ಕಾವಳಕಟ್ಟೆ:(ಡಿ.8) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಕಣಜ ಹುಳಗಳು ದಾಳಿ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಎಂಬಲ್ಲಿ ಡಿ.7ರ ಶನಿವಾರ ಸಂಭವಿಸಿದೆ.
ಕಾವಳಕಟ್ಟೆ ನಿವಾಸಿ ಮುಹೀಬ್ (25) ಕಡಿತಕ್ಕೊಳಗಾಗಿದ್ದು, ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಗಂಭೀರವಾದ ಸ್ಥಿತಿಯಲ್ಲಿದ್ದ ಕಾರಣ ಅವರನ್ನು ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ತಲೆ ಹಾಗೂ ಇತರ ದೇಹದ ಹಲವಾರು ಕಡೆ ಕಡಿತಕ್ಕೊಳಗಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ಸ್ಥಳದಲ್ಲಿ ಇನ್ನೊರ್ವ ಪಾದಾಚಾರಿ ಮೇಲೆ ಕೂಡ ಕಣಜ ಹುಳಗಳು ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.