Wed. Dec 4th, 2024

Belthangady: ಕೆಸಿಎಫ್ ಶಾರ್ಜಾ ಝೋನ್ 2024-2026 ನವ ಸಾರಥ್ಯ ಅಧ್ಯಕ್ಷರಾಗಿ ರಫೀಕ್ ತೆಕ್ಕಾರ್

ಬೆಳ್ತಂಗಡಿ:(ಡಿ.3) ಅನಿವಾಸಿ ಭಾರತೀಯರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆಸಿಎಫ್ ) ಇದರ ಶಾರ್ಜಾ ಝೋನ್ ಸಮಿತಿಯ 2022-24 ವಾರ್ಷಿಕ ಮಹಾಸಭೆಯು ನ.29 ರಂದು MAM PARTY HALL ABUSHAGARA ದಲ್ಲಿ ಝೋನ್ ಅಧ್ಯಕ್ಷ ರಫೀಕ್ ತೆಕ್ಕಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದನ್ನೂ ಓದಿ:ಉಜಿರೆ: ಶೃಂಗೇರಿ ಜಗದ್ಗುರು ಗಳ ಸನ್ನಿಧಿಯಲ್ಲಿ ನಡೆದ ಭಗವದ್ಗೀತೆ ಕಂಠಪಾಠ ಪರೀಕ್ಷೆ

ಅಸ್ಸಯ್ಯಿದ್ ಅಬೂಬಕರ್ ಕೋಲ್ಪೆ ತಂಙಳ್ ರವರ ದುವಾ ದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ರಫೀಕ್ ತೆಕ್ಕಾರು, ಪ್ರಧಾನ ಕಾರ್ಯದರ್ಶಿಯಾಹಿ ತಾಜುದ್ದೀನ್ ಅಮ್ಮುಂಜೆ, ಕೋಶಾಧಿಕಾರಿಯಾಗಿ ಉಮರ್ ಬದ್ಯಾರ್ ಇವರು ಆಯ್ಕೆಯಾದರು.


ನಾಲೆಡ್ಜ್ ವಿಭಾಗದ ಅಧ್ಯಕ್ಷರಾಗಿ ಅಬೂಬಕ್ಕರ್ ತಂಙಳ್ ಕೊಲ್ಪೆ, ಕಾರ್ಯದರ್ಶಿ ಯಾಗಿ ನಿಝಾಮುದ್ದೀನ್ ಸಖಾಫಿ ಕೋಡಿ, ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಮಂಜನಾಡಿ, ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಉಳ್ಳಾಲ, ಎಡ್ಮಿನ್ ಪಿಆರ್ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ಲಕುಂಞಿ ಹಾಜಿ ಪೆರುವಾಯಿ, dulla ಕಾರ್ಯದರ್ಶಿಯಾಗಿ ಶಾದುಲಿ ಬೆಮದೂರು, ಇಹ್ಸಾನ್ ಅಧ್ಯಕ್ಷರಾಗಿ ರಝಾಕ್ ಮುಸ್ಲಿಯಾರ್ ಪದ್ಮುಂಜ,


ಕಾರ್ಯದರ್ಶಿಯಾಗಿ ಶರೀಫ್ ಮದನಿ ಕುಪ್ಪೆಟ್ಟಿ, ಪಬ್ಲಿಕೇಶನ್ ಅಧ್ಯಕ್ಷರಾಗಿ ಜಬ್ಬಾರ್ ಹಾಜಿ ಇನೋಳಿ, ಶೌಕತ್ ಕೂಳೂರು, ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ
ಇಸಾಕ್ ಕೂರ್ನಡ್ಕ, ಕಾರ್ಯದರ್ಶಿಯಾಗಿ ಅನ್ಸಾರ್ ಸಾಲೆತ್ತೂರು, ಪ್ರೊಫೆಶನಲ್ ಅಧ್ಯಕ್ಷರಾಗಿ ಅಶ್ರಫ್ ಸತ್ತಿಕಲ್, ಕಾರ್ಯದರ್ಶಿಯಾಗಿ ಲೆತೀಫ್ ತಿಂಗಳಾಡಿ ಇವರುಗಳು ಆಯ್ಕೆಯಾದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ ಸಭೆಯನ್ನು ಉದ್ಘಾಟಿಸಿ ದರು. ಝೋನ್ ಪ್ರಧಾನ ಕಾರ್ಯದರ್ಶಿ ಹುಸೈನ್ ಇನೋಳಿ ಲವಾರ್ಷಿಕ ವರದಿ ವಾಚಿಸಿ, ಕೋಶಾಧಿಕಾರಿ ಹಾಜಿ ಶರೀಫ್ ಸಾಲೆತ್ತೂರು ಲೆಕ್ಕಪತ್ರ ಮಂಡಿಸಿದರು.
UAE ರಾಷ್ಟ್ರೀಯ ಸಮಿತಿಯಿಂದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕೆದಂಬಾಡಿ ವೀಕ್ಷಕರಾಗಿದ್ದು, 2024-2026 ಶಾರ್ಜಾ ಝೋನ್ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ವೇದಿಕೆಯಲ್ಲಿದ್ದUAE ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸ ಹಾಜಿ ಬಸರ, ಕಲಂದರ್ ಕಬಕ, ಹಂಝ ಎಮ್ಮೆಮ್ಮಾಡು, ಅಂತಾರಾಷ್ಟ್ರೀಯ ಸಮಿತಿ ಪಬ್ಲಿಕೇಷನ್ ಪ್ರೆಸಿಡೆಂಟ್ ಕರೀಂ ಮುಸ್ಲಿಯಾರ್ ಶುಭಕೋರಿದರು. ನೂತನ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಅಮ್ಮುಂಜೆ ವಂದಿಸಿದರು.

ಕೆಸಿಎಫ್ ಸದಸ್ಯತ್ವ2024 ಅಭಿಯಾನದಲ್ಲಿ ಶಾರ್ಜಾ ಝೋನ್ 749 ನೂತನ ಸದಸ್ಯರನ್ನು ನೊಂದಾಯಿಸಿ ಝೋನ್ ಅದೀನದಲ್ಲಿ 4 ಸೆಕ್ಟರ್ ಮತ್ತು 16 ಶಾಖೆ ಕಾರ್ಯಾಚರಿಸುತ್ತಿದೆ.

ಕಾರ್ಯಕ್ರಮಕ್ಕೆ ಮುಂಚಿತವಾಗಿ UAE EID AL ETIHAD 53 ಆಚರಿಸಲಾಯಿತು. ಇಬ್ರಾಹಿಂ ಸಖಾಫಿ ಕೆದಂಬಾಡಿ ಸಂದೇಶ ಭಾಷಣ ಮಾಡಿದರು.

Leave a Reply

Your email address will not be published. Required fields are marked *