Thu. Dec 26th, 2024

Bantwal: ಎಸ್.ಡಿ.ಪಿ.ಐ.ಮತ್ತು ಕಾಂಗ್ರೆಸ್ ನಡುವೆ ಮಾರಾಮಾರಿ – ಗರ್ಭಿಣಿ ಮಹಿಳೆ ಇರೋ ಮನೆಗೆ ನುಗ್ಗಿ ಹಲ್ಲೆ ಹಾಗೂ ಅಪ್ರಾಪ್ತ ಬಾಲಕಿಗೆ ಕಿರುಕುಳ – ಪ್ರಕರಣ ದಾಖಲು!! ಗಲಾಟೆಯ ವಿಡಿಯೋ ಸಿ.ಸಿ.ಕ್ಯಾಮರಾದಲ್ಲಿ ಸೆರೆ!!!

ಬಂಟ್ವಾಳ:(ಡಿ.14) ವೈಯಕ್ತಿಕ ವಿಚಾರದಲ್ಲಿ ನಡೆದ ಗಲಾಟೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಎಸ್.ಡಿ.ಪಿ.ಐ.ಮತ್ತು ಕಾಂಗ್ರೆಸ್ ನಾಯಕರುಗಳ ನಡುವೆ ವಿಷದ ಬೀಜ ಬಿತ್ತಿದೆ.

ಇದನ್ನೂ ಓದಿ: ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ.) ಇದರ ವತಿಯಿಂದ ಆರ್ಥಿಕ ನೆರವು


ಬಾಡಿಗೆ ಕೊಡುವ ವಿಚಾರದಲ್ಲಿ ಎರಡು ತಂಡಗಳ ನಡುವೆ ಬಿಸಿರೋಡಿನ ಕೈಕಂಬ ಸಮೀಪದ ಪರ್ಲಿಯಾ ಎಂಬಲ್ಲಿ ಗಲಾಟೆ ನಡೆದಿದ್ದು, ದರೋಡೆ, ಅಪ್ರಾಪ್ತ ಬಾಲಕಿಗೆ ದೌರ್ಜನ್ಯ ಕೊಲೆ ಬೆದರಿಕೆ ಕುರಿತಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರಿಗೆ ಪ್ರತಿ ದೂರು ದಾಖಲಾಗಿದೆ.

ಮನೆಯ ಅಂಗಳದಲ್ಲಿ ಎರಡು ತಂಡಗಳ ನಡುವೆ ಗಲಾಟೆಯ ವಿಡಿಯೋ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು,ಇದೀಗ ಸಮಾಜಿಕ ಜಾಲತಾಣದ ಮೂಲಕ ಸಖತ್ ವೈರಲ್ ಆಗಿದೆ.


ವೈಯಕ್ತಿಕ ವಿಚಾರದಲ್ಲಿ ಆರಂಭವಾದ ಗಲಾಟೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಎಸ್.ಡಿ.ಪಿ.ಐ.ಮತ್ತು ಕಾಂಗ್ರೆಸ್ ಪಕ್ಷದ ಅಂಗಳದಲ್ಲಿ ಮಾತಿನ ಫೈರಿಂಗ್ ಆರಂಭವಾಗಿದೆ.


ಈಗಾಗಲೇ ಪ್ರಕರಣದ ಕುರಿತಂತೆ ಎಸ್.ಡಿ.ಪಿ.ರಾಜ್ಯಾಧ್ಯಕ್ಷ ಮಂಗಳೂರಿಗೆ ಆಗಮಿಸಿದ ಘಟನೆಯಲ್ಲಿ ಗಾಯವಾಗಿರುವ ಆರೋಪಿಗಳನ್ನು ಭೇಟಿಯಾಗಿ ಆರೋಗ್ಯ ‌ವಿಚಾರಿಸಿದ್ದಲ್ಲದೆ, ಕಾಂಗ್ರೆಸ್ ವಿರುಧ್ದ ಮತ್ತು ಗಾಂಜಾ ಕುರಿತಾಗಿ ಹೇಳಿಕೆಯನ್ನು ನೀಡಿದ್ದಾರೆ.

ಘಟನೆಯ ಸುತ್ತಾ ಏನಿದೆ?
‌ಆರೋಪಿಗಳಾದ ಹಸೈನಾರ್ ತಾಳಿಪಡ್ಪು, ರಫೀಕ್ ತಪಟ್ಟಿ ಬಂಟ್ವಾಳ , ಜಸೀಲ್ ತಲಪಾಡಿ, ಅಫೀಝ್ ತಲಪಾಡಿ ,.ರಿಯಾಜ್ ಕುಮೇರು ,ಶಮೀರ್ ಚಮ್ಮಿ , ನೌಫಾಲ್ ಮಾರಿಪಲ್ಲ ,ನೌಫಾಲ್ ತಂದೆ:ಬಸೀರ್ ಬಲ್ಬು ,ತುಫೈಲ್ ಬಂದರ್ ,.ಸಮದ್ ತಾಳಿಪಡ್ಪು ಹಾಗೂ ಅಪರಿಚಿತರು 15 ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಶಸ್ತ್ರಾಸ್ತ್ರ ಗಳೊಂದಿಗೆ ಶಾಹುಲ್ ಹಮೀದ್ ಅವರ ಮನೆಗೆ ನುಗ್ಗಿ ಗರ್ಭಿಣಿ ಮೇಲೆ ಹಲ್ಲೆ ಹಾಗೂ ಅಪ್ರಾಪ್ತ ಬಾಲಕಿಗೆ ಕಿರುಕುಳ ‌ನೀಡಿದ್ದಲ್ಲದೆ, ಶಾಹುಲ್ ಹಮೀದ್ ಅವರ ಪತ್ನಿ, ಮಕ್ಕಳಾದ ಸಮೀರ್, ಶಫೀಕ್, ಸಫ್ವಾನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.


ಮನೆಯಲ್ಲಿದ್ದ ಶಾಹುಲ್ ಹಮೀದ್ ಅವರ ಮಗಳಾದ ಗರ್ಭಿಣಿ ಶಬೀರಳನ್ನು ದೂಡಿ ಹಾಕಿ,ಹೊಟ್ಟೆಗೆ ಹಲ್ಲೆ ಮಾಡಿದ್ದಲ್ಲದೆ ಮತ್ತೊಬ್ಬಳು ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ್ದಲ್ಲದೆ ಕುತ್ತಿಗೆಯಲ್ಲಿದ್ದ ಎರಡು ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೋಗಿದ್ದಾರೆ. ಜೊತೆಗೆ ಶಾಹುಲ್ ಅವರ ಪತ್ನಿಗೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಅಪ್ರಾಪ್ತ ಬಾಲಕಿಮೇಲೆ ದೌರ್ಜನ್ಯ ವೆಸಗಿದ ಗ್ಯಾಂಗ್ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಾಗೂ ಟೇಬಲ್ ಮೇಲಿದ್ದ ರೂ 30 ಸಾವಿರ ಹಣವನ್ನು ದರೋಡೆ ಮಾಡಿದ್ದಾರೆ ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹಮ್ಮದ್ ಇರ್ಫಾನ್ ಎಂಬಾತ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.


ಎಸ್ .ಎಚ್. ಶಾಹುಲ್ , ಸಮೀರ್, ಸಫ್ವಾನ್, ಶಫೀಕ್ ಎಂಬ ಆರೋಪಿಗಳು ಮಹಮ್ಮದ್ ಇರ್ಫಾನ್ , ಮೊಹಮ್ಮದ್ ಅಲ್ಮಸ್, ಮೊಹಮ್ಮದ್ ರಫೀಕ್, ಹಸೈನಾರ್ ಎಂಬವರ ಮೇಲೆ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಲ್ಲದೆ ರೂ.5 ಸಾವಿರವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ.


ಬಾಡಿಗೆ ಹಣ ಕೊಡುವ ವಿಚಾರದಲ್ಲಿ ತೊಂದರೆ ಕೊಡುತ್ತಿರುವ ವಿಚಾರವನ್ನು ಮಾತನಾಡುವ ಬಗ್ಗೆ ಕರೆದ ತಂಡ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಲ್ಲದೆ ಕೊಲ್ಲುವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *