Fri. Dec 27th, 2024

Bandaru : ಪೇರಲ್ದಪಳಿಕೆ ನಿವಾಸಿ ಶ್ರೀಮತಿ ಗೌರಿ ಸುಂದರ ಗೌಡ ರವರ ಮನೆಯಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷ!!

ಬಂದಾರು :(ಡಿ.2) ಬಂದಾರು ಗ್ರಾಮದ ಪೇರಲ್ದಪಳಿಕೆ ನಿವಾಸಿ ಶ್ರೀಮತಿ ಗೌರಿ ಸುಂದರ ಗೌಡ ಇವರ ನಿವಾಸದಲ್ಲಿ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡಿದೆ.

ಇದನ್ನೂ ಓದಿ: 🛑Mangaluru: ಹೆಲ್ಮೆಟ್ ನಿಂದ ಬಸ್‌ನ ಗಾಜು ಒಡೆದು ಪರಾರಿಯಾದ ಬೈಕ್ ಸವಾರ..!!


ಮನೆಯ ಮುಂಭಾಗದಲ್ಲಿ ಸ್ವಚ್ಛ ಗೊಳಿಸುತ್ತಿರುವಾಗ ಹಾವೊಂದು ಗೋಚರಿಸುತ್ತದೆ, ಗೌರಿ ಅವರು ಕೇರೆ ಹಾವು ಎಂದು ಭಾವಿಸಿ ತನ್ನ ಮನೆಯ ಅಂಗಳದ ಸ್ವಚ್ಛತೆ ಯನ್ನು ಮುಗಿಸಿ ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಮರುದಿನ ಬೆಳಗ್ಗಿನ ಸಮಯದಲ್ಲಿ ನೋಡಿದರೂ ಹಾವು ಅದೇ ಸ್ಥಳದಲ್ಲಿರುವುದನ್ನು ಕಂಡು ಭಯಭೀತರಾಗಿ ತನ್ನ ಮನೆಯವರಿಗೆ ಹಾಗೂ ನೆರೆ ಹೊರೆಯ ಮನೆಯವರಿಗೆ ಮಾಹಿತಿ ನೀಡಿದರು.

ಅದನ್ನು ಗಮನಿಸಿದಾಗ ಕಾಳಿಂಗ ಸರ್ಪವೆಂದು ಗೊತ್ತಾಗಿ, ತಕ್ಷಣವೇ ಉಪ್ಪಿನಂಗಡಿಯ ನಿವಾಸಿಯಾದ ಸ್ನೇಕ್ ಝಕಾರಿಯ ಇವರನ್ನು ಸಂಪರ್ಕಿಸಿದರು. ತಕ್ಷಣ ಅವರು ಸ್ಥಳಕ್ಕೆ ಧಾವಿಸಿ ಜಾಣ್ಮೆಯಿಂದ ಹಾವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದು ಪೆರಿಯಶಾಂತಿ ಬಳಿ ಕಾಡಿಗೆ ಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಸ್ನೇಕ್ ಝಕಾರಿಯ ಅವರ ಹೇಳಿಕೆಯ ಪ್ರಕಾರ ಈ ಹಾವು ಸುಮಾರು 9 ಅಡಿ ಉದ್ದವಿದ್ದು ಅಂದಾಜು ಒಂದೂವರೆ ವರುಷದ ಹಾವು ಎಂದು ತಿಳಿಸಿದರು.

Leave a Reply

Your email address will not be published. Required fields are marked *