Wed. Dec 4th, 2024

Belthangady: ವಕೀಲರ ಭವನದಲ್ಲಿ ವಕೀಲರ ದಿನಾಚರಣೆ

ಬೆಳ್ತಂಗಡಿ:(ಡಿ.3) ವಕೀಲರ ಸಂಘ (ರಿ.) ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ಇದರ ನೇತೃತ್ವದಲ್ಲಿ ವಕೀಲರ ದಿನಾಚರಣೆ ಯನ್ನು ಆಚರಿಸಲಾಯಿತು.

ಇದನ್ನೂ ಓದಿ: ಬೆಳ್ತಂಗಡಿ: ಅಂಡಿಂಜೆ ಸರಕಾರಿ ಶಾಲೆ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.5ಲಕ್ಷ ರೂ. ನೆರವು

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶ್ರೀ ಮನು ಬಿ.ಕೆ ಸಮಾಜದಲ್ಲಿ ವಕೀಲರ ಸ್ಥಾನಮಾನ, ನ್ಯಾಯಾಲಯ ಮತ್ತು ವಕೀಲ ನಡುವಿನ ಸಂಬಂಧದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ನ್ಯಾಯವಾದಿ ಶ್ರೀ ಸುಬ್ರಹ್ಮಣ್ಯ ಕುಮಾರ್ ಅಗರ್ತ ರವರು ವಕೀಲ ವೃತ್ತಿಗೆ ಸಮಾಜದಲ್ಲಿ ಇರುವ ಗೌರವದ ಬಗ್ಗೆ ಮಾತನಾಡುತ್ತಾ ಅತಿ ಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿದೆ. ಸಮಾಜಕ್ಕೆ ಮಾರ್ಗದರ್ಶನವನ್ನು ನೀಡುವ ಹಾಗೂ ಸಮಾಜದೊಂದಿಗೆ ಬೆರೆಯುವ ಅವಕಾಶವನ್ನು ಈ ವೃತ್ತಿಯಲ್ಲಿ ನಾವು ಕಾಣಬಹುದಾಗಿದೆ, ವಕೀಲರ ಜವಾಬ್ದಾರಿಗಳ ಬಗ್ಗೆ ಬಹಳ ಅರ್ಥವತ್ತಾಗಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ವಿವರಿಸಿದರು.

ವೇದಿಕೆಯಲ್ಲಿ ವಕೀಲರ ಹಿರಿಯ ಸಮಿತಿಯ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಎಸ್ ಲೋಬೊ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನವೀನ್ ಬಿ ಕೆ ಹಾಗೂ ಯುವ ವಕೀಲರ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂದೀಪ್ ಡಿಸೋಜ ಉಪಸ್ಥಿತರಿದ್ದರು.

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಹಿರಿಯ ವಕೀಲರಾದ ಶ್ರೀ ಪಿ ಸುಬ್ರಹ್ಮಣ್ಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಪ್ರಯುಕ್ತ ವಕೀಲರಿಗೆ ಆಯೋಜಿಸಲಾಗಿದ್ದ ಮನೋರಂಜನ ಸ್ಪರ್ಧೆಗಳ ಬಹುಮಾನವನ್ನು ವಿಜೇತ ತಂಡಗಳಿಗೆ ವಿತರಿಸಲಾಯಿತು.

ಈ ಸಮಾರಂಭದಲ್ಲಿ ಯುವ ವಕೀಲರ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಜೋಸ್ನಾ ವೆಲೋನ ಕೊರೆಯ ಶ್ರೀಮತಿ ಅಸ್ಮಾ, ಶ್ರೀಮತಿ ಉಷಾ ಎನ್ ಜಿ ರವರು ಸಹಕರಿಸಿದರು .

ಹಿರಿಯ ವಕೀಲರಾದ ಶ್ರೀ ಶಿವಕುಮಾರ್ ಎಸ್ಎಂ ರವರು ಸಿಹಿ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು.

ಯುವ ವಕೀಲರಾದ ಕು. ಸೌಮ್ಯ ಎಲ್ಲರನ್ನು ಸ್ವಾಗತಿಸಿದರು. ಪ್ರಾರ್ಥನೆಯನ್ನು ಕು ಪ್ರತೀಕ್ಷಾ ನೆರವೇರಿಸಿದರು, ಜಿತೇಶ್ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಯಕ್ಷಿತಾ ನೆರವೇರಿಸಿದರು.

Leave a Reply

Your email address will not be published. Required fields are marked *