ಮಂಗಳೂರು:(ಡಿ.7) ಸೈಬರ್ ವಂಚನೆ ಪ್ರಕರಣದಲ್ಲಿ ದೆಹಲಿ ಮೂಲದ ಯುವಕನನ್ನು ಮಂಗಳೂರಿನ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಗೌರವ್ ಮಕ್ವಾನ್ (25) ಬಂಧಿತ ಆರೋಪಿ.
ಯದುನಂದನ್ ಎಂಬವರ ವಾಟ್ಸಾಪ್‌ಗೆ ಬಂದ ಸಂದೇಶದಂತೆ ಅವರು ಆಪ್ ಡೌನ್‌ಲೋಡ್ ಮಾಡುತ್ತಿದ್ದಂತೆ ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿತ್ತು. ಸೈಬರ್ ವಂಚಕರು ಯದುನಂದರ ಪ್ಲಿಪ್‌ಕಾರ್ಟ್ ಖಾತೆಯನ್ನು ಬಳಸಿಕೊಂಡು 1,31,000 ರೂ.ಮೌಲ್ಯದ ಎರಡು ಮೊಬೈಲ್ ಫೋನ್ ಹಾಗೂ ಗಿಫ್ಟ್ ವೋಚರ್‌ಗಳನ್ನು ಖರೀದಿಸಿದ್ದರು. ಈ ಬಗ್ಗೆ ಯದುನಂದನ್ ಸೆನ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಕಾರ್ಯಾಚರಣೆ ನಡೆಸಿದ ಪಿಎಸ್ಐ ಗುರಪ್ಪ ಕಾಂತಿ , ಪೊಲೀಸ್ ಕಾನ್‌ಸ್ಟೇಬಲ್ ತಿಪ್ಪಾರೆಡ್ಡಿ ದೆಹಲಿಯ ಗೌರವ್ ಮಕ್ವಾನ್ ನನ್ನು ಬಂಧಿಸಿದ್ದಾರೆ.
ಅಲ್ಲದೆ ಆರೋಪಿಯಿಂದ ಅಂಡ್ರಾಯ್ಡ್ ಫೋನ್, ಐಫೋನ್, ಏರ್‌ಪ್ಯಾಡ್, ಆರೋಪಿಯು ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಸಹಿತ 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.