Thu. Dec 26th, 2024

Bible: ಕ್ರಿಸ್ ಮಸ್ ಉಡುಗೊರೆ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೈಬಲ್‌ ಹಂಚಿದ ಶಿಕ್ಷಕ – ಶಿಕ್ಷಕ ಸಸ್ಪೆಂಡ್!!

Bible:(ಡಿ.14) ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಕ್ರಿಸ್ ಮಸ್ ಉಡುಗೊರೆಯ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೈಬಲ್‌ ಹಂಚಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬೈಬಲ್ ಹಂಚಿದ್ದು ತಿಳಿದ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯರು ಶಿಕ್ಷಕರಿಗೆ ದೂರು ನೀಡಿದ್ದ ಬೆನ್ನಲ್ಲೇ ಈ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಕೋಲಾರ: ಅವನಲ್ಲ ಅವಳಾಗಿ ಬದಲಾಗಿ ಒಂದು ವರ್ಷ ತುಂಬುವ ಮುನ್ನವೇ ದುರಂತ ಅಂತ್ಯ ಕಂಡ ಮಂಗಳಮುಖಿ!!!

ಎಲ್ಲರೆಡ್ಡಿಪೇಟೆ ಮಂಡಲದ ನಾರಾಯಣಪುರದ ಸರ್ಕಾರಿ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ఇంಗ್ಲಿಷ್ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಲಿಂಗರಾಜು, ಕ್ರಿಸ್‌ಮಸ್‌ ಉಡುಗೊರೆ ಹೆಸರಿನಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಉಡುಗೊರೆ ವಿತರಿಸಿದ್ದಾನೆ. ಉಡುಗೊರೆ ಪ್ಯಾಕ್‌ನಲ್ಲಿ ಆಟಿಕೆಗಳು, ಬಿಸ್ಕತ್ತುಗಳು, ಚಾಕೊಲೇಟ್ಗಳು, ಪೆನ್ ಮತ್ತು ಬೈಬಲ್ ಒಳಗೊಂಡಿತ್ತು ಎನ್ನಲಾಗಿದೆ.

ಈ ವಿಷಯ ತಿಳಿದ ಸ್ಥಳೀಯರು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಂದ ಗಿಫ್ಟ್ ಪ್ಯಾಕ್ ಗಳನ್ನು ವಶಪಡಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರು ಮಂಡಲ ವಿದ್ಯಾಧಿಕಾರಿಗೆ ವಿಡಿಯೋ ಹಾಗೂ ಫೋಟೋ ಸಮೇತ ದೂರು ನೀಡಿದ್ದಾರೆ. ಶಿಕ್ಷಕರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಥಳೀಯರಿಗೆ ತಿಳಿಸಿದರು. ಮಾಹಿತಿ ಪಡೆದ ಎಂಇಒ ಕೃಷ್ಣಹರಿ, ಎಸ್‌ಎಸ್‌ಐ ರಮಾಕಾಂತ್ ಶಾಲೆಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.‌

ಪೊಲೀಸರು ಸ್ಥಳಕ್ಕೆ ಬಂದು ಗಿಫ್ಟ್ ಪ್ಯಾಕ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಶಿಕ್ಷಕ ರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಜಗನ್ ಮೋಹನ್ ರೆಡ್ಡಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *