Fri. Dec 27th, 2024

Ujire: ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ” ತರಬೇತಿಯ ಸಮಾರೋಪ ಸಮಾರಂಭ

ಉಜಿರೆ :(ನ.29) ನೀವು ಕಲಿಯುವ ಕೌಶಲ್ಯವು ನಿತ್ಯ ಪೂಜೆಯ ತರದಲ್ಲಿ ಅಭ್ಯಾಸ ಮಾಡಿದಾಗ ಮಾತ್ರ ಪರಿಪೂರ್ಣವಾಗುತ್ತದೆ. ಈ ಸಿದ್ದವನ ಪರಿಸರದಲ್ಲಿ ಆರಂಭವಾದ ಸಂಸ್ಥೆಗಳು ಅತ್ಯುತ್ತಮವಾದ ಪ್ರಗತಿಯನ್ನು ಹೊಂದಿದೆ. ಇಂದು ರಬ್ಬರ್‌ ಕೃಷಿ ಉತ್ತಮವಾದ ಕೃಷಿಯಾಗಿದೆ ಯಾಕೆಂದರೆ ರಬ್ಬರ್‌ ಅನೇಕ ವಸ್ತುಗಳ ತಯಾರಿಕೆಗೆ ಪೂರಕವಾಗಿದೆ.

ಇದನ್ನೂ ಓದಿ: ⭕ಮಂಗಳೂರು: ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ನಾಪತ್ತೆ

ರಬ್ಬರ್‌ ಕೃಷಿಯಲ್ಲಿ ರಬ್ಬರ್‌ ಟ್ಯಾಪಿಂಗ್‌ ಮುಖ್ಯ ಪಾತ್ರವಾಗಿದೆ. ಉತ್ತಮವಾದ ಟ್ಯಾಪರ್‌ ಇದ್ದಲ್ಲಿ ಉತ್ತಮವಾದ ಆದಾಯ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಕೌಶಲ್ಯದಲ್ಲಿ ನಿರಂತರವಾದ ಅಭ್ಯಾಸ ಮಾಡಿ ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ರಬ್ಬರ್‌ ಸೋಸೈಟಿಯಲ್ಲಿ ರಬ್ಬರ್‌ ಬೆಳೆಗಾರರಿಗೆ ಬೇಕಾದ ಅನುಕೂಲತೆಗಳನ್ನು ಸಹಾಯಧನ ರೂಪದಲ್ಲಿ ಒದಗಿಸುತ್ತಿದೆ.

ಅದರ ಪ್ರಯೋಜನ ಪಡೆದುಕೊಳ್ಳಿ. ರಬ್ಬರ್‌ ಬೆಳೆಯಲ್ಲಿ ಪರಾವಂಲಬನೆ ಕಡಿಮೆ. ಇತರ ಬೆಳೆಗಳಲ್ಲಿ ಪರಾವಂಲಬನೆ ಹೆಚ್ಚು ಇರುತ್ತದೆ. ರಬ್ಬರ್‌ಗೆ ಬೇಡಿಕೆ ಇನ್ನು ಮುಂದಿನಗಳಲ್ಲಿ ಇನ್ನೂ ಆಗುತ್ತದೆ. ನೀವು ಕಲಿತ ವಿದ್ಯೆಯ ನಿಮಗೆ ಯಶಸ್ಸು ತರಲಿ. ಎಂದು ಉಜಿರೆಯ ಬೆಳ್ತಂಗಡಿ ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಶ್ರೀಧರ ಜಿ ಭಿಡೆ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದೆ “ರಬ್ಬರ್‌ ಟ್ಯಾಪಿಂಗ್‌ ” ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ತಮ್ಮ ಅನುಭವದ ಹಂಚಿಕೊಂಡು ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಶ್ರೀ ರಾಘವೇಂದ್ರ ಮತ್ತು ಶ್ರೀ ರಮೇಶ್‌ ಪ್ರಾರ್ಥನೆ ಮಾಡಿದರು. ಶಿರಾರ್ಥೀಗಳಾದ ರಾಜು, ರಾಘವೇಂದ್ರ, ಅಖೀಲ್‌ ತನ್ನ ತರಬೇತಿಯ ಅನುಭವ ಹಂಚಿಕೊಂಡರು.

Leave a Reply

Your email address will not be published. Required fields are marked *