Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ಮೇಷ ರಾಶಿ: ಇಕ್ಕಟ್ಟಿನ ಸ್ಥಿತಿಯಿಂದ ಹೊರಬರಲು ಆಗದು. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ತಪ್ಪಿನ ಮೂಲವನ್ನು ಹುಡುಕಿ ಸಮಯವನ್ನು ವ್ಯರ್ಥಮಾಡುವಿರಿ. ಪಾಲುದಾರಿಕೆಯಲ್ಲಿ ಉಂಟಾದ ಗೊಂದಲವನ್ನು ಸರಿ ಮಾಡಿಕೊಂಡೂ ಮೈತ್ರಿ ಮಾಡಿಕೊಂಡಲ್ಲಿ ಇಬ್ಬರಿಗೂ ಅನುಕೂಲವಿದೆ. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಇಂದು ಮಾಡಿಕೊಳ್ಳಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ.

ವೃಷಭ ರಾಶಿ: ಒಳ್ಳೆಯ ಮಾತುಗಳು ನಿಮ್ಮ ಕಿವಿಯ ಮೇಲೆ ಬೀಳಬಹುದು. ನ್ಯಾಯಸಮ್ಮತವಾದ ದಾರಿಯಲ್ಲಿ ಇದ್ದರೂ ನಿಮಗೆ ನೋವು ತಪ್ಪದು. ಆಶಾವಾದದಲ್ಲಿಯೇ ನಿಮ್ಮ ಇಂದಿನ ದಿನವನ್ನು ಕಳೆಯುವಿರಿ. ಯೋಜಿತ ಉದ್ಯಮದಲ್ಲಿ ಪಾಲುದಾರರನ್ನು ಸೇರಿಸಿಕೊಂಡು ಮುಂದುವರಿಯಿರಿ. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಉಪಕಾರವನ್ನು ಮರೆಯುವುದು ಬೇಡ. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ. ಕಡಿಮೆ ಖರ್ಚಿನಲ್ಲಿ ಇಂದಿನ ಕಾರ್ಯವು ನೋಡಿಕೊಳ್ಳಿ. ಉತ್ಸಾಹವನ್ನು ನಿಮ್ಮವರ ಚುಚ್ಚು ಮಾತು ಕಡಿಮೆ ಮಾಡಬಹುದು.

ಮಿಥುನ ರಾಶಿ: ನಿಮ್ಮ ಆಸಕ್ತಿಯು ಹೊಸ ಕ್ರಮದ ಹಾದಿಯಲ್ಲಿ ತೋರಿಸಬಹುದು, ನಿಮ್ಮ ಆಲೋಚನೆಗಳನ್ನು ಸರಿಯಾದ ಕಡೆ ವ್ಯಕ್ತಪಡಿಸಿ. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ರಾಜಕೀಯ ವ್ಯಕ್ತಿಗಳಿಂದ ಕೆಲಸಮಾಡಿಸಿಕೊಳ್ಳಲಿದ್ದೀರಿ. ಭವಿಷ್ಯದ ಕನಸು ಸಾಕಾರಗೊಳ್ಳುವುದು ಸುಲಭವಲ್ಲ. ತಾಳ್ಮೆಯಿಂದ ಸಾಧಿಸಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ಬೀಳುವಿರಿ. ನಿಮ್ಮ ಮೇಲೆ ಬರುವ ನಕಾರಾತ್ಮಕ ಮಾತುಗಳನ್ನು ಅಲ್ಲಗಳೆಯಲಾರಿರಿ. ಒಂದೇ ರೀತಿಯ ಕೆಲಸದಲ್ಲಿ ನಿಮಗೆ ನಿರುತ್ಸಾಹವಿರಲಿದೆ.

ಕರ್ಕಾಟಕ ರಾಶಿ: ಸುಲಭದ ತುತ್ತನ್ನು ಸಂಕಷ್ಟದಿಂದ ಜೀರ್ಣಿಸಿಕೊಳ್ಳುವಿರಿ. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇಂದು ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಲು ನಿಮಗೆ ಕಷ್ಟವೆನಿಸುವುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಕೃತಜ್ಞತೆಯಿಂದ ಏನನ್ನಾದರೂ ಕೊಡುವಿರಿ. ನಿಮ್ಮ ನಡವಳಿಕೆಯು ಅಹಂಕಾರವಾಗಿ ಬದಲಾಗಬಹುದು. ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ.

ಸಿಂಹ ರಾಶಿ: ಹೊಸ ಬಯಕೆಯನ್ನು ಇಟ್ಟು ಕಾರ್ಯವನ್ನು ಮಾಡುವಿರಿ. ಬೇಗ ಸಾಲವನ್ನು ತೀರಿಸಲು ನಿಮ್ಮ ಯೋಜನೆ ಕಾರ್ಯರೂಪಕ್ಕೆ ಬರುವುದು. ನಿಮ್ಮ ಗುರಿಯನ್ನು ತಲುಪಲು ಸಮಯ ಹಿಡಿಯುವುದು. ಎಂದುಕೊಂಡ ಕಾರ್ಯವು ಮುಗಿದು ಸಂಭ್ರಮದಲ್ಲಿ ಇರುವಿರಿ. ಕ್ರಿಯಾತ್ಮಕ ಚಟುವಟಿಕೆಯಲ್ಲಿ ಸಫಲತೆಯನ್ನು ಕಾಣುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಪರೋಕ್ಷವಾಗಿ ನಿಮ್ಮಿಂದ ಶತ್ರುಗಳಿಗೆ ಸಹಾಯವಾಗುವುದು. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ.

ಕನ್ಯಾ ರಾಶಿ: ಇಂದಿನ ದುಡಿಮೆಯಲ್ಲಿ ಸಿಕ್ಕಷ್ಟು ಅಲ್ಲ, ದಕ್ಕಿದಷ್ಟು ನಿಮ್ಮದೇ. ಸಂಘರ್ಷಗಳಿಗೆ ಸುಖಾಂತ್ಯವನ್ನು ಮಾಡಿದ್ದರೆ ಮತ್ತೇನಾದರೂ ಆದೀತು. ಮಾನಸಿಕ ವಿಶ್ರಾಂತಿ ಇಲ್ಲ ಎಂದು ಅನ್ನಿಸಬಹುದು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ಯಾರ ಬಳಿಯೂ ಅಹಂಕಾರವನ್ನು ತೋರಿಸುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಇಂದು ನೀವು ಮಾಡುವಿರಿ. ತಪ್ಪನ್ನು ಸರಿ ಮಾಡಿಕೊಂಡು ಸಾಗಬೇಕಾದೀತು.

ತುಲಾ ರಾಶಿ: ಗಳಿಸಿದ ಯಶಸ್ಸನ್ನು ನೀವೇ ಕೆಡಿಸಿಕೊಳ್ಳುವ ಸಾಧ್ಯತೆ ಇದೆ. ಇಂದಿನ ಕೆಲವು ಘಟನೆಗಳನ್ನು ಪ್ರತಿಕೂಲವಾಗಿ ತೆಗೆದುಕೊಂಡರೆ ಕಷ್ಟ. ಇಂದು ನಿಮಗೆ ಕಾರ್ಯದಿಂದ ತೃಪ್ತಿ ಸಿಗಲಿದೆ. ಇಂದಿನ ಸಮಯವನ್ನು ವ್ಯರ್ಥ ಮಾಡದೇ ನಿಮ್ಮದೇ ಸಮಯಸಾರಿಣಿಯನ್ನು ರೂಪಿಸಿಕೊಳ್ಳಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ಕಛೇರಿಯ ನಿಯಮಗಳು ನಿಮಗೆ ಹೊಂದಿಕೆಯಾಗದು. ಈಗಲೇ ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇವಲ ಓಡಾಟವಾಗುವುದು.

ವೃಶ್ಚಿಕ ರಾಶಿ; ಅಧಿಕ ಸಂಪಾದನೆಯು ನಿಮ್ಮ ಮಾರ್ಗವನ್ನು ತಪ್ಪಿಸುವುದು. ಸಮಯಕ್ಕೆ ಸರಿಯಾಗಿ ನಿಮ್ಮ ಬುದ್ಧಿಯು ಸ್ಫುರಿಸುವುದು. ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ಬಂಧುಗಳ ಎದುರು ಮಾತನ್ನು ಹರಿಬಿಡಬೇಡಿ. ಒಬ್ಬರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಎಲ್ಲದರ ಬಗ್ಗೆಯೂ ನಿಮ್ಮಲ್ಲಿ ಅನಿಶ್ಚಿತತೆ ಇರುವುದು. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು.

