ಸಾವ್ಯ:(ಡಿ.14) ಆಕಸ್ಮಿಕವಾಗಿ ಕುಸಿದು ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸಾವ್ಯದಲ್ಲಿ ನಡೆದಿದೆ.
ಇದನ್ನೂ ಓದಿ: Drone Prathap: ಸೋಡಿಯಂ ಎಸೆದು ಬ್ಲಾಸ್ಟ್ ಮಾಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಪ್ರತಾಪ್!!!?
ಮೃತಪಟ್ಟ ವ್ಯಕ್ತಿ ನಾಗೇಶ್ ಆಚಾರಿ(37ವ)
ಏನಿದು ಘಟನೆ?
ಶ್ರೀಮತಿ ಜಯಶ್ರೀ ಯವರ ದೂರಿನಂತೆ ಮೃತವ್ಯಕ್ತಿ ನಾಗೇಶ ಆಚಾರಿ ಯವರು ವಿಪರೀತ ಮದ್ಯಸೇವನೆಯ ಅಭ್ಯಾಸ ಹೊಂದಿದ್ದರು. ಅವರು ಸರಿಯಾಗಿ ಆಹಾರ ಸೇವಿಸದೆ ನಿಶ್ಯಕ್ತಿಯಿಂದ ಬಳಲುತ್ತಿದ್ದು, ವಿಪರೀತ ವಾಂತಿ ಮಾಡಿಕೊಂಡು, ರಕ್ತದೊತ್ತಡ ಕಡಿಮೆಯಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು.
ಡಿ. 13 ರಂದು ತನ್ನ ಮನೆಯಂಗಳದಲ್ಲಿ ಒಮ್ಮೆಲೆ ಕುಸಿದುಬಿದ್ದು , ಪ್ರಜ್ಞಾಹೀನರಾದವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ , ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.