Fri. Dec 27th, 2024

Love Jihad:‌ ಹಿಂದೂ ಎಂದು ಬಿಂಬಿಸಿ ಲವ್‌ ಜಿಹಾದ್‌ – ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ರಹಸ್ಯ!! – ಪಾಕಿಸ್ತಾನದ ಜೊತೆಗೆ ನಂಟು ಹೊಂದಿದ್ದ ಆರಿಫ್ ಅಂದರ್!!

Love Jihad:(ಡಿ.5) ದೇಶದ ನಾನಾ ಭಾಗದಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಹಿಂದೂ ಹೆಸರನ್ನಿಟ್ಟುಕೊಂಡು ಮುಸ್ಲಿಂ ಯುವಕರು ವಂಚಿಸಿ ಹಿಂದೂ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಅಷ್ಟಲ್ಲದೆ ಹಲವು ಹುಡುಗಿಯರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದಾರೆ. ಸದ್ಯ ಅಂತಹದ್ದೇ ಘಟನೆಯೊಂದು ಮುನ್ನಲೆಗೆ ಬಂದಿದೆ. ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಘಾತಕಾರಿ ಅಂಶ ಬಯಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಚಿನ್ನಾಭರಣ ಪಡೆದು ವಾಪಸ್‌ ಕೊಡದೆ ಸತಾಯಿಸಿದ ಸ್ನೇಹಿತ

ಮುಸ್ಲಿಂ ಯುವಕ ಹಿಂದೂ ಎಂದು ನಂಬಿಸಿ ಹಲವು ಹುಡುಗಿಯರನ್ನು ಲವ್ ಜಿಹಾದ್ ಕೂಪಕ್ಕೆ ದೂಡಲು ಯತ್ನಿಸಿದ್ದಾನೆ. ಹಿಂದೂ ಸಂಘಟನೆಗಳು ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಅಲ್ಲದೇ ಯುವಕನ ವಿರುದ್ಧ ಗಂಭೀರ ಆರೋಪ ಮಾಡಿ ಪೊಲೀಸರಿಗೆ ಲಿಖಿತ ಅರ್ಜಿ ಸಲ್ಲಿಸಿದ್ದಾರೆ.

ಹಿಂದೂ ಹೆಸರನ್ನಿಟ್ಟುಕೊಂಡು ಆಮಿಷ:


ಲವ್ ಜಿಹಾದ್ ಆರೋಪದ ಮೇಲೆ ಆರಿಫ್ ಖುರೇಷಿ ಎಂಬಾತನನ್ನು ಹಿಂದೂ ಜಾಗರಣ ಮಂಚ್ ಬಂಧಿಸಿದೆ. ಸಮೀರ್ ಸಿಂಗ್ ಹೆಸರಿನಲ್ಲಿ ಹುಡುಗಿಯರಿಗೆ ಆಮಿಷವೊಡ್ಡುತ್ತಿದ್ದ ಎನ್ನಲಾಗಿದೆ. ಇದಲ್ಲದೇ ಪಾಕಿಸ್ತಾನದಿಂದ ಮೊಬೈಲ್ ಸಂಖ್ಯೆಗೆ ಕರೆ ಮಾಡಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ವಾಟ್ಸಾಪ್ ಕರೆಗಳಲ್ಲಿ ಪಾಕಿಸ್ತಾನದೊಂದಿಗೆ ಹಲವು ಬಾರಿ ಮಾತುಕತೆ ನಡೆದಿದ್ದಾಗಿ ತಿಳಿದುಬಂದಿದೆ.

ನಾಲ್ಕು ಆಧಾರ್ ಕಾರ್ಡ್, ವಿವಿಧ ಐಡಿಗಳು ಪತ್ತೆ:

ಆರಿಫ್ ಖುರೇಷಿಯನ್ನು ಹಿಡಿದು ಠಾಣೆಗೆ ಕರೆತಂದಾಗ ಆತನ ಮೊಬೈಲ್‌ನಲ್ಲಿ ತಪಾಸಣೆ ನಡೆಸಿದಾಗ ಅದರಲ್ಲಿ ಸಮೀರ್‌ನ ನಾಲ್ಕು ವಿವಿಧ ಆಧಾರ್ ಕಾರ್ಡ್ಗಳು, ಗುರುತಿನ ಚೀಟಿಗಳು, ವಿವಿಧ ಹೆಸರಿನ ಪ್ಯಾನ್ ಕಾರ್ಡ್ಗಳು ಮತ್ತು ನಾಲ್ಕು ವಿವಿಧ ಐಡಿಗಳು ಪತ್ತೆಯಾಗಿವೆ. ಮಾಹಿತಿಯ ಪ್ರಕಾರ, ಆತನ ಪಾಕಿಸ್ತಾನಿಯರ ಜೊತೆ ಸಂಪರ್ಕದಲ್ಲಿದ್ದ ಎಂಬುವುದು ಬಯಲಾಗಿದೆ.

ಮೊಬೈಲ್‌ನಲ್ಲಿ ಫೋಟೋಗಳು ಪತ್ತೆ:

ಸಮೀರ್ ಖುರೇಷಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಜೊತೆಗಿದ್ದ ಫೋಟೋಗಳು ಪತ್ತೆಯಾಗಿದೆ. ಅಷ್ಟಲ್ಲದೆ ಆತ ಅಮಲು ಪದಾರ್ಥಗಳ ದಾಸನಾಗಿದ್ದು ಸೆಲ್ಫಿ ಫೋಟೊಗಳು ಪತ್ತೆಯಾಗಿದೆ. ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ತೇಜಾಜಿ ನಗರ ಪೊಲೀಸರು ಆರಿಫ್ ಖುರೇಷಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *