Fri. Dec 27th, 2024

Puttur: ಸರ್ಕಾರಿ ಆಸ್ಪತ್ರೆಯ ವೈದ್ಯೆಯ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ – ಠಾಣೆಗೆ ದೂರು..!!!! – ಅಷ್ಟಕ್ಕೂ ಆ ವೀಡಿಯೋದಲ್ಲಿ ಇದ್ದದ್ದೇನು?!

ಪುತ್ತೂರು:(ಡಿ.13) ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯೊರ್ವರಿಗೆ ಕರ್ತವ್ಯಕ್ಕೆ ತೊಂದರೆ ನೀಡಿ ವಿಡಿಯೋ ಮಾಡಿ ಶೇರ್ ಮಾಡಿದ ವ್ಯಕ್ತಿಗಳ ವಿರುದ್ಧ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

ಇದನ್ನೂ ಓದಿ: Daily Horoscope: ಮಿಥುನ ರಾಶಿಯವರನ್ನು ಸಹೋದ್ಯೋಗಿಗಳು ಟೀಕಿಸಬಹುದು!!!

ಮರಣೋತ್ತರ ಪರೀಕ್ಷೆಗೆ ಬಂದಿದ್ದ ಮೃತದೇಹ ವನ್ನು ವಿಳಂಬವಾಗಿ ಪರೀಕ್ಷೆ ಮಾಡಲು ವೈದ್ಯರು ಬಂದಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯೋರ್ವರನ್ನು ತರಾಟೆಗೆ ತೆಗೆದು ಅದನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಈ ಬಗ್ಗೆ ವೈದ್ಯೆ ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ ಮತ್ತು ಹಿರಿಯ ವೈದ್ಯೆ ಆಶಾ ಜೊತೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *