Sat. Dec 28th, 2024

Bandaru : (ಡಿ.15) (ನಾಳೆ) ಶಿವ ಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ – ಬಂದಾರು ಆಶ್ರಯದಲ್ಲಿ 9 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಮುಕ್ತ ಮಹಿಳೆಯರ ತ್ರೋಬಾಲ್ ಮತ್ತು ಪುರುಷರ ಮತ್ತು ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ

ಬಂದಾರು :(ಡಿ.14) ಶಿವ ಫ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ – ಬಂದಾರು ಇದರ ಆಶ್ರಯದಲ್ಲಿ 9 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಮುಕ್ತ ಮಹಿಳೆಯರ ತ್ರೋಬಾಲ್ ಮತ್ತು ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಹಾಗೂ ನಾಳೆ 15 ಡಿಸೆಂಬರ್ 2024 ರಂದು ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗ – ಮೈರೋಳ್ತಡ್ಕ ದಲ್ಲಿ ಸಂಜೆ 4.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ಉಜಿರೆ: ವಿರಾಟ್ ಪದ್ಮನಾಭ ವಿರಚಿತ ಬೆಟ್ಟದ ಹೂವು ಕೃತಿಯ ರಕ್ಷಾಪುಟ ಅನಾವರಣ

ಕುರಾಯ ಶಿವ ಫ್ರೆಂಡ್ಸ್ ಅಧ್ಯಕ್ಷರಾದ ಸುಂದರ ಗೌಡ ಖಂಡಿಗ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ರಕ್ಷಿತ್ ಪಣೆಕ್ಕರ ಅಧ್ಯಕ್ಷರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಪದ್ಮುಂಜ, ಕಿರಣ್ ಚಂದ್ರ ಡಿ ಪುಷ್ಪಗಿರಿ ಉದ್ಯಮಿಗಳು ಬೆಂಗಳೂರು, ರಘುಪತಿ ಭಟ್ ಅನಾಬೆ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪದ್ಮುಂಜ,

ದಿನೇಶ್ ಗೌಡ ಖಂಡಿಗ ಅಧ್ಯಕ್ಷರು ಗ್ರಾಮ ಪಂಚಾಯತ್ ಬಂದಾರು, ಸುಚಿತ್ರ ಮುರ್ತಾಜೆ ಸದಸ್ಯರು ಗ್ರಾಮ ಪಂಚಾಯತ್ ಬಂದಾರು, ಪರಮೇಶ್ವರಿ ಕೆ ಗೌಡ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಗ್ರಾಮ ಪಂಚಾಯತ್ ಬಂದಾರು, ಸಂದೀಪ್ ಎಂ ಮಿತ್ತೂರು ಮೆಸ್ಕಾಂ ಇಲಾಖೆ ಮಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕು. ಕುಸುಮ ಎಂ ಎಸ್ ನೆರೋಲ್ದಪಲ್ಕೆ -ಪೆರ್ಲ ಬೈಪಾಡಿ. – ಯುವ ಗಾಯಕಿ, ಚಂದ್ರಹಾಸ ಕುಂಬಾರ ಶ್ರೀರಾಮನಗರ ಬಂದಾರು – ಯುವ ಕವಿ, ಕು. ತೇಜಸ್ವಿನಿ ಪೂಜಾರಿ ಬೊಲ್ಜೆ – ಬಂದಾರು.


ಸೀನಿಯರ್ & ಜೂನಿಯರ್ ವಿಭಾಗದಲ್ಲಿ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಚಿನ್ನದ ಪದಕ ವಿಜೇತೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *