ಕೊಯ್ಯೂರು:(ಡಿ.10) ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಿರುವ ಘಟನೆ ಡಿ.9 ರಂದು ಬೆಳ್ತಂಗಡಿಯ ಕೊಯ್ಯೂರಿನಲ್ಲಿ ನಡೆದಿದೆ.
ಇದನ್ನೂ ಓದಿ: SM Krishna Death: ಕರ್ನಾಟಕ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಇನ್ನಿಲ್ಲ!
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರ್ ನಿವಾಸಿ ದಾಮೋಧರ್ ಭಟ್ ಅವರ ಪತ್ನಿ ರಾಜೀವಿ(50) ಎಂಬವರು ಡಿ.9 ರಂದು ಮಧ್ಯಾಹ್ನ 2:35 ರ ಸುಮಾರಿಗೆ ಬೆಳ್ತಂಗಡಿಗೆ ಹೋಗಿ
ವಾಪಸ್ ಮನೆಗೆ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್ ನಲ್ಲಿ ಇಳಿದು ಕೋರಿಯಾರ್ ಮನೆಗೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ನಿವಾಸಿ ಉಮೇಶ್ ಎಂಬಾತ ಹಿಂದಿನಿಂದ ಓಡಿ ಬಂದು ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕಬೇಡಿ ಎಂದು ಬೆದರಿಸಿ
ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದು ಈ ವೇಳೆ ಕೈಯಲ್ಲಿ ಗಟ್ಟಿಯಾಗಿ ಹಿಡಿದು ಬೊಬ್ಬೆ ಹಾಕಿದಾಗ ಕರಿಮಣಿ ಎಳೆದ ರಭಸಕ್ಕೆ ಕುತ್ತಿಗೆ ,ಎದೆಗೆ ಗಾಯವಾಗಿದ್ದು ಕರಿಮಣಿ ಎರಡು ಭಾಗವಾಗಿದೆ ಒಂದು ತುಂಡು ಕರಿಮಣಿಯನ್ನು ಆರೋಪಿ ಉಮೇಶ್ ಗೌಡ ಹಿಡಿದು ಗುಡ್ಡದ ಕಡೆ ಓಡಿ ಪರಾರಿಯಾಗಿದ್ದಾನೆ. ಗಾಯಗೊಂಡ ರಾಜೀವಿ ಮಹಿಳೆ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು,
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ಲಕ್ಷ ಮೌಲ್ಯದ 16 ಗ್ರಾಂ ಚಿನ್ನ ಕಳ್ಳತನ ಮಾಡಿರುವ ಬಗ್ಗೆ 309(6)BNS ಅಡಿಯಲ್ಲಿ ಆರೋಪಿ ಉಮೇಶ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು. ಬೆಳ್ತಂಗಡಿ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ವಿಶೇಷ ತಂಡ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.