Thu. Dec 5th, 2024

ಮೇಷ ರಾಶಿ :ನೀವು ತೊಡಗಿಕೊಳ್ಳುವ ವ್ಯವಹಾರದಲ್ಲಿ ಅನುಭವ ಅಥವಾ ಅನುಭವಿಗಳ ಮಾರ್ಗದರ್ಶನ ಇರಲಿ. ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಇಂದು ನೀವು ಬಂಧುಗಳ ಬಳಿ ಸಾಲಕ್ಕೆ ಕೈ ಚಾಚುವುದು ಬೇಡ. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯನ್ನು ಪ್ರಶ್ನಿಸಬಹುದು.

ವೃಷಭ ರಾಶಿ :ಇಂದು ಅಸ್ಥಿರತೆಯು ನಿಮ್ಮನ್ನು ಅಧಿಕವಾಗಿ ಕಾಡಬಹುದು. ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ನಿಮ್ಮ ಮಾತುಕತೆ ಇರಲಿದೆ. ವ್ಯವಹಾರದಲ್ಲಿ ಇಂದು ನಿಮ್ಮ ಚುರುಕುತನ ಸಾಕಾಗದು. ತಾಯಿಯ ಕಡೆಯಿಂದ ಧನದ ನಿರೀಕ್ಷೆಯಲ್ಲಿ ಇರುವಿರಿ. ಇನ್ನೊಬ್ಬರ ಸಂತೋಷಕ್ಕೆ ಸುಳ್ಳು ಹೇಳುವ ಸಾಧ್ಯತೆ ಇದೆ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡುವಿರಿ. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸಬೇಕಾದೀತು.

ಮಿಥುನ ರಾಶಿ :ವ್ಯವಹಾರದ ಮಧ್ಯದಲ್ಲಿ ನೀವು ಕಳೆದುಹೋಗಬಹುದು. ಓಡಾಟದಲ್ಲಿ ಕೆಲವು ಅಡೆತಡೆಗಳು ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.‌ ಕಿರಿಯರಿಂದ ನೀವು ಸಲ್ಲದ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು.

ಕರ್ಕಾಟಕ ರಾಶಿ :ಹೂಡಿಕೆಯಿಂದ ಆದ ಲಾಭವನ್ನು ಪರೀಕ್ಷಿಸಿಕೊಂಡು ಮುಂದುವರಿಯುವುದು ಒಳ್ಳೆಯದು. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ವಿಳಂಬವಾಗಿ ನಡೆಯುವ ವಿವಾಹಕ್ಕೆ ಸಂತೋಷವಿರಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.

ಸಿಂಹ ರಾಶಿ :ರಾಜಕಾರಣದ ದಿಕ್ಕು ನಿಮಗೆ ಅರ್ಥವಾಗುವುದು ಕಷ್ಟ. ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು. ವಿದ್ಯಾಭ್ಯಾಸದ‌ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳುವಿರಿ.

ಕನ್ಯಾ ರಾಶಿ :ನಿಮ್ಮ ನೋಟದ ಬಗ್ಗೆ ದೂರು ಬರಬಹುದು. ಸ್ನೇಹಿತರ ಜೊತೆ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ವಿನ್ಯಾಸಕಾರರಿಗೆ ಪೂರಕವಾದ ಕಾರ್ಯವು ಸಿಗುವುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಸತ್ಯವನ್ನು ನೀವು ಮಾರ್ಮಿಕವಾಗಿ ಹೇಳುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ.

ತುಲಾ ರಾಶಿ :ನಿಮ್ಮ ಪದಾಧಿಕಾರವು ತಪ್ಪುವ ಸಾಧ್ಯತೆ ಇದೆ. ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗುವುದು. ನಿಮ್ಮ ನಿರೀಕ್ಷೆಯ ಸಮಯವು ಬಾರದೇ ನಿಮಗೆ ಬೇಸರವಾಗುವುದು.

ವೃಶ್ಚಿಕ ರಾಶಿ :ನೋವಾಗುವಂತೆ ಇಂದು ಮಾತನಾಡಿ ಅನಂತರ ಕ್ಷಮೆಯನ್ನು ಕೇಳುವ ಹಾಗೆ ನಟನೆ ಮಾಡುವಿರಿ. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು.ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲ್ಲು ಪತ್ನಿಯಿಂದ ಪ್ರಚೋದಿತರಾಗುವಿರಿ. ಉದ್ಯೋಗದ ಪಡೆಯಲು ನೀವು ಕಾದು ಸಮಯವನ್ನು ಹಾಳು ಮಾಡುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಉತ್ತಮ. ಕೂಡಿಬರುವ ವಿವಾಹಭಾಗ್ಯವನ್ನು ನೀವು ಒಪ್ಪಿಕೊಳ್ಳುವಿರಿ.

ಧನು ರಾಶಿ :ಇಂದು ಯೋಜಿತವಾದ ಪ್ರಯಾಣವನ್ನು ಮುಂದೂಡುವುದು ಉಚಿತ. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ‌ ತಿಳಿದುಕೊಳ್ಳದೇ ಮಾತನಾಡಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಅನಾಥಪ್ರಜ್ಞೆಯು ಕಾಡಲಿದ್ದು ದುಃಖವನ್ನು ನಿಯಂತ್ರಿಸುವಿರಿ.

ಮಕರ ರಾಶಿ :ಇಂದು ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗಲಿದೆ.ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವು ಆಗುವುದು. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು.

ಕುಂಭ ರಾಶಿ :ಸ್ಪರ್ಧೆಯಲ್ಲಿ ಸೋಲುವುದು ಸೋಲಲ್ಲ, ಮುಂದೆ ಸಾಗದಿರುವುದೇ ಸೋಲು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು. ಆಪ್ತರ ಸಹವಾಸದಿಂದ ಉತ್ತಮ‌ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ. ಇಂದು ಕಛೇರಿಯಲ್ಲಿ ಆದ ಕಲಹವು ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೂ ಹೋಗುವುದು.‌

ಮೀನ ರಾಶಿ :ಊಹಿಸದ ಕೆಲವನ್ನು ಪಡೆಯಬೇಕಾಗುವುದು. ಹಲವು ದಿನಗಳ ಹೋರಾಟದ ಫಲವಾಗಿ ನಿಮ್ಮ ಸ್ಥಳವನ್ನು ಪುನಃ ಪಡೆದುಕೊಳ್ಳುವಿರಿ. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ.

Leave a Reply

Your email address will not be published. Required fields are marked *