Fri. Dec 27th, 2024

Puduvettu: ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪಾಸ್ – ಅಧಿಕಾರ‌ ಕಳೆದುಕೊಂಡ ಅಧ್ಯಕ್ಷೆ ಅನಿತಾ

ಪುದುವೆಟ್ಟು:(ಡಿ.13) ಪುದುವೆಟ್ಟು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಅನಿತಾ ಕುಮಾರಿ ರವರ ವಿರುದ್ಧ ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿಯಾಗಿದ್ದು, ಅಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದಾರೆ. ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರ ಆಡಳಿತವಿದ್ದು, ಅಧ್ಯಕ್ಷರಾಗಿ ಅನಿತಾ ಕುಮಾರಿ ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಮಾಲಾಡಿ: ನಿಲ್ಲಿಸಿದ್ದ ಪಿಕಪ್ ವಾಹನ ಕಳ್ಳತನ


ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಬೆಳವಣಿಗೆಯಲ್ಲಿ ಅಧ್ಯಕ್ಷರ ವಿರುದ್ಧ ಅವರದೇ ಪಕ್ಷ ಬೆಂಬಲಿತ ಸದಸ್ಯರು ಅಸಮಾಧಾನಗೊಂಡು, ಅಧ್ಯಕ್ಷರ ಪದಚ್ಯುತಿಗೆ ನ. 20 ರಂದು ಪುತ್ತೂರು ಎ. ಸಿ ಯವರಿಗೆ ಅವಿಶ್ವಾಸ ಸೂಚನಾ ಪತ್ರ ಸಲ್ಲಿಸಿದ್ದರು.

ಡಿ. 12 ರಂದು ಬೆಳಿಗ್ಗೆ ಪುತ್ತೂರು ಸಹಾಯಕ ಕಮೀಷನರ್ ಉಪಸ್ಥಿತಿಯಲ್ಲಿ ಅವಿಶ್ವಾಸ ಸೂಚನೆ ನಿರ್ಣಯ ಸಭೆ ನಡೆಯಿತು. ಅಧ್ಯಕ್ಷರ ವಿರುದ್ಧ 7 ಮಂದಿ ಹಾಗೂ ಅಧ್ಯಕ್ಷರ ಪರ ಒಬ್ಬರು ಕೈ ಎತ್ತಿ ಬೆಂಬಲ ಸೂಚಿಸಿದರು. ಇದರಿಂದಾಗಿ ಅವಿಶ್ವಾಸ ನಿರ್ಣಯ ಮಂಜೂರಾಗಿದ್ದು, ಅವರು ಅಧಿಕಾರ ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *