Fri. Dec 27th, 2024

ಮೇಷ ರಾಶಿ: ನಿಮ್ಮವರನ್ನು ಯಾವ ಸಂದರ್ಭದಲ್ಲಿಯೂ ಬಿಟ್ಟುಕೊಡಲಾರಿರಿ. ಸ್ಥಾನದ ಮಹತ್ತ್ವವನ್ನು ಅರಿತು ಮಾತನಾಡಬೇಕು. ಅವಸರವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಳ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ವ್ಯಾಯಾಮ‌ ಮುಂತಾದ ದೈಹಿಕ ಕಸರತ್ತನ್ನು ಮಾಡಲು ಯೋಚಿಸುವಿರಿ. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ.

ವೃಷಭ ರಾಶಿ: ಸುಲಭಕ್ಕೆ ಸಿಗುವುದನ್ನು ಬಳಸಿಕೊಳ್ಳುವಿರಿ. ಒಂದರ ಮುಕ್ತಾಯವು ಇನ್ನೊಂದರ ಆರಂಭ ಎಂಬ ಸತ್ಯವನ್ನು ಸ್ಮರಿಸಿಕೊಂಡು ಮುನ್ನಡೆಯಿರಿ. ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ವಿನಮ್ರತೆಯು ನಿಮ್ಮನ್ನು ಕಾಪಾಡಬಹುದು. ಮಾತಿನ‌ ಮೇಲೆ ನಿಯಂತ್ರಣ ಇಟ್ಟುಕೊಂಡು ಮಾತನಾಡಿ.

ಮಿಥುನ ರಾಶಿ: ಸಣ್ಣ ಪ್ರಶಂಸೆಯೂ ದೊಡ್ಡ ಕೆಲಸವನ್ನು ಮಾಡಿಸುವುದು. ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಕುಟುಂಬದ ಮನಸ್ತಾಪವನ್ನು ಶಾಂತ ರೀತಿಯಿಂದ ಬಗೆಹರಿಸುವಿರಿ.‌ ಯಂತ್ರೋಪಕರಣಗಳ ಮಾರಾಟದಿಂದ ಲಾಭವಿರಲಿದೆ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಗುವುದು. ಇಂದು, ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು.

ಕರ್ಕಾಟಕ ರಾಶಿ: ಸಂಕೋಚವು ನಿಮಗೆ ಅತೃಪ್ತಿಯನ್ನು ನೀಡುವುದು. ವ್ಯಾವಹಾರಿಕ ನಿರ್ಬಂಧಗಳನ್ನು ಮೀರಿ ವ್ಯವಹರಿಸುವ ಅವಶ್ಯಕತೆ ಇರದು. ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ಸಾಮಾಜಿಕ ವಲಯದಲ್ಲಿ ನಿಮ್ಮ ಹೆಸರು ಕೇಳಿ ಬರಬಹುದು. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಚರಾಸ್ತಿಯ ವ್ಯವಹಾರವನ್ನು ನೀವು ಜಾಣ್ಮೆಯಿಂದ ಮಾಡುವಿರಿ. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ.

ಸಿಂಹ ರಾಶಿ: ಮಾರ್ಗದರ್ಶನದ ಕೊರತೆ ಹೆಚ್ಚು ಕಾಣಿಸುವುದು. ಇಂದು ನಿಮಗೆ ಉಳಿಸಿಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದಕ್ಕೆ ಆಸಕ್ತಿ ಹೆಚ್ಚು. ಮನೆಯ ಬೇಡದ ವಸ್ತುಗಳನ್ನು ಎಲ್ಲವನ್ನೂ ಖಾಲಿ ಮಾಡುವಿರಿ. ಹತ್ತಾರು ಸಮಸ್ಯೆಯನ್ನು ನಿಭಾಯಿಸುವುದು ಕಷ್ಟವಾದೀತು. ಇಂದು ನೀವು ಹಠದ ಸ್ವಭಾವವನ್ನು ಬಿಡುವುದು ಉತ್ತಮ. ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಯಾರ ಜೊತೆಯೂ ಆದಷ್ಟು ವಾದಕ್ಕೆ ಇಳಿಯಬೇಡಿ. ನಿಮ್ಮ ಕುಟುಂಬದ ಸದಸ್ಯರ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಿರಿ.

ಕನ್ಯಾ ರಾಶಿ: ಹಾಲಿಗೆ ಹುಳಿ ಸೇರಿ ಮೊಸರಾದರೆ ಚಂದ. ಹಾಳಾದರೆ ಎಲ್ಲವೂ ದಂಡ. ನೀವು ಭಾವನಾತ್ಮಕ ವಿಚಾರಕ್ಕೆ ಸೋಲುವ ಸಾಧ್ಯತೆ ಇದೆ. ಮಹಿಳಾ ಕಲಾವಿದರಿಗೆ ಪ್ರಶಂಸೆ ಇರಲಿದೆ. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಪ್ರೀತಿಯಲ್ಲಿ ತೊಡಗಿರುವವವರು ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವಿರಿ. ಉದ್ಯೋಗಾಕಾಂಕ್ಷಿಗಳು ಹೆಚ್ಚುವರಿ ಪ್ರಯತ್ನದಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಮಕ್ಕಳ ಪ್ರಗತಿಯು ಇಂದು ಸಫಲತೆಯನ್ನು ಕಾಣುವುದು.

ತುಲಾ ರಾಶಿ: ಮನೆಯವರ ಬಗ್ಗೆ ಕಾಳಜಿ ಅಧಿಕವಾಗುವುದು. ನಿಮ್ಮನ್ನು ಯಾವುದಾದರೂ ಕಾರಣಕ್ಕೆ ಹೊಗಳುವವರು ಇರುವರು. ಏನಾದರೂ ಮಾಡಬೇಕು ಎಂಬ ಇಚ್ಛೆಯು ಅಧಿಕವಾಗುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಎಲ್ಲ ಕಾರ್ಯಗಳಿಗೂ ಉತ್ಸಾಹ ಭಂಗವಾಗುವುದು. ಚೆನ್ನಾಗಿ ಯೋಚಿಸಿದ ಮಾಡಿದ ಕಾರ್ಯವು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುವುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಅಸಾಧ್ಯ ಎಂದು ಅನ್ನಿಸಬಹುದು.

ವೃಶ್ಚಿಕ ರಾಶಿ: ಮಾತು ಪರಿಣಾಮಕಾರಿಯಾಗಲು ಸುಮ್ಮನಿರುವುದೂ ಮುಖ್ಯ. ಇನ್ನೊಬ್ಬರ ತಪ್ಪನ್ನು ಕ್ಷಮಿಸಿ ಮುನ್ನಡೆಯುವುದೂ ನಾಕತ್ವದ ಗುಣವಾಗಲಿದೆ. ಇಂದು ಹಿತಶತ್ರುಗಳಿಂದ ಧನವು ನಷ್ಟವಾಗಲಿದೆ. ನೇರ ಮಾತಿನಿಂದ ನಿಮ್ಮವರು ದೂರಾಗಬಹುದು. ನಂಬಿಕೆಗಳು ಅನ್ಯರಿಂದ ಹಾಳಾಗುವುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ.

ಧನು ರಾಶಿ: ಪರಾವಲಂಬನೆಯಿಂದ ನಿಮಗೆ ಮುಜುಗರದ ಸನ್ನಿವೇಶ ಕಾಣಿಸುವುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಇನ್ನೊಬ್ಬರ ವಸ್ತುಗಳನ್ನು ಬಳಸಿಕೊಳ್ಳುವಿರಿ. ಕಲಾವಿದರು ಹೆಚ್ಚಿನ ಶ್ರಮದಿಂದ ಆದಾಯವನ್ನು ಗಳಿಸುವರು. ಸಾಮಾಜಿಕ ಕಾರ್ಯಗಳಿಂದ ಅಭಿಮಾನ ಹೆಚ್ಚಾಗುವುದು. ವಾಹನ ಸಂಚಾರದಲ್ಲಿ ಮಂದಗತಿ ಇರಲಿ. ನಿಮ್ಮ‌ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು.

ಮಕರ ರಾಶಿ: ನಮ್ಮ ಮೇಲಿನ ಹೊರೆಗಳು ಬೇರೆ ಕಾರ್ಯಕ್ಕೆ ಅಡ್ಡಿ ಮಾಡುವುದು. ಇಂದು ಕಡಿಮೆ ಖರ್ಚಿನಲ್ಲಿ ಉತ್ತಮ ವಸ್ತುವನ್ನು ಪಡೆಯುವಿರಿ. ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ನಿಮ್ಮಿಂದ ಧನಸಹಾಯವನ್ನು ನಿರೀಕ್ಷಿಸುವರು. ಅಧಿಕಾರಿಗಳಿಂದ ನಿಮಗೆ ಬೇಕಾದುದನ್ನು ಮಾಡಿಸಿಕೊಳ್ಳುವಿರಿ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ. ನೀವು ಪ್ರಭಾವೀ ವ್ಯಕ್ತಿಗಳಂತೆ ತೋರುವಿರಿ. ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು.

ಕುಂಭ ರಾಶಿ: ವಿದೇಶದ ಕಡೆಗೆ ಮನಸ್ಸು ಜಾರುವುದು. ಇಂದು ನೀವು ಯಾವುದನ್ನು ಉಳಿಸಿಕೊಳ್ಳಬೇಕು ಮತ್ತು ಬೇಡ ಎನ್ನುವುದನ್ನು ಸ್ಪಷ್ಟವಾಗಿ ನಿರ್ಧರಿಸಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ. ನಿಮ್ಮ ಗುರಿಗೆ ಹಾದಿಯು ಸ್ಪಷ್ಟವಾಗಿ ಇರದೇ ಹೋಗಬಹುದು. ಎಲ್ಲ ಕಾರ್ಯಗಳಿಗೆ ಸಂಬಂಧಿಸಿದ ಒಟ್ಟು ಫಲಿತಾಂಶ ಸಾಧಾರಣವಾಗಿರುವುದು. ನಿಮ್ಮ ಜಾಣ್ಮೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡಿ.‌ ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಆತ್ಮೀಯರಿಂದ ನೀವು ಕೆಲವು ಸಲಹೆಯನ್ನು ಪಡೆಯುವಿರಿ. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದೇ ಹೋದೀತು.

ಮೀನ ರಾಶಿ: ಇನ್ನೊಬ್ಬರ ದಯೆಯಿಂದ ಜೀವಿಸುವುದು ಇಷ್ಟವಾಗದು. ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಪ್ರಾಪಂಚಿಕ ಸುಖದ ಮೇಲೆ ಆಸಕ್ತಿಯು ಕಡಿಮೆ ಆದೀತು. ಕೆಲವರಿಗೆ ಮಾತ್ರ ನಿಮ್ಮ ಬಗ್ಗೆ ಗೊತ್ತಾಗಲಿದೆ. ದ್ವೇಷಿಸುವವರನ್ನು ಇಷ್ಟಪಡುವಿರಿ. ಶತ್ರುಗಳ ಉಪಟಳವು ನಿಮ್ಮನ್ನು ಕುಂಠಿತಗೊಳಿಸೀತು. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ವೇತನದಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಸೂಕ್ಷ್ಮವಾಗಿ ನಡೆಸಬೇಕಾದೀತು.

Leave a Reply

Your email address will not be published. Required fields are marked *