Sat. Dec 28th, 2024

Surathkal: ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳಿಂದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ.!!

ಸುರತ್ಕಲ್ :(ಡಿ.21) ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕ, ಚಾಲಕ ಹಾಗೂ ಒಬ್ಬ ಪ್ರಯಾಣಿಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಕುಳಾಯಿಯಲ್ಲಿ ಡಿ.21ರ ಬೆಳಗ್ಗೆ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ: ಮಹಿಳಾ ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ನೇಮಕ

ರಾಜಲಕ್ಷ್ಮೀ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಜಯರಾಮ್ ಆಚಾರ್ಯ, ಪ್ರಾಹ್ಲಾದ್ ಆಚಾರ್ಯ ಹಾಗೂ ಪ್ರಸಾದ್ ಎಂಬ ಮೂವರು ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ರಾಜಲಕ್ಷ್ಮೀ ಬಸ್ ಚಾಲಕ ಹಾಗೂ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದ ಈ ಆರೋಪಿಗಳು ಸಂಘಟನೆಯ ಪ್ರಮುಖರು ಎಂದು ತಿಳಿದುಬಂದಿದೆ.

ಕುಳಾಯಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಈ ಮೂವರು ದುಷ್ಕರ್ಮಿಗಳು ಗಲಾಟೆ ನಡೆಸಿದ್ದಾರೆ. ಜೊತೆಗೆ ಬೇರೆ ಬಸ್ ಗಳನ್ನು ತಡೆದು ಅವಾಚ್ಯವಾಗಿ ಬೈದು ತೊಂದರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *