆಯ ಪ್ರತಿಷ್ಠಿತ ಬಂಗಾಡಿ ಸಿಎ ಬ್ಯಾಂಕ್ ಚುನಾವಣೆಗೆ ದಿಕ್ಸೂಚಿ ಎಂದೇ ಪ್ರಸಿದ್ಧಿ ಪಡೆದ ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಇಂದಬೆಟ್ಟು ಇದರ ಆಡಳಿತ ಮಂಡಳಿಯ ನಿರ್ದೇಶಕರ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ (ಬಿಜೆಪಿ) ಬೆಂಬಲಿತ 11 ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲ್ಲುವ ಮೂಲಕ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಇದನ್ನೂ ಓದಿ: 🍺Liquor Rate: ಮದ್ಯ ಪ್ರಿಯರಿಗೆ ಸಿಹಿ ಸುದ್ದಿ

ಈ ಚುನಾವಣೆಯು ಡಿಸೆಂಬರ್ 8 ರಂದು ನಡೆಯಲಿರುವ ಜಿಲ್ಲೆಯ ಪ್ರತಿಷ್ಠಿತ ಬಂಗಾಡಿ ಸಿ.ಎ ಬ್ಯಾಂಕ್ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಯಲ್ಪಡುವ ಚುನಾವಣೆ ಯಾಗಿದ್ದು ಬಿಜೆಪಿ ಬೆಂಬಲಿತರು ಪ್ರಚಂಡ ಬಹುಮತದಿಂದ ಗೆದ್ದು ಬೀಗಿದರೆ ಸತತ 23 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸತತ ಎರಡನೇ ಅವಧಿಗೆ 2 ಸ್ಥಾನ ಪಡೆಯುವ ಮೂಲಕ ಸೋಲನ್ನು ಒಪ್ಪಿಕೊಂಡಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀಮತಿ ಕುಸುಮಾವತಿ ಶಶಿಧರ ಗೌಡ, ಶ್ರೀಮತಿ ರೇಣುಕಾ ವಸಂತಗೌಡ, ಶ್ರೀಮತಿ ಲೀಲಾ ಸನತ್ ಆಚಾರ್ಯ, ಶ್ರೀಮತಿ ಸುಮತಿ ಶೇಖರಗೌಡ ಕುದುರು, ಶ್ರೀಮತಿ ಸೌಮ್ಯಾ ಸುರೇಂದ್ರ ಕುಕ್ಕಿಮಾರು, ಶ್ರೀಮತಿ ಸುಮಿತ್ರಾ ಕೊರಗಪ್ಪ ಗೌಡ, ಶ್ರೀಮತಿ ಹೇಮಾವತಿ ವೆಂಕಪ್ಪ ಮೂಲ್ಯ,

ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಅಕ್ಕಮ್ಮ ಶ್ರೀಧರ ಮುಗೇರ ನೇತ್ರಾವತಿ ನಗರ ಜಯಗಳಿಸಿದ್ದಾರೆ, ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಶ್ರೀಮತಿ ಪ್ರೇಮಾ ವಿದ್ಯಾನಂದ ಗುಡಿಗಾರ್, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಶ್ರೀಮತಿ ಸುರೇಖಾ ನವೀನ್ ಜೈನ್ ಪಾದೆ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಶ್ರೀಮತಿ ವಿನುತಾ.ಡಿ ಸುದೀಶ್ ಕುಮಾರ್ ಅಟಿಕ್ಕು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀಮತಿ ವಾರಿಜಾ ಪ್ರವೀಣ್ ಹಾಗೂ ಶ್ರೀಮತಿ ಶಾಂತಾ ಅಲ್ಪ ಮತಗಳಿಂದ ಪರಾಭವಗೊಂಡರು , ಕಾಂಗ್ರೆಸ್ ಬೆಂಬಲಿತ ಶ್ರೀಮತಿ ಆಶಾಗಣೇಶ್, ಶ್ರೀಮತಿ ಎಲ್ಸಿ ವಿಜಯಿಯಾದರೆ ಶ್ರೀಮತಿ ಲೀಲಾವತಿ, ಶ್ರೀಮತಿ ವನಜಾ, ಶ್ರೀಮತಿ ವಿಮಲಾ ಹಾಗೂ ಶ್ರೀಮತಿ ರಾಮಕ್ಕ ಪರಾಭವಗೊಂಡರು. ಚುನಾವಣಾ ಫಲಿತಾಂಶ ನಂತರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು ಮತ್ತು ನೂತನವಾಗಿ ಆಯ್ಕೆಯಾದ ಎಲ್ಲರನ್ನೂ ಕಾರ್ಯಕರ್ತರ ಪರವಾಗಿ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾಲತಾ, ಸದಸ್ಯರಾದ ಅನಂದ ಅಡಿಲು, ಚುನಾವಣಾ ಉಸ್ತುವಾರಿ ಬೆಳ್ತಂಗಡಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಪಳನಿ ಸ್ವಾಮಿ ಪಿ.ಆರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ಎನ್,

ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಉಪಾಧ್ಯಕ್ಷ ವಸಂತ ಗೌಡ ಕಲ್ಲಾಜೆ, ನಿರ್ದೇಶಕರಾದ ರಮೇಶ್ ಕೆಂಗಾಜೆ, ರಘುನಾಥ ಕೊಲ್ಲಿ, ಪುಷ್ಪಲತಾ ನೀಲಯ್ಯ ಗೌಡ ದೇವನಾರಿ, ಬೂತ್ ಅಧ್ಯಕ್ಷ ನಿತೇಶ್ ಕಡಿತ್ಯಾರು, ನವೀನ್ ಜೈನ್, ಸಂಜೀವ ಗೌಡ, ಕಾರ್ಯದರ್ಶಿಗಳಾದ ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ಪ್ರತೀಶ್ ಕಡಿತ್ಯಾರು, ಬಿಜೆಪಿ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು, ಮತದಾರರು ಉಪಸ್ಥಿತರಿದ್ದು ಪ್ರತಿಷ್ಠಿತ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು