ಬೆಳ್ತಂಗಡಿ:(ಡಿ.20) ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓಡಿಲ್ನಾಳ ನಿವಾಸಿ ಯುವಕ ಸಾವನ್ನಪ್ಪಿದ ಘಟನೆ ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದಲ್ಲಿ ನಡೆದಿದೆ.
ಇದನ್ನೂ ಓದಿ: Daily Horoscope: ಉದ್ಯೋಗ ಸ್ಥಳದಲ್ಲಿ ಕುಂಭ ರಾಶಿಯವರಿಗೆ ಶತ್ರುಗಳ ಕಾಟ!!!
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಕುಂದಲಿಕೆ ನಿವಾಸಿ ಶಾಜಿ ಎಂಬವರ ಪುತ್ರ ಸಜೇಶ್ (26) ಅವರೇ ಮೃತ ವ್ಯಕ್ತಿಯಾಗಿದ್ದಾರೆ. ಎನ್. ಆರ್. ಪುರ ಬಳಿ ಅಲ್ಯೂಮಿನಿಯಂ ಪ್ಯಾಭ್ರಿಕೇಶನ್ ಕೆಲಸಕ್ಕೆ ಇವರು ತೆರಳಿದ್ದರು,
ಗುರುವಾರ ಮಧ್ಯಾಹ್ನ ಕೆಲಸದಿಂದ ಊಟಕ್ಕೆಂದು ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.