ಕದ್ರಿ:(ಡಿ.6) ಜ್ಯೂಸ್‌ನಲ್ಲಿ ಅಮಲು ಬರುವ ಔಷಧವನ್ನು ಬೆರೆಸಿ ಅತ್ಯಾಚಾರ ನಡೆಸಿರುವುದು ಮಾತ್ರವಲ್ಲದೇ, ಹಣ ದೋಚಿದ ಪ್ರಕರಣವೊಂದು ನಡೆದಿದ್ದು, ಜೊತೆಗೆ ಆತನ ಅಣ್ಣನೂ ಮಾನಭಂಗಕ್ಕೆ ಯತ್ನ ಮಾಡಿರುವುದಾಗಿ ಯುವತಿಯೋರ್ವಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: Daily Horoscope: ಕರ್ಕಾಟಕ ರಾಶಿಯ ಮಹಿಳೆಯರಿಗೆ ಇಂದು ಶುಭ ದಿನ!!!
ಜು.21 ರಂದು ಯುವತಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕದ್ರಿಯಲ್ಲಿ ವಾಹನ ಕೆಟ್ಟು ನಿಂತಿದೆ. ಈ ವೇಳೆ ಅದೇ ರಸ್ತೆ ಮೂಲಕ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಕಾರನ್ನು ಸರಿಪಡಿಸಿದ್ದು, ನಂತರ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ್ ಬೈಲ್‌ನಲ್ಲಿರುವ ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಇರುವ ಮನೆಗೆ ಬಿಟ್ಟಿದ್ದ, ಈ ವೇಳೆ ಆತ ಆಕೆಯ ನಂಬರ್ ಪಡೆದುಕೊಂಡಿದ್ದ.
ಆ.8 ರಂದು ಯುವತಿಯ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು, ತಾನು ಮನೆಯಲ್ಲಿ ಒಬ್ಬಳೇ ವಾಸವಿದ್ದುದರಿಂದ ಸಹಾಯಕ್ಕೆಂದು ಶಫಿನ್‌ಗೆ ಕರೆ ಮಾಡಿದ್ದಾಳೆ. ಆತ ತನ್ನ ಪರಿಚಯದ ರಿಪೇರಿಯವನನ್ನು ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿದ್ದು, ನಂತರ ಎಲೆಕ್ಟ್ರಿಷಿಯನ್‌ನನ್ನು ಬಿಟ್ಟು ಬರುತ್ತೇನೆ ಎಂದು ಹೊರಹೋಗಿದ್ದು, ಅಲ್ಲಿ ತನಕ ಫ್ರಿಡ್ಜ್ ಓಪನ್ ಮಾಡಬೇಡಿ ಎಂದು ಹೇಳಿದ್ದ. ಆತ ವಾಪಾಸು ಬರುವಾಗ ಹಣ್ಣು ಮತ್ತು ಜ್ಯೂಸ್ ತಗೊಂಡು ಬಂದಿದ್ದು, ಜ್ಯೂಸ್ ಕುಡಿದ ಯುವತಿ ನಿದ್ದೆಗೆ ಜಾರಿದ್ದಾಳೆ.
ಇದನ್ನೂ ಓದಿ: ವಗ್ಗ : ಕೆಎಸ್ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ
ಬಳಿಕ ಎಚ್ಚರಗೊಂಡಾಗ ಅನುಮಾನಗೊಂಡ ಈಕೆ ವಿಚಾರಣೆ ಮಾಡಿದಾಗ ಆತ ದೈಹಿಕ ಸಂಪರ್ಕ ಮಾಡಿರುವುದಾಗಿ ಹೇಳಿದ್ದ. ಜೊತೆಗೆ ಇನ್ನೂ ನನಗೆ ಸಹಕರಿಸಬೇಕು, ಇಲ್ಲದಿದ್ದರೆ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದು, ಜೊತೆಗೆ ಯುವತಿಯ ಕಾರನ್ನು ತನ್ನ ಜೊತೆಯೇ ತೆಗೆದುಕೊಂಡು ಹೋಗಿದ್ದ.
ಇತ್ತ ಯುವತಿಯ ಮನೆಯವರು ಕಾರನ್ನು ಕೇಳಿದ್ದಾರೆ. ಆತನಿಂದ ಕಾರನ್ನು ಪಡೆಯಲು ಅ.25 ರಂದು ಆತನ ವಿಳಾಸವನ್ನು ಪಡೆದುಕೊಂಡು ದೇರಳಕಟ್ಟೆಯಲ್ಲಿ ವಾಸವಿದ್ದ ಆತನ ಅಪಾರ್ಟ್‌ಮೆಂಟ್‌ಗೆ ಹೋದಾಗ ಅಲ್ಲಿ ಪಾರ್ಕಿಂಗ್ ಜಾಗದಲ್ಲಿ ಕಾರು ಇರುವುದು ಕಂಡು ಬಂದಿದೆ. ವಾಚ್‌ಮ್ಯಾನ್ ಬಳಿ ಮನೆಯ ವಿಳಾಸ ಪಡೆದು ಆತನ ತಾಯಿಯಲ್ಲಿ ಕಾರು ವಾಪಸು ಕೊಡುವಂತೆ ವಿನಂತಿ ಮಾಡಿದಾಗ, ಅಲ್ಲಿದ್ದ ಶಫಿನ್‌ನ ಅಣ್ಣ ಮೊಹಮ್ಮದ್ ಶಿಯಾದ್ ಅತ್ಯಾಚಾರ ಮಾಡಲು ಯತ್ನಿಸಿದ್ದು, ಜೊತೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ.
ಇದನ್ನೂ ಓದಿ: Bantwala: ಕಾರು & ಆಟೋ ರಿಕ್ಷಾ ನಡುವೆ ಭೀಕರ ಅಪಘಾತ
ಆತನಿಂದ ತಪ್ಪಿಸಿಕೊಂಡು ಯುವತಿ ಮನೆಗೆ ವಾಪಾಸಾಗಿದ್ದಾಳೆ. ಅ. 27 ರಂದು ರಾತ್ರಿ 9 ಗಂಟೆ ವೇಳೆ ಮೊಹಮ್ಮದ್ ಶಫೀನ್ ಯುವತಿಯ ಮನೆಗೆ ಪ್ರವೇಶ ಮಾಡಿ ಆಕೆಯ ಬಳಿ ಇದ್ದ 62 ಸಾವಿರ ಹಣ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಯುವತಿ ದೂರನ್ನು ನೀಡಿದ್ದು, ನಂತರ ಶಿಯಾಬ್ ಪತ್ನಿ ಯುವತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ಇನ್ನೊಂದು ದೂರನ್ನು ನೀಡಿದ್ದಾರೆ.