ಬೆಳ್ತಂಗಡಿ:(ಡಿ.20) ಬಂಟ್ವಾಳ ತಾಲೂಕಿನ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ವತಿಯಿಂದ ನೀಡುವ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ” ಗೆ ಶ್ರೀಮತಿ ಹೇಮಾವತಿ ಹೆಗ್ಗಡೆಯವರನ್ನು ಆಯ್ಕೆ ಮಾಡಲಾಗಿದ್ದು,


ಪ್ರಶಸ್ತಿ ಯನ್ನು ಸಮಿತಿಯ ಸದಸ್ಯರು ಶ್ರೀಮತಿ ಹೇಮಾವತಿ ಹೆಗ್ಗಡೆಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ಭೇಟಿ ಮಾಡಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಮುಖ್ಯಸ್ಥೆ ಪ್ರತಿಷ್ಟಿತ ಕರ್ನಾಟಕ ಸರಕಾರ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಪ್ರಶಸ್ತಿ ಪುರಸ್ಕೃತೆ, ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್,


ಸಮಿತಿಯ ಸದಸ್ಯರುಗಳಾದ ಜಯಂತಿ, ಇಂದಿರಾ ಗೋಪಾಲ್, ಭಾರತಿ, ಮಲ್ಲಿಕಾ ಕಲ್ಲಡ್ಕ, ಹಿರಿಯ ಸಮಾಜಸೇವಕರಾದ ಭುಜಬಲಿ ಮೊದಲಾದವರು ಉಪಸ್ಥಿತರಿದ್ದರು.
