Fri. Apr 18th, 2025

Gujarath : ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ರಾಡ್ ಚುಚ್ಚಿ ವಿಕೃತಿ ಮೆರೆದ ಕಾಮುಕ.. !!

Gujarath :(ಡಿ.19) ದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿತ್ತು. ಇದು ಎಂದೆಂದಿಗೂ ಮಾಸದೆ ಉಳಿಯುವಂತಹ ಪ್ರಕರಣ ಎಂದು ಕೂಡ ಸುದ್ದಿಯಾಗಿತ್ತು. ಆದರೆ ಈಗ ಅಂತಹದ್ದೇ ಒಂದು ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ P0C ದರ್ಜೆ ನೀಡುವಂತೆ ಮನವಿ ಮಾಡಿದ ಕ್ಯಾ.ಚೌಟ

ಗುಜರಾತಿನ ಭರೂಚ್ನಲ್ಲಿ 10 ವರ್ಷದ ಬಾಲಕಿಯನ್ನು ಆಕೆಯ ಮನೆಯ ಬಳಿ ಅಪಹರಿಸಿ 36 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೆ ಆಕೆಯ ಗುಪ್ತಾಂಗಕ್ಕೆ ರಾಡ್ ಅನ್ನು ಕೂಡ ತುರುಕಿ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಜಾರ್ಖಂಡ್ ಮೂಲದವನಾಗಿದ್ದು, ಈಗ ಆತನನ್ನು ಬಂಧಿಸಲಾಗಿದೆ.

ಆರೋಪಿಯು ಬಾಲಕಿಯ ಗುಡಿಸಲಿನ ಪಕ್ಕದಲ್ಲಿ ವಾಸಿಸುತ್ತಿದ್ದು, ಆಕೆಯ ತಂದೆಯಂತೆಯೇ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಚಾವ್ಡಾ ಮಾತನಾಡಿ, ವಿಜಯ್ ಪಾಸ್ವಾನ್ ಎಂಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಆಕೆಯ ಖಾಸಗಿ ಭಾಗಗಳಿಗೆ ಕಬ್ಬಿಣದ ರಾಡ್ ಅನ್ನು ಸೇರಿಸಿದ್ದಾನೆ.

Leave a Reply

Your email address will not be published. Required fields are marked *