Fri. Dec 27th, 2024

ಮೇಷ ರಾಶಿ :ನಿಮ್ಮ ಸುತ್ತ ಎಂತಹ ಪ್ರಪಂಚವಿದ್ದರೂ ನೀವು ಮಾತ್ರ ಸುತ್ತುವುದು ನಿಮ್ಮ ಸುತ್ತಲೇ.ಶತ್ರುಗಳಿಗೆ ನೀವೇ ಕೇಂದ್ರಬಿಂದು ಆಗಿರಬಹುದು. ಸ್ಪರ್ಧಾತ್ಮಕವಾಗಿ ಚಟುವಟಿಕೆಗಳನ್ನು ಮಾಡಲು ಮನಸ್ಸು ಒಪ್ಪುವುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ನಿಮಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು. ಅಧ್ಯಾತ್ಮದಲ್ಲಿ ಹೆಚ್ಚು ಮನಸ್ಸು ಇರುವುದು. ನಿಮ್ಮ ವ್ಯಾಪಾರದಿಂದ ಅಧಿಕ ಲಾಭವು ಸಿಗುವುದು.

ವೃಷಭ ರಾಶಿ :ಕೋಪಿಸಿಕೊಂಡಷ್ಟೂ ಸಮಯ ಹಾಳು. ಇಂದು ವ್ಯಾವಹಾರಿಕವಾಗಿರುವ ಮನಶ್ಚಾಂಚಲ್ಯ ಅನೇಕ ವಿಧವಾಗಿ ನಿಮ್ಮನ್ನು ಕಾಡಬಹುದು.‌ ನಿಮ್ಮ ಪ್ರಯಾಣವನ್ನು ತಡೆಯಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಸಂದರ್ಭವು ಬರಬಹುದು. ‌ಆಗದವರ ಬಗ್ಗೆ ವಿನಾ ಆಕ್ಷೇಪ ಮಾಡುವಿರಿ. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಕಛೇರಿಯ ಒತ್ತಡವನ್ನು ಮನೆಯವರೆಗೂ ತರುವುದು ಬೇಡ. ಇಂದಿನ ಆದಾಯದಿಂದ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವಿರಿ.

ಮಿಥುನ ರಾಶಿ :ನಿಮ್ಮನ್ನೇ ಹೊಗಳಬೇಕು ಎಂದು ಆಶಿಸುತ್ತಾ ಇರುವಿರಿ. ಇಂದು ಹಿತಶತ್ರುಗಳು ನಿಮಗೆ ಬರುವ ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ಬಾರದೇ ಇರುವುದು. ಹೊಸ ಉದ್ಯೋಗಕ್ಕೆ ನಿಮ್ಮ‌ ಮನಸ್ಸು ತೆರೆ ದುಕೊಳ್ಳುವುದು. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ನಿಮಗೆ ಬಾರದು. ಸಂಕಟಗಳು ನಿಮ್ಮನ್ನು ಪರಿವರ್ತಿಸಲೂ ಬರಬಹುದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು.

ಕರ್ಕಾಟಕ ರಾಶಿ :ನಿಮ್ಮ ಆಲೋಚನೆಗೆ ಪ್ರತಿಕೂಲವಾಗಿ ಏನಾದರು ನಡೆದರೆ ಸಹಿಸಲಾಗದು. ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ. ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರುವುದು. ಸಿಟ್ಟಿನಿಂದ ಕೂಗಾಡುವಿರಿ. ಸಹೋದರನ ಕಡೆಯಿಂದ ಸಹಾಯವನ್ನು ಅಪೇಕ್ಷಿಸುವಿರಿ.

ಸಿಂಹ ರಾಶಿ :ದೇವರಿಗೆ ಏನಾದರೂ ಸೇವೆಯನ್ನು ಸಲ್ಲಿಸುವ ಮನಸ್ಸಾಗುವುದು. ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವೃತ್ತಿಯಲ್ಲಿ ಆತಂಕದ ವಾತಾವರಣವು ಇರಲಿದೆ. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ನಿಮ್ಮ ಇಷ್ಟದವರ ಭೇಟಿಯಿಂದ ಸಮಾಧಾನ ಸಿಗುವುದು. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಯಾರ ಬಗ್ಗೆಯೂ ಅನಗತ್ಯ ಟೀಕೆಗಳು ಬೇಡ.

ಕನ್ಯಾ ರಾಶಿ :ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಮಾಡಲು ನೆನಪಿಸಬೇಕಾಗುವುದು. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಹಿರಿಯರಲ್ಲಿ ಭಕ್ತಿಯನ್ನು ತೋರಿಸುವಿರಿ. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಇರಿ. ಬಹಳ ದಿನಗಳಿಂದ‌ ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ.

ತುಲಾ ರಾಶಿ :ಇಂದು ನಿಮ್ಮ ವೈವಾಹಿಕ ಜೀವನದ ಕೆಲವು ಪ್ರಸಂಗಗಳು ಮುಜುಗರ ತರಿಸುವುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮಿಂದ ಉಪಕಾರ ಪಡೆದವರು ನಿಮ್ಮ ವಿರುದ್ಧ ಬೀಳಬಹುದು. ಬದುಕಿಗೆ ತಿರುವು ಬರುವ ಸಾಧ್ಯತೆ ಇದೆ. ಇಂದಿನ‌ ಕಾರ್ಯವು ನಿಮಗೆ ಸಮಾಧಾನ‌ ಕೊಡದೇ ಇರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮನ್ನು ಭೇಟಿಯಾಗಬಹುದು.

ವೃಶ್ಚಿಕ ರಾಶಿ :ಇಂದು ನಿಮ್ಮ ಗೌರವಕ್ಕೆ ಮೇಲಿನವರಿಂದ ಚ್ಯುತಿಯಾಗಬಹುದು. ಯಾವ ಅಪವಾದವನ್ನೂ ನೀವು ಇಟ್ಟುಕೊಳ್ಳುವುದು ಇಷ್ಟಪಡುವುದಿಲ್ಲ. ಅಪಮಾನವನ್ನು ಗೆಲ್ಲುವ ಛಲ ಬರಬಹುದು. ನಿಮ್ಮದೆಂದುಕೊಂಡವು ವಸ್ತುವು ನಿಮ್ಮಿಂದ ದೂರವಾಗಬಹುದು. ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಇಂದು ಅತಿಯಾದ ನಿದ್ರೆಯಿಂದ ಜಾಡ್ಯವು ಬರುವುದು.

ಧನು ರಾಶಿ :ಯಾರಿಗೂ ನಿಮ್ಮ ಬೆರಳನ್ನು ಕೊಡುವುದು ಬೇಡ. ಹಸ್ತವನ್ನು ನುಂಗಿಯಾರು. ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಇಷ್ಟವಿಲ್ಲದೆ ಕಡೆ ವರ್ಗಾವಣೆ ಆಗಲಿದೆ. ಆಪ್ತರ ಮಾತಿಗೆ ಯಾವ ಬೆಲೆಯನ್ನೂ ನೀವು ಕೊಡುವುದಿಲ್ಲ. ಸಭೆಯಲ್ಲಿ ನಿಮಗೆ ಗೌರವವು ಸಿಗುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ‌ ಮಾಡದು.

ಮಕರ ರಾಶಿ :ಅಪನಂಬಿಕೆಯ ಕಾರಣ ರೋಗ ಶಮನವಾಗದು. ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಅನಗತ್ಯ ಹರಟೆಯಿಂದ ಈ ದಿನವನ್ನು ಕಳೆಯುವಿರಿ. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಕಳೆದುಕೊಂಡ ವಸ್ತುವಿನ ಬಗ್ಗೆ ವ್ಯಾಮೋಹ ಹೋಗದು. ಸಂಗಾತಿಗೆ ಇಂದು ಸಂತೋಷವನ್ನು ಕೊಡುವಿರಿ.

ಕುಂಭ ರಾಶಿ :ಇಂದು ಸಂಪತ್ತಿನ ವ್ಯಯ ಆಗುವುದು. ಆದರೆ ಅದನ್ನು ಮತ್ಯಾವುದಾದರೂ ರೀತಿಯಲ್ಲಿ ವಿನೊಯೋಗವಾಗುವಂತೆ ಮಾಡಿಕೊಳ್ಳಿ. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಕಾಲಾವಕಾಶದ ಕೊರತೆ ಇರುವುದು. ನಿಮ್ಮ ಬಗ್ಗೆಯೇ ನೀವು ಕೊರಗುವುದು ಬೇಡ. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು.

ಮೀನ ರಾಶಿ :ಇನ್ನೊಬ್ಬರ ವಿರೋಧವನ್ನು ಕಟ್ಟಿಕೊಂಡಾದರೂ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ವಿವಾಹಯೋಗವು ಬಂದರೂ ನಿಮಗೆ ಅಂತಹ ಯೋಗ್ಯತೆಯ ಕೊರತೆ ಎದ್ದು ಕಾಣುವುದು. ನಿಮ್ಮ ನಿರೀಕ್ಷಿತ ಸಮಯವು ಸಮೀಪಿಸುತ್ತಿರುವಂತೆ ನಿಮಗೆ ಅನ್ನಿಸುವುದು. ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಒಳಗೆ ನೋವನ್ನು ಇಟ್ಟುಕೊಂಡು ಶಾಂತರೀತಿಯಲ್ಲಿ ಇರುವಂತೆ ತೋರುವಿರಿ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು