Fri. Dec 27th, 2024

ಮೇಷ ರಾಶಿ: ಎಲ್ಲವೂ ನೀವು ಅಂದುಕೊಂಡಂತೆ ಸಿಗದು. ಇಂದು ನಿಮ್ಮ‌ ಜೊತೆಗಾರರ ವರ್ತನೆಯ ಮೇಲೆ ಅನುಮಾನವು ಬರಬಹುದು. ಸ್ತ್ರೀಯರು ಈ ದಿನವನ್ನು ಬಹಳ ಉತ್ಸಾಹದಿಂದ ಕಳೆಯುವರು. ಕುಟುಂಬದ ಸೌಖ್ಯದಲ್ಲಿ ನೀವು ಭಾಗಿಯಾಗುವಿರಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ಪ್ರಗತಿಯನ್ನು ಕಾಣುವಿರಿ.

ವೃಷಭ ರಾಶಿ: ಕಣವು ಕರಗುವುದನ್ನು ನೀವು ಸಹಿಸಲಾರಿರಿ. ನಿಮಗೆ ಬೇಕಾದಷ್ಟು ಸೌಲಭ್ಯಗಳಿದ್ದರೂ ಕೊರತೆ ಎನಿಸಬಹುದು. ನಿಮ್ಮ ತಪ್ಪುಗಳೇ ಫಲಿತಾಂಶದಲ್ಲಿ ಬರುವುದು. ಮಂದಗತಿಯ ಕಾರ್ಯಕ್ಕೆ ನಿಮ್ಮನ್ನು ಯಾರಾದರೂ ಹೀಯಾಳಿಸಬಹುದು. ನೀವು ಪ್ರಯಾಣ ಮಾಡದೇ ಬಹಳ ದಿನಗಳಾದಂತೆ ಅನ್ನಿಸುವುದು.

ಮಿಥುನ ರಾಶಿ: ನಿಮ್ಮ ಸ್ಥಳವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ. ಒತ್ತಡವನ್ನು ನಿಭಾಯಿಸಕೊಳ್ಳಲು ಕಷ್ಟವಾದೀತು. ಸಹೋದ್ಯೋಗಿಗಳ ಜೊತೆ ಮನಸ್ತಾಪ ಬಂದು ಜಗಳವಾಡುವಿರಿ. ಮೇಲಧಿಕಾರಿಗಳ ಜೊತೆ ವಿನಾಕಾರಣ ವಾಗ್ವಾದ ಬೇಡ. ಯಾವ ಮುನ್ಸೂಚನೆಯೂ ಇಲ್ಲದೇ ನಿಮ್ಮ ಮೇಲೆ ಆಕ್ರಮಣ ಮಾಡಬಹುದು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ.

ಕರ್ಕಾಟಕ ರಾಶಿ: ಸ್ವಂತಿಕೆಯ ಜವಾಬ್ದಾರಿಯನ್ನು ಮಾಡಿದರೆ ಸ್ಥಾನಕ್ಕೆ ಏರುವ ಸಂಭವವಿದೆ. ನಿಮ್ಮ ಇಂದಿನ ಮಧ್ಯ ಯಾವ ಪಕ್ಷಪಾತವನ್ನೂ ತೋರಿಸದು. ಸ್ವಂತ ಉದ್ಯೋಗಸ್ಥರಿಗೆ ಲಾಭವಾಗುವುದು. ಗೊಂದಲದಿಂದ ಹೊರಬರುವುದು ಕಷ್ಟವಾದೀತು. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ‌ ಫಲಿತಾಂಶವು ಇರಲಿದೆ. ಸಂತೋಷವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ.

