ಮಚ್ಚಿನ:(ಡಿ.16) ಮಚ್ಚಿನ ಸಿ.ಎ. ಬ್ಯಾಂಕ್ ನ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವಧಿಗೆ ಡಿ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲ 12 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಇದನ್ನೂ ಓದಿ: ಬಂದಾರು: ಶಿವ ಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ – ಬಂದಾರು ಆಶ್ರಯದಲ್ಲಿ
ಸತತ ನಾಲ್ಕನೇ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಸಾಮಾನ್ಯ ಕ್ಷೇತ್ರದಿಂದ ಉಮೇಶ, ಚಿತ್ತರಂಜನ್, ಜಯರಾಮ,
ಪದ್ಮನಾಭ ಸಾಲಿಯಾನ್ ವಡ್ಡ, ಮೋಹನ್ ಗೌಡ, ಕೆ.ಶ್ರೀಧರ್ ಪೂಜಾರಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ತುಂಗಪ್ಪ ಯಾನೆ ಶ್ರೀಧರ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಗಣೇಶ್ ಅರ್ಕಜೆ,
ಮಹಿಳಾ ಕ್ಷೇತ್ರದಿಂದ ಬೇಬಿ, ಸುಜಾತ ಪಿ. ಸಾಲ್ಯಾನ್, ಪ. ಪಂಗಡ ಕ್ಷೇತ್ರದಿಂದ ರಾಜೇಶ್ ನಾಯ್ಕ, ಪ. ಜಾತಿ ಕ್ಷೇತ್ರದಿಂದ ಆನಂದ ಗೆಲುವನ್ನು ಪಡೆದಿದ್ದಾರೆ.