Sat. Dec 28th, 2024

Bore well: ಬೋರ್ ವೆಲ್ ಹಾಕಿಸುವವರಿಗೆ ರಾಜ್ಯ ಸರ್ಕಾರದಿಂದ ಖಡಕ್‌ ಸೂಚನೆ – ಪಾಲಿಸದಿದ್ದರೆ ಜೈಲು ಫಿಕ್ಸ್?!!

Bore well:(ಡಿ.18) ಬೋರ್ ವೆಲ್ ಹಾಕಿಸುವವರಿಗೆ ರಾಜ್ಯ ಸರ್ಕಾರವು ಹೊಸ ರೂಲ್ಸ್ ಇದು ಕರ್ನಾಟಕದಾದ್ಯಂತ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಒಂದು ವೇಳೆ ಈ ನಿಯಮವನ್ನೇನಾದರೂ ಪಾಲಿಸದಿದ್ದರೆ ಜೈಲುವಾಸ ಕೂಡ ಫಿಕ್ಸ್ ಎನ್ನಲಾಗಿದೆ.

ಇದನ್ನೂ ಓದಿ: ಬಂಟ್ವಾಳ: ಉಲಾಯಿ-ಪಿದಾಯಿ ಆಟ – ಪೋಲೀಸ್‌ ದಾಳಿ

ಬೋರ್ವೆಲ್ ಹಾಕಿಸುವ ಕುರಿತು ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಇದಕ್ಕಾಗಿ ಕರ್ನಾಟಕ ಅಂತರ್ಜಲ (ತಿದ್ದುಪಡಿ) ಮಸೂದೆ-2024 ಅನ್ನು ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಅದೇನೆಂದರೆ ಇನ್ನು ಮುಂದೆ ಕೊರೆಸಿದ ಬೋರ್‌ವೆಲ್‌ಗಳನ್ನು ಮುಚ್ಚದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಜೈಲಿಗೂ ಕಳಿಸುವ ಸಾಧ್ಯತೆಗಳಿವೆ.

ಇತ್ತೀಚೆಗೆ ತೆರೆದ ಬೋರ್‌ವೆಲ್‌ಗಳಲ್ಲಿ ಮಕ್ಕಳು ಸಿಲುಕಿ ಅನಾಹುತಗಳು ಸಂಭವಿಸಿದ ಪ್ರಕರಣಗಳು ಹೆಚ್ಚಾದ ಕಾರಣ ಕೆಲ ನಿಯಮಗಳನ್ನು ಜಾರಿ ಮಾಡಿದೆ. ಅದರಂತೆ ಕೊಳವೆಬಾವಿಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇದ್ದರೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 25,000 ರೂಪಾಯಿವರೆಗೆ ದಂಡ ಕೂಡ ವಿಧಿಸಲಾಗುವುದು.


ಈ ಮಸೂದೆ ಹೇಳುವಂತೆ ಬೋರ್‌ವೆಲ್‌ಗಳನ್ನು ಕೊರೆಯುವವರು ಸಕ್ಷಮ ಪ್ರಾಧಿಕಾರಗಳಿಗೆ 15 ದಿನಗಳ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಇದಕ್ಕೆ ಒಪ್ಪಿಗೆ ಪಡೆಯುವುದು ಕೂಡ ಕಡ್ಡಾಯ. ಒಂದು ವೇಳೆ ಫೇಲ್ಯೂರ್‌ ಆದ ಬೋರ್‌ವೆಲ್‌ಗಳನ್ನು ತಕ್ಷಣವೇ ಭದ್ರವಾಗಿ ಮುಚ್ಚಬೇಕು. ಈ ಮಾಹಿತಿಯನ್ನೂ ಪ್ರಾಧಿಕಾರಕ್ಕೆ ನೀಡಬೇಕು ಎಂದು ಹೇಳಿದೆ. ಅಷ್ಟೇ ಅಲ್ಲದೆ ಬೋರ್‌ವೆಲ್‌ ಹಾಕಿಸುವ ಮಾಲೀಕರು ಹಾಗೂ ಬೋರ್‌ವೆಲ್‌ ಕೊರೆಯುವ ಏಜೆನ್ಸಿಯವರಿಗೆ ಈ ನಿಯಮಗಳು ಅನ್ವಯವಾಗಲಿವೆ.

Leave a Reply

Your email address will not be published. Required fields are marked *