ಮೇಷ ರಾಶಿ : ಇಂದು ಇನ್ನೊಬ್ಬರನ್ನು ನೋಡಿ ಬದುಕುವುದಕ್ಕಿಂತ ನಿಮ್ಮನ್ನೇ ನೋಡಿದರೆ ಒಳ್ಳೆಯದು. ನೀವು ಇಂದು ಸ್ನೇಹಿತನ ನಂಬಿಕಯಿಂದ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ನೀವು ನಿರೀಕ್ಷಿಸಿದ್ದ ಸಮಸ್ಯೆಯು ಬಾರದೇ ಹೋದೀತು. ಖಾಸಗಿಯ ಕೆಲಸವು ನಿಮಗೆ ಸಾಕೆನಿಸಬಹುದು. ಬಂಧುಗಳಿಂದ ಮಾನಸಿಕ ಹಿಂಸೆಯಾಗುವುದು. ಕೆಲಸದಲ್ಲಿ ಬದಲಾವಣೆಯು ನಿಮಗೆ ಬೇಕಾದೀತು. ಅಧಿಕಾರಿಗಳ ಪ್ರಶಂಸೆಯು ನಿಮ್ಮ ಕಾರ್ಯಕ್ಕೆ ಬಲವು ಬರಬಹುದು. ನಿಮ್ಮ ಕಾರ್ಯವನ್ನು ಇಂದೇ ಮುಗಿಸುವ ಚಿಂತೆಯಲ್ಲಿ ಇರುವಿರಿ. ಇಂದಿನ ಹಣಕಾಸಿನ ಹರಿವು ನಿಮಗೆ ಸಂತೋಷವನ್ನು ಕೊಡಬಹುದು. ಧನ ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು. ಇಂದು ಕಾರ್ಯದಲ್ಲಿ ಸ್ವಲ್ಪ ಒತ್ತಡವು ಇರಲಿದೆ.
ವೃಷಭ ರಾಶಿ : ಇಂದು ನಿಮ್ಮ ಅಸತ್ಯಗಳನ್ನು ಜನರು ಎಂದಿನಂತೆ ನಂಬಲಾರರು. ಇಂದು ನೀವು ಏನೂ ಕೆಲಸವಿಲ್ಲದೇ ಸಮಯವನ್ನು ವ್ಯರ್ಥಮಾಡುವಿರಿ. ಸಂಗಾತಿಯಿಂದ ನಿಮ್ಮ ಯೋಚನೆಗೆ ಪುಷ್ಟಿ ಸಿಗುವುದು. ಅನಾವಶ್ಯಕ ಆಲೋಚನೆಗಳಿಂದ ಮನಸ್ಸು ಕ್ಷೋಭೆಗೊಳ್ಳುವುದು. ಆರೋಗ್ಯದ ವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಯಾರೊಂದಿಗೂ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ನಿಮ್ಮ ಜವಾಬ್ದಾರಿಯ ಕಾರ್ಯಗಳು ಮುನ್ನೆಲೆಗೆ ಬರಬಹುದು. ಅಪರೂಪದ ದ್ರವ್ಯಗಳ ಸಂಗ್ರಹವನ್ನು ಮಾಡುವಿರಿ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ಕಷ್ಟವಾದೀತು. ನಿಮ್ಮ ವಿರುದ್ಧ ನಡೆಯುವ ತಂತ್ರವನ್ನು ನೀವು ಅರಿತುಕೊಳ್ಳುವಿರಿ.
ಮಿಥುನ ರಾಶಿ : ಇಂದು ಸ್ಪರ್ಧಾತ್ಮಕವಾಗಿ ನೀವು ಗೆಲ್ಲಲೇಬೇಕು. ಇಂದು ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ನಿಮ್ಮ ಕುಶಲ ಕಾರ್ಯದಿಂದ ಪ್ರಸಿದ್ಧಿ ದೊರೆಯುವುದು. ಉದ್ಯೋಗದಲ್ಲಿ ಹಳೆಯ ಸಮಸ್ಯೆಯು ಪುನಃ ಬಾರದಂತೆ ನೋಡಿಕೊಳ್ಳಿ. ವಾದವನ್ನು ಮಾಡುವ ಮುಂದಿರುವ ಜನರನ್ನು ನೋಡಿಕೊಳ್ಳಿ. ನಾಲಿಗೆಯನ್ನು ಹೇಗಾದರೂ ಹರಿ ಬಿಡುವುದು ಬೇಡ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕಾರ್ಯದಲ್ಲಿ ಒತ್ತಡವು ಮೇಲಧಿಕಾರಿಗಳಿಂದ ಬರುವುದು.
ಕರ್ಕಾಟಕ ರಾಶಿ : ಇಂದಿನ ದಿನ ಯಾರಿಂದಲೂ ನಿಮಗೆ ಸುಲಭವಾಗಿ ಮೆಚ್ಚುಗೆ ಸಿಗದು. ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಬಲವೃದ್ಧಿಗೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುವುದು ಉತ್ತಮ. ಮಹಿಳೆಯರು ಆದಾಯದಲ್ಲಿ ಮುನ್ನಡೆ ಸಾಧಿಸುವರು. ಕಾರ್ಯದಲ್ಲಿ ಆಗುವ ವ್ಯತ್ಯಾಸದಿಂದ ಕೋಪಗೊಳ್ಳುವುದು ಬೇಡ. ವಿದ್ಯಾರ್ಥಿಗಳ ಓದುವ ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಸರಿಯಾದ ತಿಳಿವಳಿಕೆ ಅಗತ್ಯ. ಅತ್ಯಂತ ಬೆಲೆ ಬಾಳುವ ಮರಗಳು ಎಂದಿಗೂ ಅಲ್ಪಕಾಲದಲ್ಲಿ ಬೆಳೆಯುವುದಿಲ್ಲ.
ಸಿಂಹ ರಾಶಿ : ಇಂದು ನಿಮಗೆ ಸಕಾಲಕ್ಕೆ ಸಿಗುವ ಸಹಾಯದಿಂದ ಸಂತೋಷವಾಗವುದು. ಇನ್ನೊಬ್ಬರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ನಿಮ್ಮ ವ್ಯಕ್ತಿತ್ವವು ಬೆಳಕಿಗೆ ಬರಲು ಇಂದು ಸಹಾಯಕವಾಗುವುದು. ಮೆಚ್ಚುಗೆಯ ಮಾತಿನಿಂದ ಸಂಕೋಚಗೊಳ್ಳುವಿರಿ. ಆರಿಸಿಕೊಂಡ ಆಯ್ಕೆಯು ನಿಮಗೆ ಇಷ್ಟವಾಗದೇ ಈಗ ಇರುವುದು. ಸಾಮಾಜಿಕ ಗೌರವದಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವಿರಿ. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರುವುದು. ಸಂಪಾದನೆಯ ಕಡೆ ಅಧಿಕ ಗಮನ ಇರಲಿದ್ದು ಸಂಬಂಧಗಳ ಬಗ್ಗೆ ಆಲೋಚನೆಯನ್ನು ಬಿಡುವಿರಿ.
ಕನ್ಯಾ ರಾಶಿ : ನಿಮ್ಮ ಹಸ್ತಕ್ಷೇಪವು ಇತರರಿಗೆ ಕಷ್ಟವಾಗದು. ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ತಂದೆಯ ವಿಚಾರದಲ್ಲಿ ಅನಾದರವು ಬರಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ಧನದ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಇಂದು ಅಧಿಕ ಒತ್ತಡವಿಲ್ಲದೇ ಕಾರ್ಯವು ಮುಗಿಯುವುದು. ವಿದೇಶ ಪ್ರಯಾಣದಿಂದ ಖುಷಿಯು ಇರಲಿದೆ. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಿ ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವರು. ನಿಮ್ಮ ಭಾವನೆಗೆ ಸ್ಪಂದಿಸುವವರನ್ನು ಹುಡುಕುವಿರಿ.
ತುಲಾ ರಾಶಿ : ದುಷ್ಟರ ಜೊತೆಗೂ ರಾಜಿ ಮಾಡಿಕೊಳ್ಳಬೇಕಾಗಬಹುದು. ಇಲ್ಲವಾದರೆ ನಿಮಗೆ ನೆಮ್ಮದಿ ಇರದು. ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ನಿಮಗೆ ಇಂದು ಧೈರ್ಯದ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ನಿಮ್ಮ ಶಕ್ತಿ ಮೀರಿದ ಕಾರ್ಯಕ್ಕೆ ಬೆಲೆ ಸಿಗದೇ ಹೋಗುವುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಕೊರತೆಯಾಗಿ ಮುಂದೂಡುವಿರಿ. ದಾಂಪತ್ಯದ ಇಂದಿನ ಕಲಹವನ್ನು ಅಲ್ಲಿಗೇ ನಿಲ್ಲಿಸಿ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗುವುದು. ನೇರವಾದ ಮಾತಿನಿಂದ ನಿಮಗೇ ನೋವಾಗುವುದು. ಬಂಧುಗಳ ಭೇಟಿಯು ನಿಮಗೆ ಸಮಾಧಾನವನ್ನು ತರದು. ತಾಯಿಯ ಜೊತೆ ವಾಗ್ವಾದಕ್ಕೆ ನಿಲ್ಲುವುದು ಬೇಡ.
ವೃಶ್ಚಿಕ ರಾಶಿ : ಇಂದು ಖರ್ಚು ಮಾಡುವ ಮೊದಲು ಏನು ಲಾಭವಿದೆ ಎಂಬ ಲೆಕ್ಕಾಚಾರದಲ್ಲಿ ಇರುವಿರಿ. ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ನೀವು ಯಾವ ಮಾತಿಗೂ ಜಗ್ಗದವರಂತೆ ಇರುವಿರಿ. ನಿಮ್ಮ ಮನೋವಿಕಾರಗಳು ಒಂದೊಂದಾಗಿಯೇ ಗೊತ್ತಾಗುವುದು. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು. ದಾಂಪತ್ಯದಲ್ಲಿ ಪ್ರೀತಿಗೆ ನೀವು ಮಾರುಹೋಗಬಹುದು. ಅತಿಥಿಗಳ ಆಗಮನವು ನಿಮ್ಮ ಮನೆಗೆ ಆಗಲಿದೆ. ವೃತ್ತಿಯಲ್ಲಿ ನಿಮ್ಮ ಸಹಕಾರಕ್ಕೆ ಪ್ರಶಂಸೆಯು ಸಿಗುವುದು. ಭವಿಷ್ಯದ ಜೀವನದ ಬಗ್ಗೆ ಭಯವು ಇರುವುದು. ನಿಮ್ಮ ಬಗ್ಗೆ ಅಪ್ರಾಮಾಣಿಕತೆಯ ಬಗ್ಗೆ ಮಾತುಗಳು ಕೇಳಿಬರುವುದು. ಪರಿಚಿತರ ಮಾತು ನಿಮ್ಮ ಮನಸ್ಸಿಗೆ ನಾಟುವುದು.
ಧನು ರಾಶಿ : ಇಂದು ನೀವು ಭಾವಪರವಶರಾಗುವ ಸಾಧ್ಯತೆ ಇದೆ. ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಡೆಯುವುದು. ವಿಳಂಬ ಕಾರ್ಯಕ್ಕೆ ಹೇಳಿಸಿಕೊಳ್ಳಬೇಕಾದೀತು. ಪದೋನ್ನತಿಯ ಬಗ್ಗೆ ಕೇಳಿದರೂ ಏನೂ ಪ್ರಯೋಜನವಾಗದು. ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಬಂಗಾರದ ಬಗ್ಗೆ ವ್ಯಾಮೋಹ ಹೆಚ್ಚಾಗಲಿದೆ. ಸಂಗಾತಿಯನ್ನು ಹಣಕ್ಕಾಗಿ ಪೀಡಿಸುವಿರಿ. ಪ್ರೀತಿ ಪಾತ್ರರನ್ನು ನೀವು ದೂರಮಾಡುವಿರಿ. ನಿರಂತರ ಕೆಲಸದಿಂದ ಸ್ವಲ್ಪ ವಿಶ್ರಾಂತಿಯು ಮುಖ್ಯವಾದೀತು. ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದಲ್ಲಿ ನಿರಾಸಕ್ತಿ ಬರುವುದು. ಎಲ್ಲ ಸನ್ನಿವೇಶದಲ್ಲಿಯೂ ನಿಮ್ಮ ವರ್ತನೆಯನ್ನು ಸರಿಯಾಗಿ ಇರಲಿ. ಸಂಗಾತಿಯ ಮೇಲೆ ನಿಮಗೆ ಸಿಟ್ಟು ಬರಲಿದೆ.
ಮಕರ ರಾಶಿ : ಇಂದು ನಿಮ್ಮ ಬಗ್ಗೆ ಬರುವ ಅಪವಾದವನ್ನು ನೀವು ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ತೃಪ್ತಿ ಇರದು. ನಿಮ್ಮ ಇಂದಿನ ಕೆಲಸವು ಯಶಸ್ಸಿನ ಶಿಖರವನ್ನು ಏರುವುದು. ದಿನವಿಡೀ ನಿಮಗೆ ಲಾಭದ ಅವಕಾಶಗಳು ಸಿಗುವುದು. ಮಾನಸಿಕ ಸ್ಥಿತಿಯೂ ಬಹಳ ಆಹ್ಲಾದದಿಂದ ಇರಲಿದೆ. ಯಾವ ಹೂಡಿಕೆಯು ನಿಮಗೆ ಲಾಭದಾಯಕವಾಗುವುದು. ಸಂಗಾತಿಯ ವಿಚಾರದಲ್ಲಿ ಸಂಪೂರ್ಣ ಖುಷಿ ಇರುವುದು. ವೃತ್ತಿಯಲ್ಲಿ ಒತ್ತಡವಿದ್ದರೂ ಅದನ್ನು ತೋರಿಸುವುದಿಲ್ಲ. ಅನ್ಯರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ಅಪರಿಚಿತ ಕರೆಗಳಿಗೆ ನೀವು ಸ್ಪಂದಿಸಲಾರಿರಿ. ಆಹಾರದ ಉದ್ಯಮಕ್ಕೆ ಎಂದಿಗಿಂತ ಅಧಿಕ ಲಾಭವು ಆಗಬಹುದು. ಮಾತುಗಳನ್ನು ಇಂದು ಕಡಿಮೆ ಆಡಲಿದ್ದೀರಿ.
ಕುಂಭ ರಾಶಿ : ನೀವು ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ತರುವಿರಿ. ಆಪ್ತರ ಮೇಲಿನ ನಂಬಿಕೆಯು ನಷ್ಟವಾಗುವುದು. ನಿಮ್ಮದಲ್ಲದ ಕಾರ್ಯಕ್ಕೆ ನೀವು ತಲೆ ಕೊಡಬೇಕಾದೀತು. ನಿಮ್ಮ ಸಂಗಾತಿಯು ಕೋಪಗೊಳ್ಳಬಹುದು. ನಿಮ್ಮ ಮಾತಿನಿಂದ ಸಮಾಧಾನವು ಬರುವುದು. ದೂರದ ಮಕ್ಕಳನ್ನು ನೋಡುವ ಆಸೆ ಆಗಲಿದೆ. ಉದ್ಯಮದ ಕಾರಣ ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ಅಪ್ತರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕು ಎಂದು ಅನಿಸುವುದು. ಖರ್ಚಿನ ದಾರಿಗಳು ಒಂದೊಂದೇ ತೆರೆಯುವುದು. ನಿಮ್ಮ ಮಾತಿಗೆ ಬೆಂಬಲವು ಸಿಗುವುದು. ನಿಮ್ಮ ಸೌಂದರ್ಯವು ಇತರರಿಗೆ ಇಷ್ಟವಾಗದು. ಹಲವು ಮಾನಸಿಕ ತೊಡಕುಗಳಿಂದ ನೀವು ಹೊರಬರುವಿರಿ.
ಮೀನ ರಾಶಿ : ಮಕ್ಕಳ ಜೀವನವನ್ನು ಕಂಡು ಇಂದು ದುಃಖವಾಗಬಹುದು. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ಪ್ರೀತಿಯ ಹೊಸ ಅಧ್ಯಾಯವನ್ನು ಆರಂಭ ಮಾಡುವಿರಿ. ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ. ಮಕ್ಕಳ ಮದುವೆಯ ಚಿಂತೆಯೂ ಒಮ್ಮಿಂದೊಮ್ಮೆಲೆ ಬರಬಹುದು. ನಿಮ್ಮ ಮಾತಿಗೆ ಕುಟುಂಬವು ಸಮ್ಮತಿಸಬಹುದು. ಔದಾರ್ಯವು ಅಧಿಕವಾಗಿ ಬೇಡ. ಆರ್ಥಿಕವಾಗಿ ಬಲಗೊಳ್ಳಲು ನೀವು ದೈವಕ್ಕೆ ಶರಣಾಗುವಿರಿ. ಇಂದು ಏಕಾಗ್ರತೆಯಿಂದ ಕಾರ್ಯವನ್ನು ಮಾಡಲು ಕಷ್ಟವಾದೀತು. ಆಗಬೇಕಾದ ಕಾರ್ಯಕ್ಕೆ ಇಂದಿನ ಸುತ್ತಾಟವು ವ್ಯರ್ಥವಾದೀತು.