Fri. Dec 27th, 2024

Kerala: ಶಬರಿಮಲೆ ಯಾತ್ರಾರ್ಥಿಗಳಿಗೆ ದಕ್ಷಿಣ ರೈಲ್ವೆ ಚೆನ್ನೈ ವಿಭಾಗದಿಂದ ಖಡಕ್ ಎಚ್ಚರಿಕೆ – ಏನದು?

ಕೇರಳ :ಶಬರಿಮಲೆಗೆ ತೆರಳುವ ಭಕ್ತರಿಗೆ ದಕ್ಷಿಣ ರೈಲ್ವೆ ಚೆನ್ನೈ ವಿಭಾಗ ಸೂಚನೆಯೊಂದನ್ನು ರವಾನಿಸಿದೆ. ನಿಯಮ ಮೀರಿದರೆ ದಂಡ ಅಥವಾ ಜೈಲು ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿದೆ.

ಕೆಲ ಭಕ್ತರು ತಮ್ಮ ಪ್ರಯಾಣದ ಅವಧಿಯಲ್ಲಿ ಕರ್ಪೂರ ಬೆಳಗುತ್ತಾರೆ. ಇದರಿಂದ ಬೆಂಕಿ ಅವಘಡ ಸಂಭವಿಸುವ ಅಪಾಯ ಇರುತ್ತದೆ.

ಹೀಗಾಗಿ ರೈಲ್ವೆ ಪ್ರಯಾಣಿಕರ ಹಾಗೂ ರೈಲ್ವೆ ಆಸ್ತಿಗಳ ಸುರಕ್ಷತೆ ದೃಷ್ಟಿಯಿಂದ ಕರ್ಪೂರ ಬೆಳಗದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದೇವೆ.

ಕರ್ಪೂರ ಅಥವಾ ಇತರೆ ಯಾವುದೇ ಬೆಂಕಿ ಹಚ್ಚುವ ಚಟುವಟಿಕೆ ಮಾಡಬಾರದು ಎಂದು ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *