Fri. Dec 27th, 2024

Kadaba: ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆ!! – ಆಮೇಲೆ ಪತ್ತೆಯಾಗಿದ್ದು ಮಾತ್ರ ಹೆಣವಾಗಿ!! – ಆರೋಪಿ ಪ್ರತೀಕ್ ಪೊಲೀಸ್ ವಶಕ್ಕೆ !!

ಕಡಬ :(ಡಿ.3) ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಇದೊಂದು ನಾಪತ್ತೆ ಪ್ರಕರಣವಲ್ಲ ಬದಲಾಗಿ ಕೊಲೆ ಎಂಬುದು ಈಗ ಗೊತ್ತಾಗಿದೆ. ಇದೀಗ ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.

ಇದನ್ನೂ ಓದಿ: ಮಂಗಳೂರು : ತಲಪಾಡಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕರು


ನೆಟ್ಟಣ ರೈಲು ನಿಲ್ದಾಣದ ಸುಮಾರು ಒಂದುವರೆ ಕಿ.ಮೀ ದೂರದ ನಾರಡ್ಕ ಎಂಬಲ್ಲಿ ದಟ್ಟ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಪ್ರಕರಣದಲ್ಲಿ ಕೇಳಿ ಬಂದಿರುವ ಪ್ರತೀಕ್ ಎಂಬಾತನನ್ನು ಪೊಲೀಸರು ಕರೆದೊಯ್ದಿದ್ದು ಈ ವೇಳೆ ಸಾರ್ವಜನಿಕರು ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಸ್ಥಳದಲ್ಲಿ ಡಿವೈಎಸ್ಪಿ, ವೃತ್ತ ನಿರೀಕ್ಷರು ಮತ್ತು ಕಡಬ ಎಸ್.ಐ ನೇತೃತ್ವದ ಪೊಲೀಸರು, ಸಾರ್ವಜನಿಕರು ಸೇರಿದ್ದರು.

ಈ ಘಟನೆಗೆ ಸಂಬಂಧಿಸಿ ಭಾನುವಾರ ರಾತ್ರಿಯೇ ಇಬ್ಬರನ್ನು ವಶಕ್ಕೆ ಪಡೆದು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಕಡಬ ಠಾಣೆಗೆ ಡಿವೈಎಸ್ಪಿ ಆಗಮಿಸಿ ಮಾಹಿತಿ ಕಲೆ ಹಾಕಿದ್ದರು. ನೆಟ್ಟಣ ಬಳಿ ನಾಪತ್ತೆಯಾದ ಯುವಕನ ಕೊಲೆಯಾಗಿದೆ ಎಂಬ ಸುದ್ದಿ ಭಾನುವಾರ ರಾತ್ರಿ ಹಬ್ಬಿತ್ತು ಸೋಮವಾರ ಪೊಲೀಸರು ನೆಟ್ಟಣಕ್ಕೆ ಬರುವ ತಯಾರಿ ಮಾಡಿದ್ದು, ಈ ಸುದ್ದಿಯ ಹಿನ್ನೆಲೆಯಲ್ಲಿ ನೆಟ್ಟಣ ಮುಖ್ಯ ಪೇಟೆಯಲ್ಲಿ ಅಧಿಕ ಜನರು ಸೇರಿದ್ದರು.ನೆಟ್ಟಣದಲ್ಲೂ, ಠಾಣೆಯಲ್ಲೂ ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದರು.


ಪೊಲೀಸರು ಮೃತ ದೇಹ ಇರುವ ಸ್ಥಳದ ಬಗ್ಗೆ ಸುಳಿವು ನೀಡದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಹಲವು ವದಂತಿಗಳು ಹಬ್ಬಿತ್ತು. ಸಂದೀಪ್ ಮರ್ದಾಳದಲ್ಲಿ ವಿನಯ ಎಂಬುವವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು ನ. 27ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ.


ಈ ಬಗ್ಗೆ ಶಾಮಿಯಾನ ಮಾಲಕ ಅವರಲ್ಲಿ ವಿಚಾರಿಸಿದಾಗ ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್ ನೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿದ್ದರು. ಆ ದಿನ ಮನೆಗೆ ಬಾರದೇ ಇದ್ದಾಗಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರೋಜಾ ಅವರು ಕಡಬ ಠಾಣೆಗೆ ದೂರು ನೀಡಿದ್ದರು.

Leave a Reply

Your email address will not be published. Required fields are marked *