ಧನು ರಾಶಿ: ವಾತಾವರಣದ ಬದಲಾವಣೆಯಿಂದ ಸ್ವಾಸ್ಥ್ಯವು ಹಾಳಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗುವುದಷ್ಟೇ ಅಲ್ಲ, ಆರ್ಥಿಕ ಸಹಾಯವನ್ನೂ ನೀವು ಮಾಡಬೇಕಾಗುವುದು. ಅತಿಯಾದ ಪ್ರಯಾಣದಿಂದ ನೀವು ದುರ್ಬಲರಾಗುವಿರಿ. ಇತ್ತೀಚಿನ ಕೆಲವು ಸ್ಥಿತಿಗಳು ಒತ್ತಡವನ್ನು ತಂದಿರಬಹುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಗ್ನಿಗೆ ಏನೇ ಮಾಡಿದರೂ ತನ್ನ ಶಾಖ ನೀಡುವ ಸ್ವಭಾವವನ್ನು ಬಿಡದು. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು.

ಮಕರ ರಾಶಿ: ದೊಡ್ಡ ಮಟ್ಟದ ವ್ಯವಹಾರಕ್ಕೆ ಕೈಹಾಕಲು ಆರ್ಥಿಕ ಸಬಲತೆಯೂ ಬೇಕು. ಸುಮ್ಮನೇ ಮುಖಭಂಗವಾಗುವುದು. ಕುಟುಂಬದಲ್ಲಿ ಸಲ್ಲದ ಮಾತುಗಳು ಬರಬಹುದು. ಅದನ್ನು ತೆಗೆದುಕೊಂಡು ಹೋಗುವುದು ನಿಮ್ಮದೇ ಕಾರ್ಯವಾಗಬಹುದು. ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಯಾರಿಗೋ ಸಿಗಬೇಕಾದ ಹಣವು ನಿಮ್ಮ ಕೈ ಸೇರಬಹುದು. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ಹೊಂದಾಣಿಕೆಯ ಮನೋಭಾವವು ಇರಬೇಕಾದೀತು.

ಕುಂಭ ರಾಶಿ: ಮನ ಬಂದಂತೆ ವರ್ತಿಸಲು ನೀವು ಇಂದು ಸ್ವತಂತ್ರರಲ್ಲ. ನಿಮ್ಮ ಕಾರ್ಯದ ಅನುಭವದ ಮೇಲೆ ಉತ್ತಮ ಸ್ಥಾನವು ಪ್ರಾಪ್ತವಾಗುವುದು. ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗುವಿರಿ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಒಂದು ಕಾರ್ಯವು ಬಹೂಪಯೋಗಿಯಾಗುವಂತೆ ನೋಡಿ. ಇನ್ನೊಬ್ಬರನ್ನು ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಖರೀದಿಸುವಿರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯಬೇಕಾದೀತು.

ಮೀನ ರಾಶಿ: ಭೂ ಉತ್ಪನ್ನಗಳ ಮಾರಾಟವನ್ನು ಹೆಚ್ಚು ಮಾಡುವಿರಿ ಮತ್ತು ಅಧಿಕ‌ಲಾಭವೂ ಆಗುವುದು. ನಿಮ್ಮ ಉದ್ಯಮಕ್ಕೆ ಮನೆಯಿಂದ ಪ್ರೋತ್ಸಾಹ ಸಹಾಯಗಳು ಸಿಗದಿದ್ದರೂ ಬಂಧುಗಳಿಂದ ಸಿಗುವುದು. ಇಂದು ನೀವು ನಿಮ್ಮ ಉದ್ದೇಶಿಸಿದ್ದಕ್ಕಿಂತ ಅಧಿಕ ಮುನ್ನಡೆ ಸಾಧಿಸುವಿರಿ. ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ಕಳೆದು ಹೋದ ಸಂಗತಿಗಳನ್ನು ಮತ್ತೆ ಮತ್ತೆ ಹೇಳುವುದು ಬೇಡ. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮಾಗಿ ಇರಲು ನೀವು ಹೆಚ್ಚು ಇಷ್ಟಪಡುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳಿಂದ ಇಂದು ನಿಮಗೆ ಸಹಾನುಭೂತಿಯು ಸಿಗುವುದು.

Leave a Reply

Your email address will not be published. Required fields are marked *