Wed. Apr 16th, 2025

Manipal: ರುಂಡ ಮುಂಡ ಬೇರ್ಪಟ್ಟಿರುವ ಕೊಳೆತ ಶವ‌ ಪತ್ತೆ

ಮಣಿಪಾಲ (ಡಿ.8); ಗುರುತು ಹಿಡಿಯಲಾಗದಷ್ಟು ಕೊಳೆತಿರುವ‌ ಅಪರಿಚಿತ ಪುರುಷನ ಶವವೊಂದು, ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು ಕಲಾಭೂಮಿ ಕಟ್ಟಡದ ಹಿಂಭಾಗದ ಹಾಡಿಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದಿದೆ.

ಇದನ್ನೂ ಓದಿ: ಬೆಳ್ತಂಗಡಿ: ಕನ್ಯಾಡಿಯ ಮಾಲ್ದಂಡ ಪರಿಸರದಲ್ಲಿ ಚಿರತೆ ಓಡಾಟ

ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿ ಮೃತಪಟ್ಟು 20 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಶವ ಕೊಳೆತಿರುವುದರಿಂದ‌ ನೇಣುಕುಣಿಕೆಯಲ್ಲಿ ಭಾರ‌ ತಡೆಯಲಾಗದೆ,ದೇಹದ ರುಂಡ ಬೇರ್ಪಟ್ಟಿದೆ.

ಘಟನಾ ಸ್ಥಳದಲ್ಲಿ ಮಣಿಪಾಲದ ಪೋಲಿಸ್‌ ಠಾಣೆಯ ಎ.ಎಸ್.ಐ ನಾಗೇಶ್ ನಾಯ್ಕ್, ಹೆಡ್ ಕಾನ್ಸ್ಟೇಬಲ್ ಸುಧಾಕರ್, ಸಿಬ್ಬಂದಿ ಸಂಗೀತ ಕಾನೂನು ಪ್ರಕ್ರಿಯೆ ನಡೆಸಿದರು.

ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಶವ ಪರೀಕ್ಷಾ ಘಟಕಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಇಲಾಖೆಗೆ ನೆರವಾದರು. ಮೃತ ವ್ಯಕ್ತಿಯ ವಾರಸುದಾರರು ಮಣಿಪಾಲ ಪೋಲಿಸ್ ಠಾಣೆಯ‌ನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *