Fri. Dec 27th, 2024

Rajkumar Kidnapping: ರಾಜ್ಯ ಸರ್ಕಾರ & ರಾಜ್​ಕುಮಾರ್ ನಡುವೆ ನಡೆದಿತ್ತು ಆ ಒಂದು ರಹಸ್ಯ ಒಪ್ಪಂದ – ಒಪ್ಪಂದ ನೆರವೇರದೆ ಇದ್ದಾಗ ನಡೀತು ವೀರಪ್ಪನ್ ನಿಂದ ರಾಜ್ ಕುಮಾರ್ ಅಪಹರಣ?!! – ಎಸ್.ಎಂ.ಕೃಷ್ಣ ರವರ “ಸ್ಮೃತಿವಾಹಿನಿ” ಆತ್ಮಕಥೆಯಲ್ಲಿದೆ ಸಂಪೂರ್ಣ ರಹಸ್ಯ!!

Rajkumar Kidnapping:(ಡಿ.12) ಕನ್ನಡದ ವರನಟ ಡಾ. ರಾಜಕುಮಾರ್ ಅವರನ್ನು ನರಹಂತಕ ವೀರಪ್ಪನ್ ಕಿಡ್ನಾಪ್ ಮಾಡಿದಂತಹ ಸಮಯವದು. ನರಹಂತಕ ವೀರಪ್ಪನ್ ರಾಜ್​ಕುಮಾರ್​ಗೆ ಏನು ಮಾಡಿಬಿಡ್ತಾನೋ ಅನ್ನೋ ಆತಂಕದಲ್ಲಿ ಜನ ದಿನವೂ ದಿನದೂಡುತ್ತಾ ಇದ್ದರು. ಆದರೆ ನಾಡಿನ ಜನತೆಗೆ ಧೈರ್ಯ ತುಂಬಿ ಅಣ್ಣಾವ್ರನ್ನು ವೀರಪ್ಪನಿಂದ ಬಿಡಿಸಿಕೊಂಡು ಬಂದಂತಹ ಕೀರ್ತಿ ಅಂದಿನ ಮುಖ್ಯಮಂತ್ರಿ ಆಗಿದ್ದ ಹೆಮ್ಮೆಯ ಎಸ್ಎಂ ಕೃಷ್ಣ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: ಉಳ್ಳಾಲ: ಸಮುದ್ರಕ್ಕೆ ಹಾರಿ ಪಡೀಲು ನಿವಾಸಿ ಉದಯ್‌ ಕುಮಾರ್‌ ಆತ್ಮಹತ್ಯೆ!!

ಅಣ್ಣಾವ್ರಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತೆ ಅನ್ನೋ ವಿಚಾರ ಮುಖ್ಯಮಂತ್ರಿ ಎಸ್.ಎಂ ಕೃಷ್ಣಗಿತ್ತು. ಇಂಥಾ ಸಮಯದಲ್ಲಿ ಯಾರು ತಾನೇ ನೆಮ್ಮದಿಯಿಂದ ನಿದ್ರಿಸೋಕೆ ಸಾಧ್ಯ..? ಆದರೂ ನಾನಾ ಕಸರತ್ತುಗಳ ಮೂಲಕ ಎಸ್ ಎಂ ಕೃಷ್ಣ ಅವರು ಅಣ್ಣಾವ್ರನ್ನು ಮರಳಿ ನಾಡಿನ ಜನತೆಯ ಮಡಿಲಿಗೆ ಅರ್ಪಿಸಿದರು. ಆದರೆ ಈಗ ಎಸ್ಎಂ ಕೃಷ್ಣ ಅವರ ಸಾವಿನ ಬಳಿಕ ಈ ಅಪಹರಣದ ವಿಚಾರವಾಗಿ ಸುದ್ದಿಯೊಂದು ವೈರಲಾಗುತ್ತಿದೆ. ಅದೇನೆಂದರೆ ರಾಜಕುಮಾರ್ ಹಾಗೂ ಎಸ್ಎಮ್ ಕೃಷ್ಣ ನಡುವೆ ಒಂದು ಒಪ್ಪಂದವಾಗಿದ್ದು, ಆ ಒಪ್ಪಂದ ನೆರವೇರದೇ ಇದ್ದಾಗ ಅಣ್ಣಾವ್ರನ್ನು ವೀರಪ್ಪನ್ ಅಪಹರಿಸಿದ ಎಂಬುದಾಗಿ. ಹಾಗಿದ್ರೆ ಏನದು ಒಪ್ಪಂದ? ಅಂದು ನಡೆದಿದ್ದೇನು?.

ವರನಟ ಡಾ. ರಾಜ್​ಕುಮಾರ್ ಅವರು ಅಪಹರಣ ಆಗಿದ್ದು ಕೃಷ್ಣ ಅವರ ಅಧಿಕಾರ ಅವಧಿಯಲ್ಲೇ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರು ವರ್ಷವೇ ವೀರಪ್ಪನ್ ಕಡೆಯಿಂದ ಅಣ್ಣಾವ್ರು ಕಿಡ್ನ್ಯಾಪ್ ಆದರು. ವೀರಪ್ಪನ್ 108 ದಿನಗಳ ಕಾಲ ಅಣ್ಣಾವ್ರನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ. ಆ ದಿನಗಳ ಬಗ್ಗೆ ಈಗಲೂ ಚರ್ಚೆಗಳು ಆಗುತ್ತವೆ. ರಾಜ್​ಕುಮಾರ್ ಅವರಿಗೂ ಕರ್ನಾಟಕ ಸರ್ಕಾರಕ್ಕೂ ಒಂದು ಒಪ್ಪಂದ ಆಗಿತ್ತು. ಆದರೆ, ಇದನ್ನು ಅಣ್ಣಾವ್ರು ಮೀರಿದಾಗ ಎಡವಟ್ಟು ಸಂಭವಿಸಿತ್ತು.

ರಾಜ್​ಕುಮಾರ್ ಅವರಿಗೆ ವೀರಪ್ಪನ್ ಕಡೆಯಿಂದ ತೊಂದರೆ ಇದೆ ಎಂಬ ಸೂಚನೆ ರಾಜ್ಯ ಸರ್ಕಾರಕ್ಕೆ ಮೊದಲೇ ಇತ್ತು. ಈ ಕಾರಣದಿಂದಲೇ ರಾಜ್​ಕುಮಾರ್ ಜೊತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಗಾಜನೂರಿನ ಭಾಗಕ್ಕೆ ತೆರಳೋದಾದರೆ ರಾಜ್ಯ ಸರ್ಕಾರಕ್ಕೆ ಮೊದಲೇ ತಿಳಿಸಬೇಕು ಎಂದು ಹೇಳಿತ್ತು. ಇದಕ್ಕೆ ರಾಜ್​ಕುಮಾರ್ ಕೂಡ ಒಪ್ಪಿದ್ದರು. ಪ್ರತಿ ಬಾರಿಯೂ ಗಾಜನೂರಿಗೆ ತೆರಳುವಾಗ ರಾಜ್​ಕುಮಾರ್ ಅವರು ಸರ್ಕಾರಕ್ಕೆ ತಿಳಿಸುತ್ತಿದ್ದರು. ಆಗ ಅಣ್ಣಾವ್ರಿಗೆ ಸೂಕ್ತ ಪೊಲೀಸ್ ಬಧ್ರತೆಯನ್ನು ಸರ್ಕಾರ ಒದಗಿಸುತ್ತಿತ್ತು. ಆದರೆ, ಅಂದು ಮಾತ್ರ ಅವರು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ನೇರವಾಗಿ ಗಾಜನೂರಿಗೆ ತೆರಳಿದರು. ಈ ವೇಳೆ ವೀರಪ್ಪನ್​ ಕಡೆಯವರು ಬಂದು ರಾಜ್​ಕುಮಾರ್​ನ ಕರೆದುಕೊಂಡು ಹೋದರು. ಇದು ಸರ್ಕಾರಕ್ಕೆ ಹಾಗೂ ಅಣ್ಣಾವ್ರ ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು.

ಎಸ್.ಎಂ ಕೃಷ್ಣ – ತಮಿಳುನಾಡು ಸರ್ಕಾರದ ಜೊತೆಗೂಡಿ ಸಂಧಾನಕಾರರನ್ನು ಕಳುಹಿಸಿ, ರಾಜ್ ಬಿಡುಗಡೆಗೆ ಅವಿರತ ಪ್ರಯತ್ನ ಮಾಡ್ತಾ ಇದ್ರು. ನೆಡುಮಾರನ್ ಸಂಧಾನಕಾರನಾಗಿ ಎಂಟ್ರಿ ಕೊಟ್ಟ ಮೇಲೆ ತಕ್ಕ ಮಟ್ಟಿಗೆ ಸಂಧಾನ ಫಲಪೃದವಾಯ್ತು. ಮೊದಲ ಹಂತದಲ್ಲಿ ರಾಜ್​ಕುಮಾರ್ ಅಳಿಯ ಗೋವಿಂದರಾಜು ರಿಲೀಸ್ ಆದರು. ಗೋವಿಂದ್​ರಾಜುರನ್ನು ಕೂರಿಸಿಕೊಂಡು ಅಲ್ಲಿನ ಸಕಲ ವಿಷಯ ತಿಳಿದುಕೊಂಡು ಮುಂದಿನ ಹೆಜ್ಜೆ ಇಟ್ಟರು. ಎಸ್.ಎಂ ಕೃಷ್ಣ. ಒಂದು ಹಂತದಲ್ಲಿ ಕೇಂದ್ರ ಸರ್ಕಾರವೇ ವೀರಪ್ಪನ್ ಸಹಚರರ ಬಿಡುಗಡೆಗೆ ಒಪ್ಪಿಗೆ ಕೊಟ್ಟರು, ಕೋರ್ಟ್ ಇದಕ್ಕೆ ಅವಕಾಶ ಕೊಡಲಿಲ್ಲ. ಅರಣ್ಯದಲ್ಲಿದ್ದ ಡಾ.ರಾಜ್​ಕುಮಾರ್ ಆರೋಗ್ಯ ಕೂಡ ಹದಗೆಡ್ತಾ ಇದೆ ಅನ್ನೋ ಸುದ್ದಿ ಮತ್ತಷ್ಟು ಆತಂಕ ಸೃಷ್ಟಿಮಾಡ್ತಾ ಇತ್ತು. ಆ ಹಂತದಲ್ಲೇ ಹಲವಾರು ರಹಸ್ಯ ಮಾತುಕಥೆಗಳನ್ನು ಮಾಡಿ, ಕೊನೆಗೂ ಅಣ್ಣಾವ್ರ ರಿಲೀಸ್​ಗೆ ಕೃಷ್ಣ ಒಂದು ವ್ಯೂಹವನ್ನ ರೂಪಿಸಿದ್ರು.

ಅಂದಹಾಗೆ ಡಾ.ರಾಜ್​ಕುಮಾರ್ ಅವರನ್ನು ಅಪಹರಣ ಮಾಡಿದ್ದ ವೀರಪ್ಪನ್ ಅಂದಿನ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದ. ಅದರಲ್ಲಿ ಹಣವೂ ಸೇರಿತ್ತು. ಆದರೆ, ಈ ಕುರಿತು ಎಲ್ಲಿಯೂ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬರೆದಿರುವ ‘ಸ್ಮೃತಿವಾಹಿನಿ’ ಎಂಬ ಆತ್ಮಕಥೆಯಲ್ಲಿ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ.

Leave a Reply

Your email address will not be published. Required fields are marked *