ಸಿಂಹ ರಾಶಿ; ಶತ್ರುಗಳ ಚಿಂತೆಯಿಂದ ಆರೋಗ್ಯ ಹಾಳಾಗುವುದು. ಪರೋಪಕಾರವು ಉತ್ತಮವಾದ ಗುಣವಾದರೂ ಅದು ವಿಷಕಾರಿ ಸರ್ಪದಂತೆ ಆಗಬಹುದು. ಉತ್ತಮ‌ ಅವಕಾಶಗಳಿಗೆ ನೀವು ಕಾಯುತ್ತಿರುವಿರಿ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ದುರಾಲೋಚನೆ ಹಾದಿಯನ್ನು ತಪ್ಪುವುದು. ಏನೂ ಲಾಭವಿಲ್ಲದೇ ಪ್ರಯಾಣವು ನಿಮಗೆ ಬೇಸರ ಎನಿಸುವುದು. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು.

ಕನ್ಯಾ ರಾಶಿ: ಪರರ ಬೆಳವಣಿಗೆಯನ್ನು ಸಹಿಸುವ ಬಗ್ಗೆ ಗಮನವಿರಲಿ. ನಿಮ್ಮವರ ಮೇಲೆ ನಿಮಗೆ ಸಂದೇಹವು ಆರಂಭವಾಗುವುದು. ಇಂದು ನಿಮ್ಮ‌ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಸಣ್ಣ ವಿಚಾರಗಳಿಗೂ ಕೋಪ ಮಾಡಿಕೊಳ್ಳುವಿರಿ. ಯೋಚನೆಗಳು ನೂರಿದ್ದರೂ ಪಾಲುದಾರಿಕೆಯಲ್ಲಿ ನಿರ್ಧಾರ ಒಂದೇ ಇರಲಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವರು. ಅಧಿಕ ಹೂಡಿಕೆಯು ನಿಮಗೆ ಸ್ಥಾನದ ಪ್ರಶ್ನೆಯಾಗಿ ಉಳಿಯುವುದು.

ತುಲಾ ರಾಶಿ: ಮನೆಯಲ್ಲಿ ಯಾರಾದರೂ ನಿಮ್ಮನ್ನೇ ಗುರಿಯಾಗಿಸಿಕೊಂಡು ಮಾತನಾಡಬಹುದು. ಬಂಧುಗಳಿಂದ ನಿಮಗೆ ಇಂದು ಆಲಸ್ಯದ ಪಟ್ಟವು ಸಿಗಬಹುದು. ನಿಮ್ಮ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ಅಗತ್ಯತೆಗೆ ಅನುಸಾರವಾಗಿ ಕಾರ್ಯವನ್ನು ವಿಭಾಗಿಸಿ.

ವೃಶ್ಚಿಕ ರಾಶಿ: ವಿದ್ಯಾರ್ಥಿಗಳು ಅಭ್ಯಾಸದ ವಿಷಯದಲ್ಲಿ ಮೈಮರೆಯಬಹುದು. ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು. ಆಸ್ತಿಯ ಖರೀದಿಗೆ ಎರಡು ಮನಸ್ಸು ಇರುವುದು. ಪುಣ್ಯಸ್ಥಳಗಳ ದರ್ಶನದಿಂದ ನೆಮ್ಮದಿ. ನಿಮ್ಮ ಚುರುಕುತನಕ್ಕೆ ಅಚ್ಚರಿಗೊಳ್ಳುವರು. ಜವಾಬ್ದಾರಿಯು ನಿಮಗೆ ಅತಿಯಾಗುವುದು. ಆರ್ಥಿಕತೆಯು ನಿಮ್ಮನ್ನು ಚಿಂತೆಗೀಡುಮಾಡುವುದು. ಸ್ನೇಹಿತರ ಸಹಾಯದಿಂದ ನಿಮಗೆ ಬಲವು ಬರುವುದು.

ಧನು ರಾಶಿ: ಹೇಳಿದ್ದನ್ನು ಕೂಡಲೇ ಮಾಡಲಾಗದು. ಅಧ್ಯಾತ್ಮದ ಕಡೆಗೆ ನಿಮ್ಮ ಮನಸ್ಸು ಹರಿದರೂ ಸರಿಯಾದ ಮಾರ್ಗದರ್ಶನವೂ ಬೇಕು. ದಾಂಪತ್ಯದಲ್ಲಿ ನಂಬಿಕೆ ದೂರಾಗಬಹುದು. ಚರಾಸ್ತಿಯಲ್ಲಿ ಗೊಂದಲ ಇರುವುದು. ಪ್ರಯತ್ನಿಸಿದ ಕಾರ್ಯಕ್ಕೆ ಫಲವನ್ನು ನಿರ್ದಿಷ್ಟ ಮಾಡಿಕೊಳ್ಳುವಿರಿ. ಮನೆಯ ಸ್ಥಳವನ್ನು ಬದಲಾಯಿಸುವಿರಿ. ಬೇರೆ ಕಾರ್ಯಗಳಿಂದ ಹಣವು ಕೈ ಸೇರುವುದು. ‌ಉತ್ಸಾಹಕ್ಕೆ ತೊಂದರೆ ಆಗುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗದ ಸ್ಥಳವನ್ನು ನೀವು ಬದಲಾಯಿಸುವಿರಿ.

ಮಕರ ರಾಶಿ: ಹಳೆಯ ನಂಟು ಮತ್ತೆ ಚಿಗುರೊಡೆಯಬಹುದು. ಮನೆಯಲ್ಲಿ ನಡೆಯುವ ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆಯುವರು. ಸಹನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ವಪ್ರತಿಷ್ಠೆಯಿಂದ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಹಿರಿಯರೆದುರು ವಿನಯವಿರಲಿ.

ಕುಂಭ ರಾಶಿ: ಸಾಂತ್ವನದ ಮಾತುಗಳು ನಿಮ್ಮಿಂದ ಬರಬಹುದು. ನಿಮ್ಮ ಆಲೋಚನೆಗಳಿಗೆ ಸರಿಹೊಂದುವವರ ಜೊತೆ ಸಖ್ಯವಾಗಲಿದೆ. ನಿಮಗೆ ಇಂದು ದೇಹಾರೋಗ್ಯವು ಕ್ಷೀಣಿಸಿದಂತೆ ಭಾಸವಾಗುವುದು. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಹಣದ ಕೂಡುವಿಕೆಯಲ್ಲಿ ಸಫಲತೆ ಕಾಣಿಸುವುದು. ಅನ್ಯಸ್ಥಳದಲ್ಲಿ ನಿಮ್ಮ ವಾಸವು ಇರಲಿದೆ. ಸುಖವಾದ ಭೋಜನವನ್ನು ಮಾಡುವಿರಿ. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ಸರಿಮಾಡಿಕೊಳ್ಳುವಿರಿ.

ಮೀನ ರಾಶಿ: ಕೈಯಲ್ಲಿ ಹಣ ನಿಲ್ಲದಾಗ ಹೂಡಿಕೆ ಮಾಡಿ ಅಥವಾ ಉಳಿತಾಯದಲ್ಲಿ ಇರಿಲಿ. ನಿಮ್ಮ ದೌರ್ಬಲ್ಯವೇ ಶಕ್ತಿಯ ಕೇಂದ್ರವೂ ಆಗಬಹುದು. ರಾಜಕೀಯ ಕ್ಷೇತ್ರದಲ್ಲಿ ಕಾದಾಟ, ವಾಗ್ವಾದಗಳು ಅಧಿಕವಾಗಿ ಇರಲಿವೆ. ಬೇಸರದಿಂದ ಹೊರಬರಲು ನಿಮಗೆ ಕಷ್ಟವಾದೀತು. ಅಧಿಕಾರ ಪ್ರಾಪ್ತಿಗೆ ಓಡಾಟವನ್ನು ಮಾಡುವಿರಿ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಿಮ್ಮ ಪ್ರಗತಿಗೆ ಶತ್ರುಗಳು ಅಡ್ಡಗಾಲು ಹಾಕಬಹುದು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು