Fri. Dec 27th, 2024

Mangaluru: ಮುಮ್ತಾಝ್ ಅಲಿ ಕೇಸ್ – ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಅರ್ಜಿ ವಜಾ

ಮಂಗಳೂರು:(ಡಿ.6) ಉದ್ಯಮಿ, ಶೈಕ್ಷಣಿಕ ಮುಂದಾಳು ಬಿಎಂ ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿಯ ಅರ್ಜಿಯನ್ನು ಮಂಗಳೂರು 3ನೇ ಜೆಎಂಎಫ್ ಸಿ ನ್ಯಾಯಾಲಯ ತಿರಸ್ಕಾರ ಮಾಡಿದೆ.

ಇದನ್ನೂ ಓದಿ: ಕೊಯ್ಯೂರು : ಮಲೆಬೆಟ್ಟು ಹಾಲು ಉತ್ಪಾದಕ ಸಂಘದ ಆಡಳಿತ ಮಂಡಳಿಯ ಅಧಿಕಾರದ ಗದ್ದುಗೆ ಏರಲು ಹಾಲು ಉತ್ಪಾದಕರಿಂದ ತಡೆ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ರಹ್ಮತ್ ಪತಿ ಶುಐಬ್, ನಂದಾವರ ನಿವಾಸಿ ಶಾಫಿ, ಕೃಷ್ಣಾಪುರ ನಿವಾಸಿ ಮುಸ್ತಫಾ ಎಂಬುವವರನ್ನು ವಿಚಾರಣೆ ನಡೆಸಲಿದ್ದು,

ಪೊಲೀಸ್ ಕಸ್ಟಡಿಗೆ ನೀಡುವಂತೆ ಸುರತ್ಕಲ್ ಪೊಲೀಸರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳ ವಿಚಾರಣೆಗಾಗಿ ಈಗಾಗಲೇ ಬೇಕಾದಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಅವಕಾಶ ನೀಡಲಾಗಿತ್ತು.

ಇನ್ನು ನೀಡಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ತೀರ್ಪು ನೀಡಿತು. ಜೊತೆಗೆ ಸುರತ್ಕಲ್ ಪೊಲೀಸರು ಸಲ್ಲಿಸಿದ್ದ ಕಸ್ಟಡಿ ಅರ್ಜಿಯನ್ನು ಕೋರ್ಟ್ ತಿರಸ್ಕಾರ ಮಾಡಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *